ಹೆಬ್ರಿ: ಆರೋಗ್ಯದಲ್ಲಿ ಏರುಪೇರು; ಗರ್ಭಿಣಿ ಮೃತ್ಯು.

ಹೆಬ್ರಿ: ಆರೋಗ್ಯದಲ್ಲಿ ಏರುಪೇರಾಗಿ ಗರ್ಭಿಣಿಯೊಬ್ಬಳು ಮೃತಪಟ್ಟ ಘಟನೆ ಫೆ.3ರಂದು ಸಂಜೆ ವೇಳೆ ನಡೆದಿದೆ. ಮೃತರನ್ನು ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯ ಲಕ್ಷ್ಮಿ(22) ಎಂದು ಗುರುತಿಸಲಾಗಿದೆ. ಇವರಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗುತ್ತಿದ್ದರು. ದಾರಿ ಮಧ್ಯೆ ತೀವ್ರ ಅಸ್ವಸ್ಥಗೊಂಡ ಆಕೆ ಯನ್ನು ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದು, ಪರೀಕ್ಷಿಸಿದ ವೈದ್ಯರು ಆಕೆ ಮೃತಪಟ್ಟಿರು ವುದಾಗಿ ತದಿಳಿಸಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರ: ವೈದ್ಯಕೀಯ ಲೋಕವನ್ನೇ ವಿಸ್ಮಯಗೊಳಿಸಿದ ಪ್ರಕರಣ 3 ದಿನದ ಗಂಡು ಮಗುವಿನ ಹೊಟ್ಟೆಯಿಂದ ಎರಡು ಭ್ರೂಣಗಳು ಹೊರಗೆ!

ಅಮರಾವತಿ/ಬುಲ್ಧಾನ: ವೈದ್ಯಕೀಯ ಲೋಕದ ವಿಸ್ಮಯಕ್ಕೆ ಸಾಕ್ಷಿ ಎಂಬಂತೆ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರಿಗೆ ಅತ್ಯಂತ ಅಪರೂಪದ ‘ಭ್ರೂಣದೊಳಗೆ ಭ್ರೂಣ’ ಇರುವುದು ಪತ್ತೆಯಾಗಿತ್ತು. ಕೆಲವೇ ದಿನಗಳಲ್ಲಿ ಹೆರಿಗೆಯ ನಂತರ ಆಕೆಯ ಮೂರು ದಿನದ ಮಗುವಿನ ಹೊಟ್ಟೆಯಿಂದ ಎರಡು ಭ್ರೂಣಗಳನ್ನು ಯಶಸ್ವಿಯಾಗಿ ಹೊರತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಬುಲ್ಧಾನಾದ 32 ವರ್ಷದ ಮಹಿಳೆಯ ಗರ್ಭದಲ್ಲಿದ್ದ ಮಗುವಿನಲ್ಲಿ ಅತ್ಯಪರೂಪದ ಜನ್ಮಜಾತ ವೈಪರೀತ್ಯ ಪತ್ತೆಯಾಗಿದ್ದು, ಕಳೆದ ತಿಂಗಳು ನಿಯಮಿತ ಆರೋಗ್ಯ ತಪಾಸಣೆಯ ಭಾಗವಾಗಿ ಸೋನೋಗ್ರಫಿಗೆ ಒಳಗಾದಾಗ, ಭ್ರೂಣದ ದೇಹದೊಳಗೆ ವಿರೂಪಗೊಂಡ ಭ್ರೂಣಗಳಿರುವುದು ಪತ್ತೆಯಾಗಿದ್ದವು.ಫೆಬ್ರವರಿ […]
ಉಡುಪಿ: ಫೆ.9ರಂದು ವಿಶ್ವಕರ್ಮ ಟ್ರಸ್ಟ್ ವಿದ್ಯಾರ್ಥಿವೇತನ ವಿತರಣೆ.

ಉಡುಪಿ: ಜಿಲ್ಲಾ ಶ್ರೀ ವಿಶ್ವಕರ್ಮ ಎಜುಕೇಶನಲ್ ಟ್ರಸ್ಟ್ ವತಿಯಿಂದ 2024-25ನೇ ಸಾಲಿನಲ್ಲಿ 205 ವಿದ್ಯಾರ್ಥಿಗಳಿಗೆ 9.15 ಲ.ರೂ. ವಿದ್ಯಾರ್ಥಿವೇತನ ವಿತರಿಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಬಿ.ಎ. ಆಚಾರ್ಯ ಮಣಿಪಾಲ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು. ಫೆ.9ರಂದು ಕುಂಜಿಬೆಟ್ಟುವಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ವಿದ್ಯಾರ್ಥಿ ವೇತನ ವಿತರಣೆ ನಡೆಯಲಿದೆ. ಬೆಳಗ್ಗೆ 10ಕ್ಕೆ ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತಸರ ಗಣೇಶ್ ಆಚಾರ್ಯ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಧಾರವಾಡ ವಿ.ವಿ. ನಿವೃತ್ತ ಪ್ರಾಧ್ಯಾಪಕ ಡಾ| ಈರಣ್ಣ ಪತ್ತಾರ್ ಭಾಗವಹಿಸಲಿದ್ದಾರೆ ಎಂದರು. […]
ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾಸ್ಟರಿಂಗ್ ಪೈಥಾನ್ ಐದು ದಿನಗಳ ಅಧ್ಯಾಪಕರ ಅಭಿವೃದ್ದಿ ಕಾರ್ಯಾಗಾರ

ಉಡುಪಿ: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯುನ್ಮಾನ ಮತ್ತು ಸಂವಹನ ವಿಭಾಗ, ಕಾಕುಂಜೆ ಸಾಫ್ಟ್ವೇರ್, ಮಂಗಳೂರು ಮತ್ತು ಕಾಲೇಜಿನ ಐಎಸ್‌ಟಿಇ ಘಟಕ, ಐಇಇಇ ಘಟಕ ಇವರಸಹಯೋಗದೊಂದಿಗೆ “ಮಾಸ್ಟರಿಂಗ್ ಪೈಥಾನ್: ಉದಯೋನ್ಮುಖ ಪ್ರವೃತ್ತಿಗಳು ಮತ್ತು ಆವಿಷ್ಕಾರಗಳು” ಎಂಬ ಶೀರ್ಷಿಕೆಯೊಂದಿಗೆ ಐದು ದಿನಗಳ ಅಧ್ಯಾಪಕರ ಅಭಿವೃದ್ದಿ ಕಾರ್ಯಾಗಾರವನ್ನು ಫೆಬ್ರವರಿ 3 ರಿಂದ7ರವರೆಗೆ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಾಗಾರದ ಉದ್ಘಾಟನಾ ಸಮಾರಂಭವು ಫೆಬ್ರವರಿ 3ರಂದು ನಡೆಯಿತು. ಕಾಕುಂಜೆ ಸಾಫ್ಟ್ವೇರ್ ಇದರ ನಿರ್ದೇಶಕರಾದ ಶ್ರೀ ಜಿ ಕೆ ಭಟ್ […]
ಬಂತು ಬಂತು BSNL TV: ಮೊಬೈಲ್ ನಲ್ಲಿ ಉಚಿತವಾಗಿ ಟಿ.ವಿ ನೋಡ್ಬೋದು: ಬಿಎಸ್ಎನ್ ಎಲ್ ನಿಂದ ಅದ್ಬುತ ಕೊಡುಗೆ !

ಬಿಎಸ್ಎನ್ಎಲ್ ತನ್ನ ಬಳಕೆದಾರರಿಗಾಗಿ ಅದ್ಬುತ ಯೋಜನೆಯೊಂದನ್ನು ಘೋಷಿಸಿದೆ. ಕಳೆದ ಕೆಲವು ತಿಂಗಳುಗಳ ಹಿಂದೆ ಬಿಎಸ್ಎನ್ ಎಲ್ ಭಾರತದಾದ್ಯಂತ ಬಿಎಸ್ಎನ್ಎಲ್ ವೈಫೈ ಹೊಂದಿರುವರು ಉಚಿತವಾಗಿ ಟಿವಿಯಲ್ಲಿ 500 ಕ್ಕೂ ಹೆಚ್ಚಿನ ಚಾನೆಲ್ ಗಳನ್ನು ವೀಕ್ಷಿಸಲು BITV ಎನ್ನುವ ಸೇವೆಯೊಂದನ್ನು ಆರಂಭಿಸಿತ್ತು. ಕರ್ನಾಟಕದಲ್ಲಿ ಈ ಸೇವೆಗೆ ಕಳೆದ ವಾರವಷ್ಟೇ ಚಾಲನೆ ಸಿಕ್ಕಿದೆ. ಈ ನಡುವೆ ಮೊಬೈಲ್ ನಲ್ಲಿಯೂ ಉಚಿತವಾಗಿ ಟಿ ವಿ ನೋಡುವ ಭರ್ಜರಿ ಆಫರ್ ಅನ್ನು ಬಿಎಸ್ಎನ್ ಎಲ್ ಘೋಷಿಸಿದೆ. ಮೊಬೈಲ್ ಬಳಕೆದಾರರು ರೂ 99 ಅಗ್ಗದ ಧ್ವನಿ-ಮಾತ್ರ […]