ಕುಂದಾಪುರ: ವ್ಯಕ್ತಿ ನಾಪತ್ತೆ

ಉಡುಪಿ: ಕುಂದಾಪುರ ತಾಲೂಕು ಯಡಮೊಗ್ಗೆ ಗ್ರಾಮದ ಬೀರನಬೈಲು ನಿವಾಸಿ ಪ್ರಶಾಂತ (23) ಎಂಬ ವ್ಯಕ್ತಿಯು 2024 ರ ಮಾರ್ಚ್ 1 ರಂದು ಕೆಲಸಕ್ಕೆಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 4 ಇಂಚು ಎತ್ತರ, ಎಣ್ಣೆಕಪ್ಪು ಮೈಬಣ್ಣ ಹೊಂದಿದ್ದು, ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಶಂಕರನಾರಾಯಣ ಪೊಲೀಸ್ ಠಾಣೆಯ ಉಪನಿರೀಕ್ಷಕರು ದೂ.ಸಂಖ್ಯೆ: 08259-280299, ಮೊ.ನಂ: 9480805456, 8277988963 ಅಥವಾ ಕುಂದಾಪುರ ವೃತ್ತ ಪೊಲೀಸ್ ನಿರೀಕ್ಷಕರು ದೂ.ಸಂಖ್ಯೆ: 08254-230880 ಅಥವಾ ಕಂಟ್ರೋಲ್ ರೂಂ. ನಂ: […]

ಹಿರಿಯಡಕ ವೀರಭದ್ರ ದೇವಸ್ಥಾನದ ಗೋಶಾಲೆಯಿಂದ ದನ ಕಳವು; ಕಳ್ಳತನದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ.

ಉಡುಪಿ: ಉಡುಪಿ ಸಮೀಪದ ಹಿರಿಯಡ್ಕ ವೀರಭದ್ರ ದೇವಸ್ಥಾನದ ಗೋಶಾಲೆಯಿಂದ ದನ ಕಳವು ನಡೆಸಿದ ಘಟನೆ ನಡೆದಿದ್ದು ದೂರು ದಾಖಲಾಗಿದೆ.ಸೋಮವಾರ ಮುಂಜಾನೆ 2 ರಿಂದ 3 ಗಂಟೆಯ ನಡುವೆ ಈ ಕಳ್ಳತನ ನಡೆದಿದ್ದು ಸಿಸಿ ಕ್ಯಾಮೆರಾದಲ್ಲಿ ದೃಶ್ಯ ದಾಖಲಾಗಿದೆ.ದೇವಸ್ಥಾನದ ಮುಂಭಾಗದ ಬಾಕಿಮಾರು ಗದ್ದೆಯಲ್ಲಿ ಗೋಶಾಲೆ ಇದ್ದು ,ಅಲ್ಲಿ ಕಟ್ಟಿ ಹಾಕಲಾಗಿದ್ದ ಕಪ್ಪು ಬಣ್ಣದ ಎರಡು ಹಸುಗಳನ್ನು ದುಷ್ಕರ್ಮಿಗಳು ಕಳ್ಳತನ‌ ಮಾಡಿದ್ದಾರೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಸಿ ಟಿವಿ ದೃಶ್ಯ ಆಧರಿಸಿ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಉಡುಪಿ: ಆರೋಗ್ಯ ವಿಮಾ ಡೆಸ್ಕ್‌ ಹುದ್ದೆಗೆ ಕಾರ್ಯನಿರ್ವಾಹಕ ಬೇಕಾಗಿದ್ದಾರೆ.

ಉಡುಪಿ: ಆರೋಗ್ಯ ವಿಮಾ ಡೆಸ್ಕ್‌ ಹುದ್ದೆಗೆ ಕಾರ್ಯನಿರ್ವಾಹಕ ಬೇಕಾಗಿದ್ದಾರೆ. ಅಭ್ಯರ್ಥಿಯು ಕಂಪ್ಯೂಟರ್ ಜ್ಞಾನ, ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು. ಸ್ಥಳ: ಉಡುಪಿ ದಯವಿಟ್ಟು ನಿಮ್ಮ ರೆಸ್ಯೂಮ್ ಅನ್ನು ಇಲ್ಲಿಗೆ ಕಳುಹಿಸಿ: 9880972393