ಗೋವಿನ ಮೇಲಿನ ಕ್ರೌರ್ಯಗಳ ಸಮಾಪ್ತಿಗೆ 27 ಕಡೆಗಳಲ್ಲಿ ವಿಷ್ಣು ಸಹಸ್ರನಾಮ ಹೋಮ ಮತ್ತು ಶಿವ ಪಂಚಾಕ್ಷರ ಹವನ

ಉಡುಪಿ: ನಾಡಿನಲ್ಲಿ ಗೋವುಗಳ ಮೇಲೆ ನಡೆಯುತ್ತಿರುವ ಗೋವಧೆ , ಗೋವಿನ ಮೇಲಿನ ಕ್ರೌರ್ಯಗಳ ಸಮಾಪ್ತಿಗೆ ಸರ್ಕಾರಗಳ ಬದಲಾಗಿ ಭಗವಂತನಿಗೇ ಮೊರೆ ಹೋಗುವ ನಿಟ್ಟಿನಲ್ಲಿ ಪೇಜಾವರ ಶ್ರೀಗಳು ಒಂದು ವಾರ ಪರ್ಯಂತ ವಿಷ್ಣು ಸಹಸ್ರನಾಮಪಾರಾಯಣ ಮತ್ತು ಶಿವ ಪಂಚಾಕ್ಷರ ಜಪಾನುಷ್ಠಾನಕ್ಕೆ ಕರೆ ನೀಡಿದ್ದರು. ಬುಧವಾರ ಅಭಿಯಾನ ಸಮಾಪ್ತಿಯ ಹಿನ್ನೆಲೆಯಲ್ಲಿ ಸುಮಾರು 27 ಕಡೆಗಳಲ್ಲಿ ವಿಷ್ಣು ಸಹಸ್ರನಾಮ ಹೋಮ ಮತ್ತು ಶಿವ ಪಂಚಾಕ್ಷರ ಹವನ ನಡೆಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಲಾಗಿದೆ .ಈ ಬಗ್ಗೆ ಸಂದೇಶ ನೀಡಿರುವ ಶ್ರೀ ವಿಶ್ವಪ್ರಸನ್ನ ತೀರ್ಥ […]
ಇಂದು (ಫೆ.1) ಈಶ್ವರ್ ಮಲ್ಪೆ ಅವರ ಮಗ ದಿ. ನಿರಂಜನ್ ಅವರ ನೆನಪಿಗಾಗಿ 2ನೇ ವರ್ಷದ ಸಹಾಯಧನ ಕಾರ್ಯಕ್ರಮ

ಉಡುಪಿ: ಆಪತ್ಭಾಂದವ ಈಶ್ವರ್ ಮಲ್ಪೆ ಅವರ ಮಗ ದಿ. ನಿರಂಜನ್ ಅವರ ನೆನಪಿಗಾಗಿ ಟೀಮ್ ಈಶ್ವರ್ ಮಲ್ಪೆ ವತಿಯಿಂದ 2ನೇ ವರ್ಷದ ಸಹಾಯಧನ ಹಾಗೂ ಅಶಕ್ತರಿಗೆ ವಿವಿಧ ಸವಲತ್ತು ವಿತರಣೆ ಕಾರ್ಯಕ್ರಮವು ಇಂದು ಸಂಜೆ 5 ಗಂಟೆಗೆ ಮಲ್ಪೆ ಬೀಚ್ ನಲ್ಲಿ ನಡೆಯಲಿದೆ ಎಂದು ಸಮಾಜ ಸೇವಕ ಈಶ್ವರ್ ಮಲ್ಪೆ ತಿಳಿಸಿದರು. ಈ ಬಗ್ಗೆ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಮಾರು ಶ್ರೀ ಈಶವಿಠಲದಾಸ ಸ್ವಾಮೀಜಿ ಆರ್ಶೀವಚನ ನೀಡಲಿದ್ದಾರೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅಧ್ಯಕ್ಷತೆ […]
ಇಂದು (ಫೆ.1)ರಂದು ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನದ ನೂತನ ರಥ ಸಮರ್ಪಣೆ ಕಾರ್ಯಕ್ರಮ

ಉಡುಪಿ: ಉಡುಪಿ ಪುತ್ತಿಗೆ ಮಠದ ಅಧೀನದಲ್ಲಿರುವ ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಇಂದು ನೂತನ ರಥ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದು ಪುತ್ತಿಗೆ ಮಠದ ದಿವಾನ್ ನಾಗರಾಜ ಆಚಾರ್ಯ ತಿಳಿಸಿದ್ದಾರೆ. ಉಡುಪಿ ಶ್ರೀಕೃಷ್ಣಮಠದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ 4ಗಂಟೆಗೆ ಕೃಷ್ಣಮಠದಿಂದ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನದವರೆಗೆ ಶೋಭಾಯಾತ್ರೆ ನಡೆಯಲಿದ್ದು, ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥರು ಚಾಲನೆ ನೀಡಲಿದ್ದಾರೆ. ಕಿರಿಯ ಶ್ರೀ ಸುಶ್ರೀಂದ್ರತೀರ್ಥರು ಉಪಸ್ಥಿತರಿರುವರು ಎಂದರು. ಸಂಜೆ 6ಗಂಟೆಗೆ ನಡೆಯುವ […]
ಉಡುಪಿ:ಕಾನೂನು ಪದವೀಧರರಿಗೆ ಪ್ರೋತ್ಸಾಹಧನ : ಅರ್ಜಿ ಆಹ್ವಾನ

ಉಡುಪಿ: ಕಾನೂನು ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ನವ ಕಾನೂನು ಪದವೀಧರರಿಗೆ ಮಾಹೆಯಾನ2000 ರೂ. ನಂತೆ ಪೋತ್ಸಾಹಧನ ಮಂಜೂರು ಮಾಡಲು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಡಿಯಲ್ಲಿ ವಕೀಲ ವೃತ್ತಿಗೆನೋಂದಾಯಿಸಲ್ಪಟ್ಟ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮಾರ್ಚ್ 9 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಪ್ರಧಾನ ಜಿಲ್ಲಾ ನ್ಯಾಯಾಧೀಶರ ಕಚೇರಿ, ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣ, ಉಡುಪಿ ಅನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ನ್ಯಾಯಾಲಯದ ಕಚೇರಿ ಪ್ರಕಟಣೆ ತಿಳಿಸಿದೆ.
ಉಡುಪಿ:ಮಕ್ಕಳ ರಕ್ಷಣಾ ಕಾಯ್ದೆಗಳ ಅನುಷ್ಠಾನ ಕುರಿತು ಕಾರ್ಯಾಗಾರ

ಉಡುಪಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ “ಮಕ್ಕಳ ರಕ್ಷಣೆಗೆ ಸಂಬAಧಿಸಿದ ಕಾಯ್ದೆಗಳ ಅನುಷ್ಠಾನದ ಕುರಿತು ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಒಂದು ದಿನದ ತರಬೇತಿ ಕಾರ್ಯಾಗಾರವು ಗುರುವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ […]