ಜನನಿ ಎಂಟರ್ಪ್ರೈಸಸ್ ಬ್ರಹ್ಮಾವರ, ಕುಂದಾಪುರ,ಹಂಗಳೂರಿ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ:ಜನನಿ ಎಂಟರ್ಪ್ರೈಸಸ್ ಬ್ರಹ್ಮಾವರ, ಕುಂದಾಪುರ ದಲ್ಲಿ ವಿವಿಧ ರೀತಿಯ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: ▪️ಮ್ಯಾನೇಜರ್▪️ಸೇಲ್ಸ್ ಎಕ್ಸಿಕ್ಯೂಟಿವ್▪️ಬಿಲ್ಲಿಂಗ್▪️ಡ್ರೈವರ್▪️ವಿತರಣಾ ಕಾರ್ಯನಿರ್ವಾಹಕ(Delivery Executive)▪️ಟೆಲಿಕಾಲರ್▪️ಸೇವಾ ತಂತ್ರಜ್ಞ (Service Technician) ಮಾಹಿತಿಗಾಗಿ ಕರೆ ಮಾಡಿ: +91 96110 97699 +91 95918 61221

ಉಡುಪಿ:ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ವಹಿಸಿ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ: ನಗರ ಹಾಗೂ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಅಗತ್ಯಇರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ ಕೆ.ವಿದ್ಯಾಕುಮಾರಿ ಅವರು ಸೂಚನೆ ನೀಡಿದರು. ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಾಯಿ ಕಡಿತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಬಗ್ಗೆ ಅನೇಕ ದೂರುಗಳು ಸಹಬರುತ್ತಿವೆ. ನಾಯಿಗಳ ಸಂತಾನ ನಿಯಂತ್ರಣ […]

ಗೋವಂಶ ಸುರಕ್ಷೆಗೆ ಜ.23ರಿಂದ ಪಾರಾಯಣ, ಜಪ ಅಭಿಯಾನ ನಡೆಸಿ: ಪೇಜಾವರ ಶ್ರೀ ಕರೆ

ಉಡುಪಿ: ರಾಜ್ಯದ ವಿವಿಧೆಡೆ ನಡೆಯುತ್ತಿರುವ ಗೋವುಗಳ ಮೇಲಿನ ಕ್ರೌರ್ಯ, ದೌರ್ಜನ್ಯ ಖಂಡಿಸಿ ಎಲ್ಲರೂ ಜ. 25ರಂದು ಒಂದು ದಿನದ ಉಪವಾಸ ವ್ರತ ಹಾಗೂ ಜ.23ರಿಂದ 29ರವರೆಗೆ ಗೋವಂಶ ಸುರಕ್ಷೆಗೆ ಪ್ರಾರ್ಥಿಸಿ ಕೋಟಿ ವಿಷ್ಣು ಸಹಸ್ರನಾಮ ಪಾರಾಯಣ, ಶಿವ ಪಂಚಾಕ್ಷರ ಜಪ ಅಭಿಯಾನ ಕೈಗೊಳ್ಳಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಕರೆ ನೀಡಿದ್ದಾರೆ. ಗೋವುಗಳ ಮೇಲಿನ ದೌರ್ಜನ್ಯ, ಹಿಂಸೆ, ಗೋವಧೆ, ದುರಾಕ್ರಮಣಗಳು, ಗೋವಿನ ಆರ್ತನಾದಗಳು ಯಾವತ್ತೂ ಶ್ರೇಯಸ್ಸು ಉಂಟು ಮಾಡುವುದಿಲ್ಲ. ಬದಲಾಗಿ ಅದು ನೆಲದ ದುರ್ಭಿಕ್ಷೆ, ಅಶಾಂತಿ, […]

ಉಡುಪಿ:ಮಲ್ಟಿ ಕ್ಯೂಸೈನ್ ಕುಕ್ ತರಬೇತಿ: ಮರು ಅರ್ಜಿ ಆಹ್ವಾನ

ಉಡುಪಿ: ಪ್ರಸಕ್ತ ಸಾಲಿನಲ್ಲಿ ಪ್ರವಾಸೋದ್ಯಮ/ಆತಿಥ್ಯ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆತಿಥ್ಯ ಕ್ಷೇತ್ರದ ಸಂಸ್ಥೆಗಳಾದ ಫುಡ್ ಕ್ರಾಫ್ಟ್ ಇನ್ಸ್ಟಿಟ್ಯೂಟ್ ಮೈಸೂರು ಹಾಗೂ ಇನ್ಸ್ಟಿಟ್ಯೂಟ್ ಆಫ್ ಹೋಟೆಲ್ ಮ್ಯಾನೇಜ್‌ಮೆಂಟ್ ಬೆಂಗಳೂರು ಇವರ ಮೂಲಕ ವಸತಿ ಸಹಿತ ಕಾರ್ಯಕ್ರಮವನ್ನು ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ರಾಜ್ಯಾದ್ಯಂತ 20 ರಿಂದ 45 ವರ್ಷದೊಳಗಿನ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳಿಂದ ಫುಡ್ ಮತ್ತು ಬಿವರೇಜ್ ಸರ್ವೀಸ್ ಸ್ಟೀವರ್ಡ್ ತರಬೇತಿ, ರೂಮ್ ಅಟೆಂಡೆಂಟ್ ತರಬೇತಿ, ಫ್ರಂಟ್ ಆಫೀಸ್ […]