ಉಡುಪಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿಯಲ್ಲಿ ರಾಷ್ಟೀಯ ಮತದಾರರ ದಿನಾಚರಣೆ.

ಉಡುಪಿ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆತ್ರಾಡಿಯಲ್ಲಿ ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ರಾಷ್ಟೀಯ ಮತದಾರರ ದಿನಾಚರಣೆಯನ್ನು ಜನವರಿ 25ರಂದು ಆಚರಿಸಲಾಯಿತು. ಮುಖ್ಯ ಶಿಕ್ಷಕಿ ಶ್ರೀಮತಿ ಸರಸ್ವತಿ ಎನ್. ಅವರು ಪ್ರತಿಜ್ಞಾ ವಿಧಿಯನ್ನು ಭೋದಿಸಿದರು. ಕಾರ್ಯಕ್ರಮದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಆತ್ರಾಡಿ ಸತ್ಯಾನಂದ ನಾಯಕ್, ಮಾಜಿ ಪಂಚಾಯತ್ ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ, ಹಳೆವಿದ್ಯಾರ್ಥಿ ಸಂಘದ ಆರಂಭಿಕ ಸದಸ್ಯರು ಅಶೋಕ್ ಕಾಂಚನ್, ಮುಖ್ಯ ಶಿಕ್ಷಕಿ ಶ್ರೀಮತಿ ಸರಸ್ವತಿ ಎನ್, ಶಿಕ್ಷಕಿಯರಾದ ಶ್ರೀಮತಿ ಜ್ಯೋತಿ, ಶ್ರೀಮತಿ ಶಬನಾ ಪರ್ವೀನ್ […]
ಬ್ರಹ್ಮಾವರದ ಹೋಟೆಲ್ ನಲ್ಲಿ ಕೆಲಸ ಮಾಡಲು ಪುರುಷರು ಬೇಕಾಗಿದ್ದಾರೆ

ಬ್ರಹ್ಮಾವರ:ಬ್ರಹ್ಮಾವರದಲ್ಲಿ ನೈಟ್ ಶಿಫ್ಟ್ ಕೆಲಸಕ್ಕೆ, ತಿಂಡಿ ಮಾಡುವ ಘಟಕಕ್ಕೆ, ಕಿಚನ್ ಹೆಲ್ಪರ್ ಕೆಲಸಕ್ಕೆ ಪುರುಷರು ಬೇಕಾಗಿದ್ದಾರೆ. ಯಾವುದೇ ಅನುಭವದ ಅವಶ್ಯಕತೆ ಇಲ್ಲ.ಊಟ ಮತ್ತು ವಸತಿ ಸೌಲಭ್ಯವಿದೆ.ಸಂಪರ್ಕಿಸಿ:9741761153
ಬಿಲ್ಲಾಡಿ:ಖೇಚರಾವುತ ಟ್ರೋಫಿ-2025:2 ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಬಿಲ್ಲಾಡಿ: ಬಿಲ್ಲಾಡಿ ಫ್ರೆಂಡ್ಸ್ ಯುವ ವೇದಿಕೆ ಬಿಲ್ಲಾಡಿ ಇವರ ಆಶ್ರಯದಲ್ಲಿ ಎರಡನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವು ಜನವರಿ 26 ಸಂಜೆ 6 ಗಂಟೆಗೆ ಸರಿಯಾಗಿ ಸರಕಾರಿ ಪ್ರೌಢಶಾಲೆ ಜಾನುವಾರುಕಟ್ಟೆಯಲ್ಲಿ ನಡೆಯಲಿದೆ. ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ಪುರುಷರ ಬಲಿಷ್ಠ 8 ವಾಲಿಬಾಲ್ ತಂಡಗಳ ಸೆಣಸಾಟ. ಹಾಗೂ ವಿದ್ಯಾರ್ಥಿನಿಯರಿಂದ ಉದ್ಘಾಟನಾ ಪಂದ್ಯ ಮತ್ತು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ತಂಡಗಳ ಸಮಾಗಮವು ಎಲ್ಲಾ ಕ್ರೀಡಾಭಿಮಾನಿಗಳ ಕುತೂಹಲತೆಯನ್ನು ಹೆಚ್ಚಿಸಿ, ಹಾಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪ್ರೋತ್ಸಾಹ ನೀಡಬೇಕಾಗಿ ವಿನಂತಿಸುವ ಬಿಲ್ಲಾಡಿ ಫ್ರೆಂಡ್ಸ್ […]
ಮಾರುತಿ ಸುಜೂಕಿ ಕಾರು ಪ್ರಿಯರಿಗೆ ಬಿಗ್ ಶಾಕ್:ಫೆ. 1ರಿಂದ ಕಾರು ಖರೀದಿ ದುಬಾರಿ, ಬಿಡಿಭಾಗಗಳೂ ತುಟ್ಟಿ!

ನವದೆಹಲಿ :ವಾಹನಗಳ ಖರೀದಿ, ಬಿಡಿಭಾಗಗಳ ಖರೀದಿ ದಿನದಿಂದ ದಿನಕ್ಕೆ ಗ್ರಾಹಕರ ಜೇಬಿಗೆ ಭಾರವಾಗುತ್ತಿದೆ. ಇದೀಗ ಖ್ಯಾತ ಕಾರು ತಯಾರಕ ಸಂಸ್ಥೆಯಾದ ಮಾರುತಿ ಸುಜೂಕಿ ಕೂಡ ತನ್ನ ಕಾರುಗಳ ಬೆಲೆಯನ್ನು ಮತ್ತಷ್ಟು ಏರಿದಿದೆ. ಈ ಕುರಿತು ಪ್ರಕಟಣೆ ಹೊರಡಿಸುವ ಸಂಸ್ಥೆಯು ಫೆ. 1 ರಿಂದ ಕಾರುಗಳ ಬೆಲೆ ಏರಿಸುತ್ತೇವೆ ಎಂದಿದೆ. ಇನ್ಪುಟ್ ವೆಚ್ಚಗಳು ಹೆಚ್ಚಳವಾಗಿರುವುದರಿಂದ ಅನಿವಾರ್ಯವಾಗಿ ಕಾರುಗಳ ಬೆಲೆ ಏರಿಕೆ ಮಾಡುತ್ತಿದ್ದೇವೆ ಎಂದು ಸಂಸ್ಥೆ ತಿಳಿಸಿದೆ. ” ಗ್ರಾಹಕರಿಗೆ ಹೊರೆಯಾಗದಂತೆ ಕಾರು ಕೊಡುವ ಉದ್ದೇಶ ಸಂಸ್ಥೆಗಿದ್ದರೂ ಹೆಚ್ಚಿನ ಹಲವು […]
ಬ್ರಹ್ಮಾವರ: ಕಾಡುಪ್ರಾಣಿಗಳ ಬೇಟೆಗೆ ಯತ್ನ: ಮೂವರ ಬಂಧನ

ಉಡುಪಿ: ಕಾಡುಪ್ರಾಣಿಗಳನ್ನು ಬೇಟೆಯಾಡಲು ಸಂಚು ರೂಪಿಸಿ ಅರಣ್ಯದೊಳಗೆ ಪ್ರವೇಶಿಸಿದ್ದ ಭಟ್ಕಳ, ಶಿರೂರು ಮೂಲದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ ಘಟನೆ ಬ್ರಹ್ಮಾವರ ತಾಲೂಕಿನ ವಂಡಾರು ಬಳಿ ನಡೆದಿದೆ. ಭಟ್ಕಳ ಮುಂಡಳ್ಳಿಯ ಮೊಹಮ್ಮದ್ ಅಶ್ರಫ್ ಯಾನೆ ಮಾವಿಯ (23), ಶಿರೂರು ಮೂಲದವರಾದ ವಾಸೀಂ ಅಕ್ರಂ (34), ಅಲಿ ಬಾಪು ಯಾಸಿನ್ (36) ಬಂಧಿತ ಆರೋಪಿಗಳು. ಬಂಧಿತರಿಂದ ಒಂದು ಬಂದೂಕು, 11 ಕಾಡತೂಸು 4 ಹರಿತವಾದ ಚಾಕುಗಳು, ಒಂದು ಮಾಂಸ ಮಾಡಲು ಉಪಯೋಗಿಸುವ ಮಚ್ಚು, ಟಾರ್ಚ್ ಹಾಗೂ […]