ಕಾರ್ಕಳ: ಧಗಧಗನೇ ಹೊತ್ತಿ ಉರಿದ ಓಮ್ನಿ‌ ಕಾರು

ಉಡುಪಿ: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಓಮ್ನಿ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಕ್ಷಣಮಾತ್ರದಲ್ಲಿ ಹೊತ್ತಿ ಉರಿದ ಘಟನೆ ಕಾರ್ಕಳ ಬೈಪಾಸ್ ಸರ್ಕಲ್ ಬಳಿ ಸಂಭವಿಸಿದೆ. ಬೈಪಾಸ್ ಸರ್ಕಲ್ ಬಳಿ ನಿಲ್ಲಿಸಿದ್ದ ಓಮ್ನಿ ಕಾರಿನಲ್ಲಿ ಬ್ಯಾಟರಿ ಶಾರ್ಟ್ ಆಗಿ ಬೆಂಕಿ ಕಾಣಿಸಿಕೊಂಡಿದ್ದು, ನೋಡು ನೋಡುತ್ತಿದ್ದಂತೆ ಕಾರು ಧಗಧಗನೇ ಹೊತ್ತಿ ಉರಿದು ಸಂಪೂರ್ಣ ಸುಟ್ಟುಹೋಗಿದೆ. ಸ್ಥಳೀಯರು ನೀರು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಬಳಿಕ ಅಗ್ನಿ ಶಾಮಕ ಇಲಾಖೆಯ ಸಿಬ್ಬಂದಿ‌ ಆಗಮಿಸಿ ಬೆಂಕಿ‌ ನಂದಿಸಿದರು. ಅಷ್ಟೊತ್ತಿಗೆ ಕಾರು ಸಂಪೂರ್ಣ […]

ಸ್ಲೆಂಡರ್ ಬೈಕ್ ಪ್ರಿಯರಿಗೆ ಭರ್ಜರಿ ಗುಡ್ ನ್ಯೂಸ್: ರಸ್ತೆಯಲ್ಲಿ ಧೂಳೆಬ್ಬಿಸಲಿದೆ ಹೀರೋ Splendor ev ಎಲೆಕ್ಟ್ರಿಕ್ ಬೈಕ್:

ಸ್ಲೆಂಡರ್ (splendor) ಬೈಕ್ ಒಂದು ಕಾಲದಲ್ಲಿ ಬೈಕ್ ಪ್ರಿಯರಲ್ಲಿ ಸಂಚಲನ ಉಂಟು ಮಾಡಿದ ಕ್ಲಾಸ್ ಬೈಕ್.ಈಗಲೂ ನೂರಾರು ಹೊಸ ಹೊಸ ಬೈಕ್ ಗಳು ಮಾರುಕಟ್ಟೆಗೆ ಬಂದಿದ್ದರೂ ಸ್ಲೆಂಡರ್ ಬೈಕ್ ತನ್ನ ಅಸ್ತಿತ್ವ ಬಿಟ್ಟು‌ಕೊಟ್ಟಿಲ್ಲ. ಈ ಬೈಕ್ ಗಳನ್ನು ವಿಂಟರ್ ಮತ್ತು ಮಾಡರ್ನ್ ಲುಕ್ ಗಳೊಂದಿಗೆ ನವೀಕರಿಸಿ ರಸ್ತೆಯಲ್ಲಿ ಮಹಾರಾಜರಂತೆ ಸದ್ದು ಮಾಡುತ್ತ ಹೋಗುವ ಬೈಕ್ ಪ್ರಿಯರು ಇದ್ದಾರೆ. ಇದರ ಮೈಲೇಜ್ ಮತ್ತು ಕಾರ್ಯದಕ್ಷತೆಯನ್ನು ಕೊಂಡಾಡುವವರೂ ಇದ್ದಾರೆ. ಭಾರತದಲ್ಲಿ ಸ್ಲೆಂಡರ್ ಬೈಕ್ ನಷ್ಟು ಸದ್ದು ಮಾಡಿದ ಬೈಕ್ ಬೇರೊಂದಿಲ್ಲ. […]

ಜ.30ರಂದು ಹಿರಿಯಡಕದಲ್ಲಿ “ಗಾಂಧಿ ಭಾರತ ಬೃಹತ್ ಸಮಾವೇಶ”

ಉಡುಪಿ: 100 ವರ್ಷಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮಾ ಗಾಂಧೀಜಿ ಭಾಗವಹಿಸಿದ್ದ ಸವಿನೆನಪಿಗಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ (ಕೆಪಿಸಿಸಿ) ಆಶ್ರಯದಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಮತ್ತು ಕಾಪು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಹಯೋಗದೊಂದಿಗೆ ಜೈ ಬಾಪು ಜೈ ಭೀಮ್ ಜೈ ಸಂವಿಧಾನ ಧ್ಯೇಯವಾಕ್ಯದಡಿ “ಗಾಂಧಿ ಭಾರತ ಬೃಹತ್ ಸಮಾವೇಶ”ವನ್ನು ಜ. 30ರಂದು ಹಿರಿಯಡಕದ ಶ್ರೀ ವೀರಭದ್ರ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ವಿನಯಕುಮಾರ್ ಸೊರಕೆ […]

ದೇಶದ ವಾರ್ಷಿಕ ಪ್ರಗತಿ ದರ ಶೇ.7ರಷ್ಟು ಉಳಿಸಿಕೊಳ್ಳುವುದು ಅಗತ್ಯ

ಮಣಿಪಾಲ: ಒಂಬತ್ತನೇ ಡಾ. ಎಮ್.ವಿ. ಕಾಮತ್ ಎಂಡೋಮೆಂಟ್ ಉಪನ್ಯಾಸದಲ್ಲಿ ಶೇಖರ್ ಗುಪ್ತರು ಬೆಳವಣಿಗೆ ಮತ್ತು ಸುಧಾರಣೆಗಳ ಆದ್ಯತೆಗಳನ್ನು ವಿವರಿಸಿದರು. ಪ್ರಖ್ಯಾತ ಪತ್ರಕರ್ತ ಶೇಖರ್ ಗುಪ್ತಾ ಭಾರತವು 7 ಶೇಕಡಕ್ಕಿಂತ ಹೆಚ್ಚಿನ ಬೆಳವಣಿಗೆ ದರವನ್ನು ಲಕ್ಷ್ಯವಿಡಬೇಕಾದ ಅಗತ್ಯವನ್ನು ಒತ್ತಿಹೇಳಿದ್ದಾರೆ. ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ (MIC) ಆಯೋಜಿಸಿದ ಏಳನೇ ಡಾ. ಎಂ.ವಿ. ಕಾಮತ್ ಎಂಡೋಮೆಂಟ್ ಮೆಮೋರಿಯಲ್ ಲೆಕ್ಚರ್‌ನಲ್ಲಿ ಮಾತನಾಡಿದ ಅವರು, ಕಳೆದ ದಶಕದಲ್ಲಿ ಭಾರತದಲ್ಲಿ ಗಣನೀಯ ಬೆಳವಣಿಗೆ ಕಾಣಿಸಲಿಲ್ಲ ಎಂದು ಹೇಳಿದರು. ಸ್ವಯಂ ಪ್ರಶಂಸೆಯನ್ನು ಬಿಟ್ಟು ಆತ್ಮಾವಲೋಕನ ಮಾಡುವ […]

ಬಿಲ್ಲಾಡಿ ಫ್ರೆಂಡ್ಸ್ ಯುವ ವೇದಿಕೆ ಬಿಲ್ಲಾಡಿ, ಇವರ ಆಶ್ರಯದಲ್ಲಿ ನಡೆದ ವಾಲಿಬಾಲ್ ಪಂದ್ಯಾಟದ ವಿಜೇತರು.

ಬಿಲ್ಲಾಡಿ ಫ್ರೆಂಡ್ಸ್ ಯುವ ವೇದಿಕೆ ಬಿಲ್ಲಾಡಿ, ಇವರ ಆಶ್ರಯದಲ್ಲಿ ನಡೆದ ವಾಲಿಬಾಲ್ ಪಂದ್ಯಾಟದಲ್ಲಿ, ಪ್ರೇಕ್ಷಕರ ಗಮನ ಸೆಳೆದು ಮೊದಲನೇ ಸ್ಥಾನದಲ್ಲಿ ಗೆದ್ದು ಬಂದ ಟೀಮ್ “ವರ್ತೆ ಪಂಜುರ್ಲಿ,” ಹಾಗೂ ಎರಡನೇ ಸ್ಥಾನದಲ್ಲಿ ಟೀಮ್ “ಆಟೋ ರಾಜಾ”, ತಂಡಗಳು ಜಯಗಳಿಸಿದೆ.