ಕುಂಭಮೇಳಕ್ಕೆ ಬಂದ ಎಲ್ಲರನ್ನು ಖರ್ಗೆ ಮೂರ್ಖರೆಂದು ಹೇಳಿದ ಹಾಗೆ ಆಯ್ತು; ಪೇಜಾವರ ಶ್ರೀ ತಿರುಗೇಟು

ಉಡುಪಿ: ಕುಂಭಮೇಳದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವಹೇಳನ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದರು. ಖರ್ಗೆ ಅವರದ್ದು ಬಾಲಿಶ ಹೇಳಿಕೆ. ಈ ಹೇಳಿಕೆಯಿಂದ ಅವರ ಆಶಯ ತೆರೆದಿಟ್ಟಿದೆ. ಇಂತಹ ಹೇಳಿಕೆ ಅವರ ಘನತೆಗೆ ತಕ್ಕದಾದ್ದಲ್ಲ. ಮಹಾಕುಂಭಮೇಳದಲ್ಲಿ ಮಿಂದ ಎಲ್ಲ ಮಂದಿ ಮೂರ್ಖರಾ?. ಕುಂಭಮೇಳಕ್ಕೆ ಬಂದ ಎಲ್ಲರನ್ನ ಖರ್ಗೆ ಅವರು ಮೂರ್ಖರೆಂದು ಹೇಳಿದ ಹಾಗೆ ಆಯ್ತು ಎಂದು ತಿರುಗೇಟು ನೀಡಿದರು. ಯಾರೂ ಕೂಡಾ ಬಹುಮತವನ್ನು ಕಡೆಗಣಿಸಬೇಡಿ. ಬಹುಮತದ […]

ಕಾಪು ಸಹಕಾರಿ ವ್ಯವಸಾಯಿಕ ಸಂಘ ನಿಯಮಿತ: ಅಧ್ಯಕ್ಷರಾಗಿ ಕಾಪು ದಿವಾಕರ್ ಶೆಟ್ಟಿ, ಉಪಾಧ್ಯಕ್ಷರಾಗಿ ಸುಲಕ್ಷಣ್ ಕುಮಾರ್ ಆಯ್ಕೆ.

ಕಾಪು: ಕಾಪು ಸಹಕಾರಿ ವ್ವವಸಾಯಿಕ ಸಂಘ ನಿ. ಇದರ ಮುಂದಿನ ಐದು ವರ್ಷಗಳ ಅವಧಿಯ ಅಧ್ಯಕ್ಷರಾಗಿ ಕಾಪು ದಿವಾಕರ್ ಶೆಟ್ಟಿ ಉಪಾಧ್ಯಕ್ಷರಾಗಿ ಸುಲಕ್ಷಣ್ ಎಲ್ .ಕುಮಾರ್ ಮಜೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬುಧವಾರ ಸಂಘದ ಸಭಾಭವನದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನೂತನ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು. ಚುನಾವಣಾ ನಿರ್ವಚನಾಧಿಕಾರಿ ಕೆ. ಆರ್. ರೋಹಿತ್‌ ಚುನಾವಣಾ ಪ್ರಕ್ರಿಯೆ ನಿರ್ವಹಿಸಿದರು. ಆಡಳಿತ ಮಂಡಳಿ ನಿರ್ದೇಶಕರಾದ ದಿನೇಶ್ ಎ. ಸಾಲ್ಯಾನ್ ಕಾಪು, ಸದಾಶಿವ ಸೇರ್ವೆಗಾರ ಮಲ್ಲಾರು, ಅಬ್ದುಲ್ […]

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ನಿಯಮಿತ: ಅಧ್ಯಕ್ಷರಾಗಿ ಎಸ್.‌ ಪ್ರಕಾಶ್ಚಂದ್ರ ಶೆಟ್ಟಿ ಪುನರಾಯ್ಕೆ.

ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಂಜು ದೇವಾಡಿಗ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕರಾದ ಗುರುರಾಜ ಹೆಬ್ಬಾರ್, ಪ್ರಕಾಶ್ ಎಸ್. ಪೂಜಾರಿ, ರಾಜೇಶ ದೇವಾಡಿಗ, ದಿನೀತಾ ಶೆಟ್ಟಿ, ಕೆ.ಲಲಿತಾ ಪೂಜಾರಿ, ಉದಯಕುಮಾರ ಶೆಟ್ಟಿ, ಈಶ್ವರ ಹಕ್ಲತೋಡು, ಹೂವ ನಾಯ್ಕ, ಭರತ್‌ ದೇವಾಡಿಗ ಉಪಸ್ಥಿತರಿದ್ದರು. ಜ.30 ಗುರುವಾರ ನೂತನ ಅಧ್ಯಕ್ಷರು, ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ನಡೆಯಿತು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ರೋಹಿತ್ ಕುಮಾರ್‌ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ […]

ಕಾರ್ಕಳ: ಕುಶನ್ ಅಂಗಡಿಯಲ್ಲಿ ಬೆಂಕಿ ಅವಘಡ; ತಪ್ಪಿದ ಭಾರಿ ಅನಾಹುತ

ಉಡುಪಿ: ಕಾರ್ಕಳದ ಆನೆಕೆರೆ ಪರಿಸರದ ಕಟ್ಟಡವೊಂದರಲ್ಲಿ ಗುರುವಾರ ರಾತ್ರಿ ಅಗ್ನಿ ಅವಘಡ ಸಂಭವಿಸಿದ್ದು, ಕ್ಷಣ ಮಾತ್ರದಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಕಟ್ಟಡವನ್ನೇ ಆವರಿಸಿಕೊಂಡಿದೆ. ಉದ್ಯಮಿ ಗಣಪತಿ ಹೆಗ್ಡೆ ಒಡೆತನದ ಕುಶನ್ ವರ್ಕ್ಸ್ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಇದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. .

ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ:ಜ.31- ರಿಂದ ಫೆ.3ರ ವರೆಗೆ ಆದಿಸುಬ್ರಹ್ಮಣ್ಯ ದೇವರ ಪುನಃ ಪ್ರತಿಷ್ಠಾಪನೆ.

ಬ್ರಹ್ಮಾವರ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶ್ರೀ ಆದಿಸುಬ್ರಹ್ಮಣ್ಯ ದೇವಸ್ಥಾನದ ಪುನಃ ಪ್ರತಿಷ್ಠಾಪನೆ ಮಹೋತ್ಸವ ಜ.31ರಿಂದ ಫೆ.3ರ ತನಕ ಜರಗಲಿದೆ. ಜ.31ರಂದು ಬೆಳಿಗ್ಗೆ ವಾರ್ಷಿಕೋತ್ಸವ ಅಂಗವಾಗಿ ಶ್ರೀ ದೇವಿಗೆ – ಬ್ರಹ್ಮಕಲಶಾಭಿಷೇಕ, ಪ್ರಧಾನ ಹೋಮ, ಚಂಡಿಕಾಯಾಗ, ಫೆ.1ರಂದು ವಿವಿಧಹೋಮ,2ರಂದು ಬೆಳಗ್ಗೆ ಶ್ರೀ ನಾಗದೇವರ ಪ್ರತಿಷ್ಠಾಪನೆ, ಸಂಜೆ ಆಶ್ಲೇಷಾ ಬಲಿ, 3ರ ಬೆಳಗ್ಗೆ ಬ್ರಹ್ಮಕಲಶಾಭಿಷೇಕ, ಸಂದರ್ಶನ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮಗಳು ಕ್ಷೇತ್ರದ ತಂತ್ರಿ, ಹೃಷಿಕೇಶ ಬಾಯರಿ ” ನೇತೃತ್ವದಲ್ಲಿ ಜರಗಲಿದೆ. ಆದಿಸುಬ್ರಹ್ಮಣ್ಯ ದೇವರ ನೂತನ ಶಿಲಾಮಯ […]