ಉಡುಪಿಯಲ್ಲಿ ಸ್ಟೋರ್ ಕೀಪಿಂಗ್/ಮ್ಯಾನೇಜ್ಮೆಂಟ್ ಹುದ್ದೆಗೆ ನೇಮಕಾತಿ

ಉಡುಪಿ:ಉಡುಪಿಯಲ್ಲಿ ಸ್ಟೋರ್ ಕೀಪಿಂಗ್/ಮ್ಯಾನೇಜ್ಮೆಂಟ್ ಹುದ್ದೆಗೆ ನೇಮಕಾತಿ ನಡೆಯಲಿದೆ. ಅರ್ಹತೆಗಳು:ಮೆಕ್ಯಾನಿಕಲ್ ಡಿಪ್ಲೊಮಾ ಜೊತೆ ಎಕ್ಸೆಲ್‌ನಲ್ಲಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ. ಫ್ರೆಶರ್ಸ್ ಅಥವಾ 2 ವರ್ಷಗಳ ಅನುಭವ ಇರಬೇಕು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಜನರಲ್ ಕ್ರಾಫ್ಟರ್ಸ್ ರೆಫ್ರಿಜರೇಶನ್ ಪ್ರೈವೇಟ್ ಲಿಮಿಟೆಡ್ ವಾದಿರಾಜ ರಸ್ತೆ, ಉಡುಪಿ- 576101 ಸಂಪರ್ಕ ಸಂಖ್ಯೆ 9448764818

ಮಹಾಕುಂಭ ಮೇಳ: ಪೇಜಾವರ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಂದ ಪುಣ್ಯಸ್ನಾನ

ಪ್ರಯಾಗ್ ರಾಜ್: ಉಡುಪಿ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಶುಕ್ರವಾರ ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಮಾಡಿದರು. ಬಳಿಕ ಆಶೀರ್ವಚನ ನೀಡಿದ ಪೇಜಾವರ ಶ್ರೀಗಳು, ನಾವು ಏನೇ ಶುಭ ಕಾರ್ಯ ಮಾಡುವಂತಹ ಸಂದರ್ಭದಲ್ಲಿ ನದಿಗಳನ್ನು ಸ್ಮರಿಸುತ್ತೇವೆ. ನದಿಗಳ ಸ್ಮರಣೆ ಮಾಡುವ‌ ಮೂಲಕ ಪವಿತ್ರರಾಗುತ್ತೇವೆ. ನದಿಗಳೆಲ್ಲವೂ ಭಗವಂತನ ಪಾದದಿಂದ ಹರಿದು ಬಂದವು. ಅಂತಹ ಪುಣ್ಯ ನದಿಗಳ ಸಂಗಮ ಸ್ಥಳದಲ್ಲಿ ಇಂದು ಪವಿತ್ರ ಸ್ನಾನ ಮಾಡಿದ್ದು, ಎಲ್ಲರಿಗೂ ಒಳಿತಾಗಲಿ, ದೇಶಕ್ಕೆ ಸುಭಿಕ್ಷೆಯಾಗಲಿ ಎಂದು ಹಾರೈಸಿದರು.

ಪಡುಬಿದ್ರಿ: ಪೊಲೀಸರಿಂದ 16.62 ಲಕ್ಷ ರೂ.ಮೌಲ್ಯದ ಗಾಂಜಾ ನಾಶ

ಉಡುಪಿ: ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಂಡ ಸುಮಾರು 27 ಕೆಜಿ 970ಗ್ರಾಂ 120 ಮಿಲಿಗ್ರಾಂ ತೂಕದ ಅಂದಾಜು 16,62,804 ರೂ. ಮೌಲ್ಯದ ಗಾಂಜಾವನ್ನು ನಾಶಪಡಿಸಲಾಯಿತು. ಪಡುಬಿದ್ರಿ ಠಾಣಾ ವ್ಯಾಪ್ತಿಯ ಆಯುಷ್ ಎನ್‌ವಿರೋಟೆಕ್ ಪ್ರೈ. ಎಂಬಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ನಾಶಪಡಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಡ್ರಗ್ ಡಿಸ್‌ಪೋಸಲ್ ಕಮಿಟಿಯ ಅಧ್ಯಕ್ಷ ಡಾ. ಅರುಣ್ ಕೆ., ಜಿಲ್ಲಾ ಡ್ರಗ್ ಡಿಸ್‌ಪೋಸಲ್ ಕಮಿಟಿ ಸದಸ್ಯರು ಹಾಗೂ ಪೊಲೀಸ್ ಉಪಾಧೀಕ್ಷಕ […]

ವಿಮಾನ ನಿಲ್ದಾಣ ಪ್ರಾಧಿಕಾರದಲ್ಲಿದೆ ಒಳ್ಳೊಳ್ಳೆ ಉದ್ಯೋಗಾವಕಾಶಗಳು: ಯಾರು ಅರ್ಜಿ ಸಲ್ಲಿಸಬಹುದು?

ವಿಮಾನ ನಿಲ್ದಾಣ ಪ್ರಾಧಿಕಾರವು ಒಂದೊಳ್ಳೆ ಸಂಬಳದೊಂದಿಗೆ ಉದ್ಯೋಗ ನೀಡಲು ಹೊರಟಿದೆ. ಇಟ್ಟು 89 ಹುದ್ದೆಗಳು ಸಿದ್ದ ಇದೆ ನೋಡಿ, ಉಳಿದ ಅರ್ಹತೆಗಳು ಏನಿರಬೇಕು ಯಾರು ಅರ್ಜಿ ಸಲ್ಲಿಸಬಹುದು ಇಲ್ಲಿದೆ ನೋಡಿ ಮಾಹಿತಿ ಹುದ್ದೆ ಯಾವುದು? ಕಿರಿಯ ಸಹಾಯಕರು (ಫೈರ್ ಸರ್ವಿಸ್) ವಿದ್ಯಾರ್ಹತೆ ಏನು? ಎಸ್ಸೆಸ್ಸೆಲ್ಸಿಯಲ್ಲಿ ಉತ್ತೀರ್ಣ ಜೊತೆಗೆ ಮೆಕ್ಯಾನಿಕಲ್, ಆಟೊಮೊಬೈಲ್ ಅಥವಾ ಅಗ್ನಿಶಾಮಕ ವಿಭಾಗದಲ್ಲಿ ಡಿಪ್ಲೋಮಾ ಅಥವಾ ಪಿಯುಸಿ ಉತ್ತೀರ್ಣ, ಆಯ್ಕೆ ಪ್ರಕ್ರಿಯೆ ಹೇಗೆ? ಎರಡು ಹಂತದಲ್ಲಿ ಆಯ್ಕೆ ನಡೆಯಲಿದೆ. ಮೊದಲ ಹಂತ ಕಂಪ್ಯೂಟರ್ ಆಧಾರಿತ ಪರೀಕ್ಷೆ.ಬಳಿಕ […]

ಕರ್ನಾಟಕ ರಾಜ್ಯಮಟ್ಟದ ವಕೀಲರ ಕ್ರೀಡಾಕೂಟ: ಉದ್ಘಾಟನೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿಗೆ ಆಹ್ವಾನ

ಉಡುಪಿ:ಉಡುಪಿ ವಕೀಲರ ಸಂಘದ ನಿಯೋಗವು ಸುಪ್ರೀಮ್ ಕೋರ್ಟಿನ ಗೌರವಾನ್ವಿತ ನ್ಯಾಯಮೂರ್ತಿ ಶ್ರೀಮತಿ ಬಿ.ವಿ. ನಾಗರತ್ನ ಇವರನ್ನು ತಾ. 15ರಂದು ನವದೆಹಲಿಯ ಅವರ ನಿವಾಸದಲ್ಲಿ ಭೇಟಿಯಾದರು. ಉಡುಪಿ ನ್ಯಾಯಾಲಯ ಹಾಗೂ ವಕೀಲರ ಸಂಘದ ಶತಮಾನೋತ್ತರ ಬೆಳ್ಳಿ ಹಬ್ಬದ ಮುಂದುವರಿದ ಭಾಗವಾಗಿ ಉಡುಪಿ ವಕೀಲರ ಸಂಘವು ಮಾರ್ಚ್ ತಾ. 1 ಮತ್ತು 2ರಂದು ಎಮ್.ಜಿ.ಎಮ್. ಕಾಲೇಜಿನ ಎ.ಎಲ್.ಎನ್. ರಾವ್ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಕರ್ನಾಟಕ ರಾಜ್ಯ ಮಟ್ಟದ ವಕೀಲರ ಕ್ರಿಕೆಟ್ – ವಾಲಿಬಾಲ್ – ತ್ರೋಬಾಲ್ ಮತ್ತು ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ […]