ಪ್ರಯಾಗ್ ರಾಜ್:ಮಹಾ ಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯಂದು ಕಾಲ್ತುಳಿತ ದುರಂತದ ಬಳಿಕ ಬಿಗಿ ಕ್ರಮ;ಯಾತ್ರಿಕರಿಗೆ ಈಗ ನಡೆಯುವುದೇ ಸವಾಲು

ಪ್ರಯಾಗ್ ರಾಜ್ : ಮಹಾ ಕುಂಭಮೇಳದಲ್ಲಿ ಮೌನಿ ಅಮಾವಾಸ್ಯೆಯಂದು ಕಾಲ್ತುಳಿತ ದುರಂತ ಸಂಭವಿಸಿದ ಬಳಿಕ ಬಿಗಿ ಕ್ರಮಗಳನ್ನು ಆಡಳಿತ ಕೈಗೊಂಡಿದ್ದು, ಯಾತ್ರಿಕರಿಗೆ ಪುಣ್ಯ ಸ್ಥಳದಲ್ಲಿ ಈಗ ಪಾದಯಾತ್ರೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಅನೇಕರು ಸಂಗಮದ ಸಮೀಪದ ಸ್ಥಳಕ್ಕೆ ನಾಲ್ಕು ಚಕ್ರದ ವಾಹನಗಳ ಪ್ರವೇಶಕ್ಕೆ ಅವಕಾಶ ನೀಡದ ಕಾರಣ ಕಿಲೋಮೀಟರ್ ಗಟ್ಟಲೆ ನಡೆದು ಕ್ರಮಿಸಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಸಹಾಸ್ರಾರು ಸಾಮಾನ್ಯ ಭಕ್ತರು ಕಾಲ್ನಡಿಗೆಯಲ್ಲಿ ಬಹಳ ದೂರ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಎಲ್ಲರಿಗೂ ಹೆಚ್ಚು ಬೇಡಿಕೆಯಿರುವ ಶಟಲ್ ಅಥವಾ ಇ-ರಿಕ್ಷಾವನ್ನು […]
ಇಂದಿನಿಂದ (ಫೆ.1)ರಿಂದ ಯುಪಿಐ ಬಳಕೆದಾರರಿಗೆ ಹೊಸ ನಿಯಮ ಜಾರಿ!

ನವದೆಹಲಿ: ದೇಶಾದ್ಯಂತ ಇಂದು ಡಿಜಿಟಲ್ ಕ್ರಾಂತಿಯ ಪರಿಣಾಮ ಬಹುತೇಕ ಜನರು ಆನ್ ಲೈನ್, ಫೋನ್ ಪೇ, ಗೂಗಲ್ ಪೇ, ಯುಪಿಐ ಪೇಮೆಂಟ್ ಮೊರೆ ಹೋಗಿದ್ದಾರೆ. ಆದರೆ ಇದೀಗ ಯುಪಿಐ ಬಳಸಿ ಹಣ ಪಾವತಿಸುವ ಅಥವಾ ಹಣ ಪಡೆಯುವ ಬಳಕೆದಾರರಿಗೆ 2025ರ ಫೆ.1ರಿಂದ ಹೊಸ ನಿಯಮ ಜಾರಿಯಾಗಲಿದೆ ಎಂಬುದನ್ನು ಗಮನಿಸಬೇಕಾಗಿದೆ… ಏನಿದು ಹೊಸ ನಿಯಮ? ಫೆಬ್ರವರಿ 1ರಿಂದ ವಿಶೇಷ ಅಕ್ಷರಗಳನ್ನು (Special characters) ಹೊಂದಿರುವ ಯುಪಿಐ ಐಡಿ ಕಾರ್ಯನಿರ್ವಹಿಸುವುದಿಲ್ಲ. ದ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಶನ್ ಆಫ್ ಇಂಡಿಯಾ(NPCI)ದ ಹೊಸ […]
ರಂಗ ನಿರ್ದೇಶಕ ಮಂಡ್ಯ ರಮೇಶ್‌ಗೆ ಪಂಚಮಿ ಪುರಸ್ಕಾರ ಪ್ರದಾನ

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನಡೆದ ಸಂಸ್ಕೃತಿ ಉತ್ಸವದ ಎರಡನೇ ದಿನವಾದ ಶುಕ್ರವಾರ ಉಡುಪಿ ಪಂಚಮಿ ಟ್ರಸ್ಟ್ ಪ್ರಾಯೋಜಿತ ಪಂಚಮಿ ಪುರಸ್ಕಾರವನ್ನು ರಂಗ ನಿರ್ದೇಶಕ ಹಾಗೂ ಚಿತ್ರನಟ ಮಂಡ್ಯ ರಮೇಶ್‌ಗೆ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿದ ಮಂಡ್ಯ ರಮೇಶ್ ಮಾತನಾಡಿ, ರಂಗ ಕಲಾವಿದ ಆಗುವುದು ಸುಲಭದ ಕೆಲಸ ಅಲ್ಲ. ಅದು ಸಾಹಸ ಕಾರ್ಯವಾಗಿದೆ. ಗಾಂಧಿಯನ್ನು ಬದಲಾಯಿಸಿರುವುದು ಇದೇ ರಂಗಭೂಮಿ. ಜಗತ್ತಿನ […]
ನವದೆಹಲಿ: ಕೇಂದ್ರ ಬಜೆಟ್ 2025- ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಯಾವ ವಸ್ತು ಅಗ್ಗ-ಯಾವ ವಸ್ತು ದುಬಾರಿ?ಎಂಬುದರ ಬಗ್ಗೆ ಪೂರ್ಣ ಮಾಹಿತಿ

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ (ಫೆ.01) ಲೋಕಸಭೆಯಲ್ಲಿ 2025-26ನೇ ಸಾಲಿನ ಮುಂಗಡ ಪತ್ರ ಮಂಡಿಸಿದ್ದು, ಈ ಬಾರಿಯ ಬಜೆಟ್ ನಲ್ಲಿ ಯಾವೆಲ್ಲಾ ವಸ್ತುಗಳು ಅಗ್ಗ ಮತ್ತು ಯಾವ ವಸ್ತುಗಳು ದುಬಾರಿಯಾಗಿದೆ ಎಂಬ ವಿವರ ಇಲ್ಲಿದೆ.. ಈ ವಸ್ತುಗಳು ಅಗ್ಗ: ಮೊಬೈಲ್ ಫೋನ್, 36 ವಿಧದ ಕ್ಯಾನ್ಸರ್ ಔಷಧ, ಇ.ವಿ.ಬ್ಯಾಟರಿಗಳು, ಶೀತಲೀಕರಣ ಮೀನಿನ ಪೇಸ್ಟ್, ವೆಟ್ ಬ್ಲೂ ಲೆದರ್, ವಾಹಕ ದರ್ಜೆಯ ಈಥರ್ನೆಟ್ ಸ್ವಿಚ್ ಗಳು, ಖನಿಜಗಳು, ಎಲ್ ಸಿಡಿ/ಎಲ್ ಇಡಿ ಟಿವಿಗಳು, ಹಡಗು ನಿರ್ಮಾಣದ […]
ಮಹಾಕುಂಭಮೇಳದಲ್ಲಿ ಎಲ್ಲರೂ ಜಾಗರೂಕತೆಯಿಂದ ಭಾಗಿಯಾಗೋಣ; ಪೇಜಾವರ ಶ್ರೀ ಕರೆ
ಉಡುಪಿ: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಶಾಹಿ ಸ್ನಾನ ಬಹಳ ಸಂಭ್ರಮದಿಂದ ನೆರವೇರಿದೆ. ಆದರೆ ಇದೀಗ ಅಹಿತಕರ ಘಟನೆಗಳು ನಡೆಯುತ್ತಿವೆ ಎಂಬ ಸುದ್ದಿ ಬಂದಿದ್ದು, ಈ ಘಟನೆಯಲ್ಲಿ ಹೆಚ್ಚಿನ ಹಾನಿಯಾಗಿಲ್ಲ ಎಂದು ತಿಳಿದು ಸಮಾಧಾನವಾಯಿತು. ಮುಂದೆ ನಡೆಯುವ ಉತ್ಸವಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಿರಲಿ. ಹಾಗೆ, ಎಲ್ಲರೂ ಜಾಗರೂಕತೆಯಿಂದ ಕುಂಭಮೇಳದಲ್ಲಿ ಭಾಗಿಯಾಗೋಣ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕರೆನೀಡಿದರು. ಭಗವಂತನ ಅನುಗ್ರಹ ಎಲ್ಲರ ಮೇಲೆ ನಿರಂತರ ಇರಲಿ. ಎಲ್ಲರೂ ಸಂಯಮದಿಂದ ಪವಿತ್ರ […]