ದುಬೈ ಫ್ರೈಡೇ ಕ್ರಿಕೆಟ್ ಲೀಗ್; ಟೆಕ್ನೋ ಟೈಟಾನ್ಸ್ ಕ್ವಾರ್ಟರ್ ಫೈನಲ್ ಗೆ ತೇರ್ಗಡೆ.

ದುಬೈನಲ್ಲಿ ಜರಗುತ್ತಿರುವ ಅತ್ಯಂತ ಪ್ರತಿಷ್ಠಿತ ಫ್ರೈಡೇ ಕ್ರಿಕೆಟ್ ಲೀಗ್-9ರಲ್ಲಿ ಅವಿಭಜಿತ ದಕ್ಷಿಣಕನ್ನಡ ಮೂಲದ ಒಡೆತನ ಹೊಂದಿರುವ ಟೆಕ್ನೋ ಟೈಟಾನ್ಸ್ ಕ್ರಿಕೆಟ್ ತಂಡವು ಈಗಾಗಲೇ ಆಡಿದ ಎಂಟು ಪಂದ್ಯಗಳಲ್ಲಿ ಐದುಪಂದ್ಯಗಳನ್ನು ಭರ್ಜರಿಯಾಗಿ ಜಯಿಸಿ ಪ್ರೀ-ಕ್ವಾರ್ಟರ್ ಹಂತವನ್ನು ತಲುಪಿದೆ. ಮುಂದಿನ ಪಂದ್ಯದ ಜಯವು ತಂಡವನ್ನು ಸೆಮಿಫೈನಲಗೆ ತಲುಪಿಸುತ್ತದೆ. ಟೆಕ್ನೋ ಟೈಟಾನ್ಸ್ ತಂಡವು ಉಡುಪಿಜಿಲ್ಲೆಯ ಸೂರಾಲಿನ ವಿಠಲ ರಿಷಾನ್ ನಾಯಕ್ ರವರ ನಾಯಕತ್ವ ಹಾಗೂ ಅಕದ್ ಅವರ ಉಪನಾಯಕತ್ವದಲ್ಲಿ ಕಣಕ್ಕೆ ಇಳಿದಿದೆ. ಉಳಿದಂತೆ ಅಬಿದ್, ಅಸ್ಮಾರ್, ನದೀಮ್, ಅಮಾನ್, ಓವೈಸಿ, ರಹೀಂ, […]

ಹಳ್ಳಿ ಹೈದ ಹನುಮಂತ ‘ಬಿಗ್‌ ಬಾಸ್‌ ಕನ್ನಡ ಸೀಸನ್ 11’ರ ವಿನ್ನರ್‌.

ಬೆಂಗಳೂರು: ‘ಬಿಗ್ ಬಾಸ್ ಕನ್ನಡ 11’ರ ಆಟಕ್ಕೆ ತೆರೆಬಿದ್ದಿದೆ. ಹಳ್ಳಿ ಹೈದ ಹನುಮಂತ ಬಿಗ್ ಬಾಸ್ 11ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿದ್ದ ಹನುಮಂತ್ ವಿನ್ನರ್ ಆಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಬಿಗ್ ಬಾಸ್ ಆಟ ಶುರುವಾಗಿ 4 ವಾರ ಕಳೆದ ಮೇಲೆ ಸ್ಪರ್ಧಿಯಾಗಿ ದೊಡ್ಮನೆಗೆ ಹನುಮಂತ ಕಾಲಿಟ್ಟರು. ಮನೆಯ ಜಗಳ ನೋಡಿ ಹನುಮಂತು ಬೆಚ್ಚಿಬಿದ್ದಿದ್ದರು. ಆದರೂ ಛಲ ಬಿಡದೇ ಘಟಾನುಘಟಿ ಸ್ಪರ್ಧಿಗಳನ್ನು ಹಿಂದಿಕ್ಕಿ ಫಿನಾಲೆಗೆ ಮೊದಲು ಆಯ್ಕೆಯಾದರು. ಈಗ ಪರಾಕ್ರಮ ಮೆರೆದ […]