ಮಂಗಳೂರಿನಲ್ಲಿರುವ USA ಮೂಲದ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ.

ಮಂಗಳೂರು:ಮಂಗಳೂರಿನಲ್ಲಿರುವ USA ಮೂಲದ ಕಂಪನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: ◾ಧ್ವನಿ ಪ್ರಕ್ರಿಯೆ (voice process- 15) ◼ ಧ್ವನಿರಹಿತ ಪ್ರಕ್ರಿಯೆ (non voice process- 15) ◾ಟೆಕ್ನಕಲ್ ಸಪೋರ್ಟ್ (Technical support -7) ◼ ಡಿಜಿಟಲ್ ಮಾರ್ಕೆಟಿಂಗ್ ◼ ಅಕೌಂಟೆಂಟ್ ◾ಹಣಕಾಸು ವ್ಯವಸ್ಥಾಪಕ ◼ ಫ್ರಂಟ್ ಆಫೀಸ್ ಎಕ್ಸಿಕ್ಯೂಟಿವ್ ◾ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ◾ ಇಂಟೀರಿಯರ್ ಡಿಸೈನರ್ ಅಥವಾ ಸೂಪರ್ವೈಸರ್ ◾ ಕಚೇರಿ ಹುಡುಗ ◼ ಡ್ರೈವರ್ ಸಂಬಳ 15000 ದಿಂದ 45000 ರವರೆಗೆ. ಹೆಚ್ಚಿನ […]

ಉಡುಪಿ:ನಿವೃತ್ತ ಮುಖ್ಯೋಪಾಧ್ಯಾಯ ರಾಮಚಂದ್ರ ಐತಾಳ್ ನಿಧನ.

ಉಡುಪಿ: ನಿವೃತ್ತ ಮುಖ್ಯೋಪಾಧ್ಯಾಯ ರಾಮಚಂದ್ರ ಐತಾಳ್ ಅವರು ವಯೋಸಹಜ ಅನಾರೋಗ್ಯದಿಂದ ಶುಕ್ರವಾರ ನಿಧನ ಹೊಂದಿದರು. ಅವರ ಪಾರ್ಥಿವ ಶರೀರವನ್ನು ಸಂಜೆ 7ರಿಂದ 6 ಗಂಟೆಯವರೆಗೆ ಉಡುಪಿಯ ಹಯಗ್ರೀವ ನಗರದಲ್ಲಿರುವ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು. ಬಳಿಕ ರಾತ್ರಿ 7:30 -8.30 ಗಂಟೆಯವರೆಗೆ ಪೆರ್ಡೂರಿನ ಸ್ವಗೃಹದಲ್ಲಿ ಇರಿಸಲಾಗುವುದು. ಬಳಿಕ ಪೆರ್ಡೂರಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. .

ಜ.26ರಂದು “ಗುರುವಂದನಾ ಕಾರ್ಯಕ್ರಮ”

ಉಡುಪಿ: ಗುಂಡಿಬೈಲು ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಗಳ ಗುರುವಂದನಾ ಸಮಿತಿಯ ವತಿಯಿಂದ “ಗುರುವಂದನಾ ಕಾರ್ಯಕ್ರಮ” ವನ್ನು ಇದೇ ಜ.26ರಂದು ಸಂಜೆ 4ಗಂಟೆಗೆ ದೊಡ್ಡಣಗುಡ್ಡೆಯ ಸರಕಾರಿ ಆಟದ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ರಾವ್ ತಿಳಿಸಿದರು. ಈ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 4ರಿಂದ 5 ರವರೆಗೆ ಹಳೆ ವಿದ್ಯಾರ್ಥಿ ಹಾಗೂ ಗುರುಗಳ ಕುಶಲೋಪರಿ ಮಾತುಕತೆ ನಡೆಯಲಿದೆ. ಸಂಜೆ 6ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಬಳಿಕ […]

ಉಡುಪಿ ಶ್ರೀಕೃಷ್ಣಮಠಕ್ಕೆ ಸಂಸದ ಬಿ.ವೈ ರಾಘವೇಂದ್ರ ಭೇಟಿ; ಪುತ್ತಿಗೆ ಶ್ರೀಗಳಿಂದ ಕೋಟಿಗೀತಾ ಲೇಖನಯಜ್ಞ ದೀಕ್ಷೆ ಸ್ವೀಕಾರ

ಉಡುಪಿ: ಉಡುಪಿ ಶ್ರೀಕೃಷ್ಣಮಠಕ್ಕೆ ಇಂದು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಅವರು ಭೇಟಿ ನೀಡಿ ಶ್ರೀಕೃಷ್ಣ ಮುಖ್ಯಪ್ರಾಣ ದೇವರ ದರ್ಶನ ಮಾಡಿದರು. ಬಳಿಕ ಗೀತಾ ಮಂದಿರದಲ್ಲಿ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರಿಂದ ಕೋಟಿಗೀತಾ ಲೇಖನಯಜ್ಞ ದೀಕ್ಷೆ ಹಾಗೂ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳಿ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಂದಾಪುರ ಉಪಸ್ಥಿತರಿದ್ದರು.

ಈ ಮಹಿಳೆ ಕೊಟ್ಟ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಕೆಲ ದಿನಗಳಲ್ಲೇ ತೂಕ ಇಳಿಸಬಹುದು !

ತೂಕ ಇಳಿಸೋದೇ ಈ ಕಾಲದ ಬಹುತೇಕ ಮಂದಿಯ ದೊಡ್ಡ ಸಮಸ್ಯೆ, ಸುಲಭದಲ್ಲಿ ತೂಕ ಇಳಿಸಲು ಏನಾದ್ರೂ ಟಿಪ್ಸ್ ಇದ್ರೆ ಹೇಳಿ ಎಂದು ಕೇಳುವವರಿದ್ದಾರೆ. ಅಂತವರಿಗೆ  ಇತ್ತೀಚೆಗೆ ಸಿಂಪಲ್ಲಾಗಿ ಕೆಲವು ದಿನಗಳಲ್ಲೇ 33 ಕೆ ಜಿ ತೂಕ ಇಳಿಸಿಕೊಂಡ ತರಬೇತುದಾರರಾದ ನಿಧಿ ಗುಪ್ತಾ ಕೆಲವು ಸಿಂಪಲ್ ಟಿಪ್ಸ್ ಗಳನ್ನು ಕೊಟ್ಟಿದ್ದಾರೆ. ನೀವೂ ತೂಕ ಇಳಿಸುವ ಯೋಚನೆಯಲ್ಲಿದ್ರೆ ಈ ಟಿಪ್ಸ್ ಮಿಸ್ ಮಾಡದೇ ಫಾಲೋ ಮಾಡಿ. ನೇರ ಪ್ರೋಟೀನ್, ತಾಜಾ ತರಕಾರಿಗಳು, ಹಣ್ಣುಗಳು, ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳಂತಹ ಸಂಪೂರ್ಣ, […]