ಬಿಜೆಪಿ ಪಕ್ಷದ ಒಳಜಗಳಕ್ಕೂ ನಮಗೂ ಸಂಬಂಧ ಇಲ್ಲ

ಉಡುಪಿ: ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆ ವಿಚಾರ ಹಾಗೂ ಡಿಕೆಶಿ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ವಿಷಯಕ್ಕೆ ಗೃಹ ಸಚಿವ ಜಿ ಪರಮೇಶ್ವರ್ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿದರು. ಬಿಜೆಪಿ ಪಕ್ಷದ ಒಳಜಗಳಕ್ಕೂ ನಮಗೂ ಸಂಬಂಧ ಇಲ್ಲ. ಅದು ಅವರ ಆಂತರಿಕ ವಿಚಾರ. ಆದರೆ, ಅವರು ನಮ್ಮ ಬಗ್ಗೆ ಟೀಕೆ ಮಾಡುತ್ತಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ನಾಲ್ಕಾರು ಗುಂಪುಗಳಿವೆ ಎನ್ನುತ್ತಿದ್ದರು. ಕಾಂಗ್ರೆಸ್ ಪಕ್ಷಕ್ಕೆ ನಾಲ್ಕು ಬಾಗಿಲು ಎನ್ನುತ್ತಿದ್ದರು. ಕಾಂಗ್ರೆಸ್ ಒಡೆದು ಹೋಗಿದೆ ಚೂರು ಚೂರು ಆಗಿದೆ ಎನ್ನುತ್ತಿದ್ದರು. ಈಗ ನಾವು ಕೂಡ ಅವರನ್ನು […]
ಉಡುಪಿ:ರಾಷ್ಟ್ರೀಯ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಕಾರ್ಯಾಗಾರ

ಉಡುಪಿ: ಪ್ರವಾಸೋದ್ಯಮ ಇಲಾಖೆ ವತಿಯಿಂದ ರಾಷ್ಟ್ರೀಯ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಕರಾವಳಿ ಪ್ರವಾಸೋದ್ಯಮ ಸಂಘಟನೆ ಉಡುಪಿ ಜಿಲ್ಲೆ ಇವರ ವತಿಯಿಂದ ಕೃಷಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಜನವರಿ 25 ರಂದು ಬೆಳಗ್ಗೆ 11.30 ಕ್ಕೆ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್‌ನ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಕೃಷಿ ಪ್ರವಾಸೋದ್ಯಮದ ಕುರಿತು ಕಾರ್ಯಾಗಾರ ಹಾಗೂ ಪ್ರವಾಸೋದ್ಯಮ ಇಲಾಖೆಯ ನೂತನ ವೆಬ್‌ಸೈಟ್ ಅನಾವರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಕೃಷಿ ಪ್ರವಾಸೋದ್ಯಮಕ್ಕೆ ಇಲಾಖೆಗಳಿಂದ ದೊರಕುವ ಸವಲತ್ತುಗಳ […]
ಕಿನ್ನಿಮುಲ್ಕಿ ನ್ಯಾಷನಲ್ ಅಲ್ಯೂಮಿನಿಯಂ ಟ್ರೇಡರ್ಸ್’ನಲ್ಲಿ ಗೃಹ ಬಳಕೆಯ ವಸ್ತುಗಳ ಅಪಾರ ಸಂಗ್ರಹ

ಉಡುಪಿ: ಉಡುಪಿ ಕಿನ್ನಿಮುಲ್ಕಿ, ಆಲ್ಫಾ ಟವರ್, ಬಸ್ ನಿಲ್ದಾಣ ಹತ್ತಿರ ಇರುವ ನ್ಯಾಷನಲ್ ಅಲ್ಯೂಮಿನಿಯಂ ಟ್ರೇಡರ್ಸ್ ನಲ್ಲಿ ಗೃಹ ಬಳಕೆಯ ವಸ್ತುಗಳ ಅಪಾರ ಸಂಗ್ರಹವಿದೆ. ಅಲ್ಯೂಮಿನಿಯಂ ಎಕ್ಸ್ಟ್ರಾಷನ್ ವಿಂಡೋ, ವಿಭಜನಾ ಸೀಲಿಂಗ್ ವಸ್ತುಗಳು, ACP ಶೀಟ್‌ಗಳು, PVC ರಬ್ಬರ್ ಬೀಡಿಂಗ್‌ಗಳು ಅಲ್ಯೂಮಿನಿಯಂ ಗ್ರಿಲ್, PVC ಬಾಗಿಲುಗಳು ಮತ್ತು ಹಾರ್ಡ್‌ವೇರ್ ಐಟಂ ಗಳು ಲಭ್ಯವಿದೆ. ಹಾಗೂ ಗೃಹೋಪಯೋಗಿ ಉಪಕರಣಗಳಾದ ಅಲ್ಯೂಮಿನಿಯಂ ಟ್ಯೂಬ್‌ಗಳು,ಅಲ್ಯೂಮಿನಿಯಂ ಫ್ಲಾಟ್ ಪ್ಲೇಟ್ಗಳು, ಕೋನಗಳು, ಅಲ್ಯೂಮಿನಿಯಂ ರೋಲ್ ಗಳು, ಚೆಕರ್ಡ್ ಪ್ಲೇಟ್‌ಗಳು, ಅಲ್ಯೂಮಿನಿಯಂ ಗ್ರಿಲ್, ಯಂತ್ರಾಂಶಗಳು,ಸಿಲಿಕಾನ್, PVC […]
ಬಿಜೆಪಿಯಿಂದ ಉಚ್ಛಾಟಿತ ಮಾಜಿ ಶಾಸಕರಿಂದ ಕೃತಘ್ನತೆಯ ಪಾಠ ಹಾಸ್ಯಾಸ್ಪದ : ದಿನೇಶ್ ಅಮೀನ್

ಬಿಜೆಪಿ ಪಕ್ಷದಿಂದ ನಗರಸಭೆ ಸದಸ್ಯ, 3 ಬಾರಿ ಶಾಸಕ, ಪಕ್ಷದ ಜಿಲ್ಲಾಧ್ಯಕ್ಷ ಸಹಿತ ವಿವಿಧ ಹುದ್ದೆಗಳನ್ನು ಅಲಂಕರಿಸಿ ಅಧಿಕಾರ ದಾಹದಿಂದ ಬಂಡಾಯ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿದ ಬಿಜಿಪಿಯ ಉಚ್ಛಾಟಿತ ಮಾಜಿ ಶಾಸಕರು ಹಾಲಿ ಶಾಸಕರಿಗೆ ಕೃತಘ್ನತೆಯ ಪಾಠ ಹೇಳಲು ಹೊರಟಿರುವುದು ಹಾಸ್ಯಾಸ್ಪದ ಎಂದು ಉಡುಪಿ ನಗರ ಬಿಜೆಪಿ ಅಧ್ಯಕ್ಷರಾದ ದಿನೇಶ್ ಅಮೀನ್ ವ್ಯಂಗ್ಯವಾಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಹೊಸ ಅಭ್ಯರ್ಥಿಗಳಿಗೆ ಅವಕಾಶ ನೀಡಿದ ಸಂದರ್ಭದಲ್ಲಿ ತಮ್ಮ ಪಕ್ಷ […]
ಮಂಗಳೂರು ಮಸಾಜ್ ಪಾರ್ಲರ್ ದಾಳಿ ಪ್ರಕರಣ; ಆರೋಪಿಗಳ ತಕ್ಷಣ ಬಂಧನಕ್ಕೆ ಸೂಚನೆ- ಗೃಹ ಸಚಿವ ಪರಮೇಶ್ವರ್

ಉಡುಪಿ: ಮಂಗಳೂರಿನ ಮಸಾಜ್ ಪಾರ್ಲರಿಗೆ ದಾಳಿ ಮಾಡಿದವರನ್ನು ತಕ್ಷಣ ಬಂಧಿಸಿ, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ಕೊಟ್ಟಿದ್ದೇನೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು. ಉಡುಪಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವ ಉದ್ದೇಶಕ್ಕೆ ಪಾರ್ಲರ್ ಮೇಲೆ ದಾಳಿಯಾಗಿದೆ ಎಂಬುವುದು ಗೊತ್ತಿಲ್ಲ. ಇಂತಹ ಕೃತ್ಯಗಳು ನಡೆಯಬಾರದು. ಯಾರಿಗೂ ವ್ಯಾಪಾರ ಮಾಡಿಕೊಳ್ಳುವುದಕ್ಕೆ ಅಡ್ಡಿಪಡಿಸಬಾರದು. ಪ್ರತಿಯೊಬ್ಬರಿಗೂ ಕೆಲಸ ಮಾಡಿಕೊಳ್ಳುವ ಹಕ್ಕಿದೆ. ಯಾರು ಕೂಡ ಕಾನೂನು ಕೈಗೆ ಎತ್ತಿಕೊಳ್ಳಬಾರದು ಎಂದರು. ಮಸಾಜ್ ಪಾರ್ಲರ್ ಗೆ ದಾಳಿ ಮಾಡಿದವರು […]