ರಘುಪತಿ ಭಟ್‌ ಅವರಿಗೆ ವಿಶ್ವವಾಣಿ ಗ್ಲೋಬಲ್‌ ಅಚೀವರ್ಸ್ ಅವಾರ್ಡ್

ಬೆಂಗಳೂರು: ವಿಶ್ವವಾಣಿ ಪತ್ರಿಕೆಯ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರತಿವರ್ಷ ‘ಗ್ಲೋಬಲ್ ಅಚೀವರ್ಸ್ ಅವಾರ್ಡ್’ ನೀಡಲಾಗುತ್ತಿದ್ದು ಈ ಬಾರಿ ಉಡುಪಿ ಮಾಜಿ ಶಾಸಕ ಕೆ. ರಘುಪತಿ ಭಟ್‌ ಅವರು ಆಯ್ಕೆಯಾಗಿದ್ದಾರೆ. ಓಮನ್‌ ರಾಜಧಾನಿ ಮಸ್ಕತ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಘುಪತಿ ಭಟ್‌ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ. 2004ರಲ್ಲಿ ಪ್ರಥಮ ಬಾರಿಗೆ ಉಡುಪಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದ ರಘುಪತಿ ಭಟ್‌ ಅವರು 2008 ಹಾಗೂ 2018 ಹೀಗೆ ಮೂರು ಅವಧಿಗೆ ಶಾಸಕರಾಗಿ ಕಾರ್ಯನಿರ್ವಹಿಸಿರುತ್ತಾರೆ. ಹಡಿಲು ಬಿದ್ದ ಗದ್ದೆಯಲ್ಲಿ ಕೃಷಿ […]

ಕಾಪು ಅಂಚೆ ಕಛೇರಿಯಲ್ಲಿ ದೇಶದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮ

ಕಾಪು: ಕಾಪು ಅಂಚೆ ಕಛೇರಿಯಲ್ಲಿ ದೇಶದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಾಪು ಅಂಚೆ ಸಹಾಯಕರಾದ ಶ್ರೀ. ಶ್ರೀನಿವಾಸ್ ಭಟ್ ಧ್ವಜಾರೋಹಣ ಗೈದರು. ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಡಾ. ಫಾರೂಕ್ ಚಂದ್ರನಗರ, ದ್ವಾದಶಿ ಪಬ್ಲಿಸಿಟಿಯ ದಿವಾಕರ್ ಬಿ.ಶೆಟ್ಟಿ, ಕಳತ್ತೂರು ಶಾಖಾ ಅಂಚೆ ಕಚೇರಿಯ ಅಂಚೆ ಪಾಲಕ ದಿವಾಕರ್ ಡಿ ಶೆಟ್ಟಿ, ಪಡುಬಿದ್ರಿ ಅಂಚೆ ಕಚೇರಿಯ ಅಂಚೆ ಸಹಾಯಕ ಶ್ರೀ ದಯಾನಂದ ಪಿತ್ರೋಡಿ, ಕಾಪು ಅಂಚೆ ಕಚೇರಿಯ ಸಿಬ್ಬಂದಿಗಳಾದ ಶ್ರೀ ನವೀನ್, ಶ್ರೀ ಸುಧೀರ್, ಶ್ರೀ ರಾಜೇಶ್ ಬೆಳಪು, […]

ಮೈಕ್ರೋ ಫೈನಾನ್ಸ್ ಗಳ ಮೇಲೆ ಕ್ರಮಕೈಗೊಳ್ಳಲು ಕೇಂದ್ರ ಸರಕಾರ ವಿಫಲ: ಸಚಿವ ಕೃಷ್ಣಭೈರೇಗೌಡ ವಾಗ್ದಾಳಿ

ಉಡುಪಿ: ಮೈಕ್ರೋ ಫೈನಾನ್ಸ್ ಕಂಪೆನಿಗಳು ಕೇಂದ್ರ ಸರಕಾರದ ಅಡಿಯಲ್ಲಿ ಬರುತ್ತವೆ. ಅವರ ಮೇಲೆ ಕ್ರಮಕೈಗೊಳ್ಳಲು ಕೇಂದ್ರ ಸರಕಾರ ವಿಫಲ ಆಗಿರುವುದರಿಂದ ರಾಜ್ಯ ಸರಕಾರ ಮಧ್ಯಪ್ರವೇಶಿಸಿ ಜನರ ರಕ್ಷಣೆಗೆ ಹೆಜ್ಜೆ ಇಟ್ಟಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು. ಮೈಕ್ರೋ ಫೈನಾನ್ಸ್ ಉಪಟಳ ವಿಚಾರದಲ್ಲಿ ರಾಜ್ಯ ಸರ್ಕಾರ ಬಾಳೆಹಣ್ಣು ತಿಂತಾಯಿದೆಯಾ ಎಂಬ ರವಿಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕೇಂದ್ರ ಸರಕಾರ ಏನು ಚಳ್ಳೆಹಣ್ಣು ತಿನ್ತಾಯಿದೆಯಾ?. ಮೈಕ್ರೋ ಫೈನಾನ್ಸ್ ಕಂಪೆನಿಗಳು ಕೇಂದ್ರ ಸರಕಾರದ ಅಡಿಯಲ್ಲಿ ಬರುತ್ತವೆ. ಕೇಂದ್ರ ಸರಕಾರ […]

ಬದ್ರಿಯಾ ಜುಮ್ಮಾ ಮಸ್ಜಿದ್ ಮಲ್ಲಾರು-ಮಜೂರು ಇದರ ನೂತನ ಅಧ್ಯಕ್ಷರಾಗಿ ಡಾ.ಯು.ಎಂ ಫಾರೂಕ್ ಚಂದ್ರನಗರ ಆಯ್ಕೆ

2025 ನೆ ಸಾಲಿನ ಮಹಾಸಭೆಯ ಬದ್ರಿಯಾ ಜುಮ್ಮಾ ಮಸ್ಜಿದ್ ಮಲ್ಲಾರು-ಮಜೂರು ಇದರ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಸಮಾಜ ಸೇವಕ ಡಾ.ಯು.ಎಂ ಫಾರೂಕ್ ಚಂದ್ರನಗರ ಆಯ್ಕೆಯಾಗಿದ್ದಾರೆ. ಮಹಾಸಭೆ ಸಭಾಧ್ಯಕ್ಷರಾಗಿ ಹಾಜಿಮೋನು ಉಪಾಧ್ಯಕ್ಷರಾಗಿ ಹಸನಬ್ಬ ಮಜೂರು, ಪ್ರದಾನ ಕಾರ್ಯದರ್ಶಿ ಅಶ್ರಫ್ ಮೂಸಾ ಮಜೂರು, ಕಾರ್ಯದರ್ಶಿ ಅಶ್ರಫ್ ಕರಂದಾಡಿ,ರಜಾಬ್ ಕರಂದಾಡಿ ಕೋಶಾಧಿಕಾರಿ ಪಿ.ಎಂ ಇಬ್ರಾಹಿಂ ಪಾದೂರು ಸದಸ್ಯರುಗಳಾಗಿ ಶರ್ಫುದ್ದೀನ್ ಮಜೂರು,ಅಬ್ದುಲ್ ರಝಕ್ ಕೊಪ್ಪಲ್ತೋಟ , ಸಮೀರ್ ಕೆ.ಪಿ, ಅಬ್ದುಲ್ಲಾ ಚಂದ್ರನಗರ, ಹಸನಬ್ಬ ಪಕೀರ್ನಕಟ್ಟೆ, ಫಯಾಜ್ ಹಾಜಿ ಕಿನ್ನಿಗೋಳಿ,ಹುಸೈನ್ ಅಚ್ಚಲ್, ಅಬ್ದುಲ್ […]