ಉಡುಪಿ: ಪೊಲೀಸ್ ಹೆಡ್ ಕಾನ್ಸ್‌ಸ್ಟೇಬಲ್ ಶಿವಾನಂದ ಅವರಿಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕ

ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಹೆಡ್ ಕಾನ್ಸ್‌ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಾನಂದ ಬಿ., ಗಣರಾಜ್ಯೋತ್ಸವ ಸಂದರ್ಭದಲ್ಲಿ ಅತ್ಯುನ್ನತ ಸೇವೆಗಾಗಿ ನೀಡುವ ರಾಷ್ಟ್ರಪತಿ ಅವರ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ. 2005ರಲ್ಲಿ ಪೊಲೀಸ್ ಇಲಾಖೆ ಸೇರ್ಪಡೆಗೊಂಡ ಇವರು, 2009ರಿಂದ ಜಿಲ್ಲಾ ಪೊಲೀಸ್ ಕಚೇರಿಯ ಅಪರಾಧ ಶಾಖೆ, ಚುನಾವಣೆ ಕೋಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು 2019ರಲ್ಲಿ ಮುಖ್ಯಮಂತ್ರಿ ಪದಕವನ್ನು ಪಡೆದಿದ್ದರು.ಏಳು ವರ್ಷಗಳ ಹಿಂದೆ ಇವರು ಹೆಡ್‌ಕಾನ್ಸ್‌ಸ್ಟೇಬಲ್ ಆಗಿ ಪದೋನ್ನತಿ ಹೊಂದಿದ್ದರು. ಪೊಲೀಸ್ ಕರ್ತವ್ಯ ಕೂಟದಲ್ಲಿ ಎರಡು ಬಾರಿ […]
ಮಣಿಪಾಲ: ಕಳೆದ 15 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

ಉಡುಪಿ: ನ್ಯಾಯಾಲಯದ ವಾರಂಟ್ ಇದ್ದರೂ 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಡುಪಿಯ ಬಡಗಬೆಟ್ಟು ಗ್ರಾಮದ ಆದರ್ಶನಗರದ ನಿವಾಸಿ ಬಾಲಾಜಿ ಬಂಧಿತ ಆರೋಪಿ. ಕಳೆದ 15 ವರ್ಷಗಳಿಂದ ತಲೆ ಮರೆಸಿಕೊಂಡಿದ್ದವನನ್ನು ಬೆಂಗಳೂರು ಹರಳೂರು ಬಸ್ಸು ನಿಲ್ದಾಣ ಬಳಿ ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ, ಪಿಎಸ್‌ಐ ಅನಿಲ್ ಕುಮಾರ್, ಪಿಎಸ್‌ಐ ಅಕ್ಷಯ ಕುಮಾರಿ, ಹೆಚ್.ಸಿ ಥಾಮ್ರನ್, ಪಿಸಿ ರವಿರಾಜ್ ಅವರ ತಂಡ ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಚಾಮುಂಡೇಶ್ವರಿ ವಿದ್ಯುತ್ ನಿಗಮದಲ್ಲಿದೆ ಅಪ್ರೆಂಟಿಸ್ ಹುದ್ದೆ: ನೀವು ಆಸಕ್ತರಾ, ಕೂಡಲೇ ಅರ್ಜಿ ಸಲ್ಲಿಸಿ !

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಮೈಸೂರು ಇಲ್ಲಿ ವಿವಿಧ ಅಭ್ಯರ್ಥಿಗಳಿಂದ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಫೆ. 06 ರಂದು ಅಥವಾ ಅದಕ್ಕಿಂತ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ ಏನು, ಅರ್ಹತೆಗಳೇನು ಇಲ್ಲಿದೆ ಮಾಹಿತಿ ಒಟ್ಟು ಹುದ್ದೆಗಳು: 250, ಸ್ಥಳ: ಮೈಸೂರು – ಕರ್ನಾಟಕ, ಹುದ್ದೆಯ ಹೆಸರು ಅಪ್ರೆಂಟಿಸ್ ವೇತನ: ರೂ.8000-9000/- ಪ್ರತಿ ತಿಂಗಳು ಅರ್ಹತೆಗಳೇನು? ಪದವೀಧರ ಅಪ್ರೆಂಟಿಸ್: ಬಿಇ ಅಥವಾ ಬಿ.ಟೆಕ್, ಡಿಪ್ಲೊಮಾ ಅಪ್ರೆಂಟಿಸ್: ಡಿಪ್ಲೊಮಾ, ನಾನ್ ಇಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್: […]
ಉಡುಪಿ: ಐದು ವರ್ಷದ ಮಗುವಿಗೆ ಲೈಂಗಿಕ ದೌರ್ಜನ್ಯ ಪ್ರಕರಣ; ಆರೋಪಿಯನ್ನು ಶೀಘ್ರ ಬಂಧಿಸಲಾಗುವುದು; ಎಸ್ಪಿ ಡಾ. ಅರುಣ್

ಉಡುಪಿ: ಐದು ವರ್ಷದ ಮಗುವಿಗೆ ಲೈಂಗಿಕ ದೌರ್ಜನ್ಯ ನೀಡಿದ ವ್ಯಕ್ತಿಯನ್ನು ಶೀಘ್ರ ಬಂಧಿಸಲಾಗುವುದು ಎಂದು ಡಾ. ಅರುಣ್ ಹೇಳಿದ್ದಾರೆ. ಪ್ರಕರಣದ ಕುರಿತು ಮಾಹಿತಿ ನೀಡಿದ ಅವರು, ಆರೋಪಿ ಕನ್ನಡ ಹಾಗೂ ತುಳು ಭಾಷೆಯಲ್ಲಿ ಭಿಕ್ಷೆ ಬೇಡುತ್ತಿದ್ದ. ಆಟವಾಡುತ್ತಿದ್ದ ಮಗುವಿಗೆ ಕೈಸನ್ನೆ ಮೂಲಕ ಚಾಕಲೇಟ್ ಆಸೆ ತೋರಿಸಿ ಕರೆದಿದ್ದಾನೆ. ಮಗುವನ್ನು ಪುಸಲಾಯಿಸಿ ಕಾಲು ದಾರಿಯಲ್ಲಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮಗುವಿನ ಖಾಸಗಿ ಅಂಗಗಳನ್ನು ಮುಟ್ಟುತ್ತಲೇ ಮಗು ಕಿರುಚಾಡಿದೆ. ಕೂಡಲೇ ಆರೋಪಿ ಪರಾರಿಯಾಗಿದ್ದು ಸಂಬಂಧಿಕರು, ಸ್ಥಳೀಯರು ವಿಚಾರಿಸಿದಾಗ […]
ದೊಡ್ಡಣಗುಡ್ಡೆ: ಮೂರು ದಿನಗಳ “ಫಲಪುಷ್ಪ ಪ್ರದರ್ಶನ”ಕ್ಕೆ ಜಿಲ್ಲಾಧಿಕಾರಿ ಚಾಲನೆ

ಉಡುಪಿ: ದೊಡ್ಡಣಗುಡ್ಡೆಯ ತೋಟಗಾರಿಕೆ ಇಲಾಖೆಯ ಪುಷ್ಪ ಹರಾಜು ಕೇಂದ್ರದಲ್ಲಿ ಆಯೋಜಿಸಿರುವ ಮೂರು ದಿನಗಳ “ಫಲಪುಷ್ಪ ಪ್ರದರ್ಶನಕ್ಕೆ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಇಂದು ಚಾಲನೆ ನೀಡಿದರು. ಜಿಲ್ಲಾಡಳಿತ, ಜಿಪಂ ಹಾಗೂ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿತ್ತು.ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಅವರು, ಫಲಪುಷ್ಪ ಮೇಳವನ್ನು ವಿಶೇಷ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ರಾಜ್ಯ ಸರಕಾರದ ಗ್ಯಾರಂಟಿ ಯೋಜನೆಯ ಪರಿಕಲ್ಪನೆಗಳನ್ನು ಪುಷ್ಪಗಳಿಂದಲೇ ಅನಾವರಣಗೊಳಿಸಲಾಗಿದೆ. ವಿವಿಧ ಪ್ರಕಾರದ ಫಲಪುಷ್ಪಗಳಿದ್ದು, ಸಾರ್ವಜನಿಕರು ಇದರ ಸದುಪಯೋಗ […]