ಉಡುಪಿಯಲ್ಲಿ ಶುಭಾರಂಭಗೊಂಡಿತು ಪವರ್ ಟ್ರೋನಿಕ್ ಸಿಸ್ಟಂ, ಸೋಲಾರ್ ಹಾಗೂ ಯುಪಿಎಸ್ ಸೊಲ್ಯುಷನ್: ಇಲ್ಲಿದೆ ಯುಪಿಎಸ್, ಸೋಲಾರ್ ಉಪಕರಣಗಳ ಅಪಾರ ಸಂಗ್ರಹ

ಉಡುಪಿ: ಕಳೆದ ಮುವ್ವತ್ತು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ಆರಂಭಗೊಂಡು ಹೆಸರುವಾಸಿಯಾಗಿರುವ ಮಹತಿ ಎಂಟರ್ ಪ್ರೈಸಸ್ ನವರ ಪವರ್ ಟ್ರೋನಿಕ್ ಸಿಸ್ಟಂ, ಸೋಲಾರ್ ಹಾಗೂ ಯುಪಿಎಸ್ ಸೊಲ್ಯುಷನ್ ಸಂಸ್ಥೆಯ ನೂತನ ಶಾಖಾ ಕಚೇರಿ ಉಡುಪಿಯ ಕಿನ್ನಿ ಮೂಲ್ಕಿ ಸ್ವಾಗತಗೋಪುರ ಬಳಿಯ ವಾಸುದೇವ್ ಬಿಲ್ಡಿಂಗ್ ನಲ್ಲಿ ಶುಭಾರಂಭಗೊಂಡಿತು. ಪೇಜಾವರ ಮಠದ ವಿಶ್ವಪ್ರಸನ್ನ ಶ್ರೀಗಳು ನೂತನವಾಗಿ ಆರಂಭಗೊಂಡ ಸಂಸ್ಥೆಗೆ ಶುಭ ಹಾರೈಸಿ ಮಾತನಾಡಿದರು.ಉದ್ಘಾಟನಾ ಕಾರ್ಯಕ್ರಮದಲ್ಲಿ ಉಡುಪಿಯ ಶಾಸಕರಾದ ಯಶ್ ಪಾಲ್ ಸುವರ್ಣ, ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ ಇನ್ನಿತರ ಗಣ್ಯರು ಉಪಸ್ಥಿತರಿದ್ದು ಸಂಸ್ಥೆಗೆ […]

ಉಡುಪಿ:ಮಹನೀಯರುಗಳ ತತ್ವ, ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತುತ : ಶಾಸಕ ಯಶ್‌ಪಾಲ್ ಎ ಸುವರ್ಣ

ಉಡುಪಿ: ಪ್ರತಿಯೊಂದು ಸಮುದಾಯವನ್ನು ಗೌರವಿಸಿ, ಆದರ್ಶ ವ್ಯಕ್ತಿಗಳ ತತ್ವಗಳನ್ನು ಮುಂದಿನ ಪೀಳಿಗೆಗೆಗೊತ್ತುಪಡಿಸುವ ನಿಟ್ಟಿನಲ್ಲಿ ಸರ್ಕಾರ ಜಯಂತಿಗಳನ್ನು ಆಚರಿಸುತ್ತಾ ಬಂದಿದೆ. ಮಹನೀಯರುಗಳ ತತ್ವ, ಸಂದೇಶಗಳುಸಾರ್ವಕಾಲಿಕವಾಗಿದ್ದು, ಅದರ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಶಾಸಕ ಯಶ್‌ಪಾಲ್ ಎ ಸುವರ್ಣ ಹೇಳಿದರು. ಅವರು ಇಂದು ನಗರದ ಅಂಬಲಪಾಡಿಯ ಜಿಲ್ಲಾ ಸವಿತಾ ಸಮಾಜ ಸಮುದಾಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಸವಿತಾ ಸಮಾಜ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ […]

ಉಡುಪಿ:ಅರ್ಜಿ ಆಹ್ವಾನ

ಉಡುಪಿ: ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಖರಣ ಇಲಾಖೆಯ ವತಿಯಿಂದ ಪಾಲಕರ ಪೋಷಣೆ,ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ- 2007 ಮತ್ತು ಅಧಿನಿಯಮ- 2009 ರನ್ವಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಬೇಕಾಗಿರುತ್ತದೆ. ಈ ಸಭೆಗೆ ಪದಾಧಿಕಾರಿಗಳ ಆಯ್ಕೆಯಲ್ಲಿ ಇಬ್ಬರು ಹಿರಿಯ ನಾಗರಿಕರನ್ನು ನಾಮನಿರ್ದೇಶನ ಮಾಡಲು ಅರ್ಹ ಹಿರಿಯ ನಾಗರಿಕರಿಂದ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಇಬ್ಬರು ಸ್ವಯಂಸೇವಾ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಆಸಕ್ತಸ್ವಯಂಸೇವಾ ಪ್ರತಿನಿಧಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 14 ಕೊನೆಯ ದಿನ. […]

ಉಡುಪಿ:ಮಾರಿ ಜಾತ್ರಾ ಮಹೋತ್ಸವ : ಮದ್ಯ ಮಾರಾಟ ನಿಷೇಧ-ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶ

ಉಡುಪಿ: ಕುಂದಾಪುರ ತಾಲೂಕಿನ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನ ಖಾರ್ವಿಕೇರಿ ಗಂಗೊಳ್ಳಿಯಲ್ಲಿಮಾರಿ ಜಾತ್ರಾ ಮಹೋತ್ಸವವು ಫೆಬ್ರವರಿ 4 ರಿಂದ 6 ರ ವರೆಗೆ ನಡೆಯಲಿದ್ದು, ಫೆ. 5 ರಂದು ಊರಿನ ಹಾಗೂ ಪರವೂರಿನ ಭಕ್ತಾದಿಗಳು ದೇವಿಗೆ ಹರಕೆ, ಪೂಜೆಗಳನ್ನು ನೆರೆವೇರಿಸಲು ಆಗಮಿಸಲಿದ್ದು, ಈ ಸಂದರ್ಭದಲ್ಲಿ ಬಾರ್ ಮತ್ತು ವೈನ್‌ಶಾಪ್‌ಗಳು ತೆರೆದಿದ್ದಲ್ಲಿ ಮದ್ಯ ಪಾನಾಸಕ್ತರು ಮದ್ಯಪಾನ ಮಾಡಿ ಗಲಭೆ ಮಾಡುವ ಸಾಧ್ಯತೆ ಇರುವ ಹಿನ್ನೆಲೆ, ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಠಿಯಿಂದ ಕರ್ನಾಟಕ ಅಬಕಾರಿ (ಭಾರತೀಯ […]

ಶಂಕರಪುರ: ಟಿಪ್ಪರ್- ಕಾರು ಮಧ್ಯೆ ಭೀಕರ ಅಪಘಾತ; ಟಿಪ್ಪರ್ ಚಾಲಕ ಸ್ಥಳದಲ್ಲೇ ಮೃತ್ಯು

ಉಡುಪಿ: ಟಿಪ್ಪರ್ ಹಾಗೂ ಕಾರಿನ ಮಧ್ಯೆ ನಡೆದ ಅಪಘಾತದಲ್ಲಿ ಟಿಪ್ಪರ್ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಶಂಕರಪುರ ಸಮೀಪದ ಅರಸಿಕಟ್ಟೆ ದುರ್ಗಾ ನಗರದಲ್ಲಿ ಸಂಭವಿಸಿದೆ. ಮೃತರನ್ನು ಟಿಪ್ಪರ್ ಚಾಲಕ ಕೊಕ್ಕರ್ಣೆ ನಿವಾಸಿ ಕೃಷ್ಣ ನಾಯ್ಕ್ (55) ಎಂದು ಗುರುತಿಸಲಾಗಿದೆ. ಕಟಪಾಡಿ ಕಡೆಯಿಂದ ಶಿರ್ವ ಕಡೆಗೆ ಹೋಗುತ್ತಿದ್ದ ಕಾರಿಗೆ ಎದುರಿನಿಂದ ಬಂದ ಟಿಪ್ಪರ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ಟಿಪ್ಪ‌ರ್ ಪಲ್ಟಿಯಾಗಿದ್ದು, ಇದರ ಅಡಿಯಲ್ಲಿ ಸಿಲುಕಿದ ಚಾಲಕ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ […]