ಹಸವಿನ ಹಾಲು ಕರೆಯುವ ಸ್ಪರ್ಧೆ: ಅರ್ಜಿ ಆಹ್ವಾನ.

ಮಂಗಳೂರು: ಪ್ರಸಕ್ತ (2024-25ನೇ) ಸಾಲಿನಲ್ಲಿ ಮಂಗಳೂರು ತಾಲೂಕು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಹಾಗೂ ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಜಂಟಿ ಆಶ್ರಯದಲ್ಲಿ ನಡೆಯುವ ಹಸುವಿನ ಹಾಲು ಕರೆಯುವ ಸ್ಪರ್ಧೆಗೆ ಅರ್ಜಿ ಆಹ್ವಾನಿಸಲಾಗಿದೆ. ತಾಲೂಕಿನ ಆಸಕ್ತ ರೈತರು (ಅತೀ ಹೆಚ್ಚು ಹಾಲು ಹಿಂಡುವ-ಪ್ರತಿ ದಿನಕ್ಕೆ 15 ಲೀ ಹಾಲು ಮತ್ತು ಮೇಲ್ಪಟ್ಟ ಹಸು) ಜ.26ರೊಳಗೆ ಹೆಸರು ನೋಂದಾಯಿಸಬಹುದು. ಇಲಾಖೆಯಿಂದ ನಿಯೋಜಿಸಿದ ಆಯ್ಕೆ ಸಮಿತಿಯ ಮುಂದೆ ಹಸುವಿನ ಹಾಲನ್ನು ಕರೆದು, ಅಳತೆ ಮಾಡಿಸಲು ಒಪ್ಪಿಗೆ ನೀಡಬೇಕು. […]

ಉಡುಪಿ: ರಾಧಾ ಎಸ್.ಆರ್ ಅವರಿಗೆ ಪಿಎಚ್.ಡಿ ಪದವಿ.

ಉಡುಪಿ: ಮೈಸೂರು ವಿಶ್ವವಿದ್ಯಾನಿಲಯದ ಮಂಡ್ಯ ತೂಬಿನಕೆರೆಯ ಸರ್ ಎಂ.ವಿಶ್ವೇಶ್ವರಯ್ಯ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಚಂದ್ರಕಿರಣ್ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ’ಮಹಾಶ್ವೇತಾ ದೇವಿ ಹಾಗೂ ಸಾರಾ ಅಬೂಬಕ್ಕರ್ ಕೃತಿಗಳಲ್ಲಿ ಸ್ತ್ರೀ ಸಂವೇದನೆ’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಪಿಎಚ್.ಡಿ ಪದವಿ ನೀಡಿದೆ. ಬೆಂಗಳೂರಿನ ಬಿಎಂಎಸ್ ಮಹಿಳಾ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿರುವ ಡಾ.ರಾಧಾ ಎಸ್.ಆರ್., ಮಾಗಡಿ ಸಂಕೀಘಟ್ಟದ ದಿ. ಎಂ.ಎನ್.ರಾಮಣ್ಣ ಹಾಗೂ ಸಿ.ಕೆ.ಪದ್ಮ ಅವರ ಪುತ್ರಿ ಹಾಗೂ ಉದಯವಾಣಿ ಮಾಜಿ ಉಪ ಸಂಪಾದಕ, ವ್ಯಂಗ್ಯಚಿತ್ರಕಾರ […]