ಭರತನಾಟ್ಯದಲ್ಲಿ ಅನ್ವಿತಾ ಮುಗೇರಾಯ ರ‍್ಯಾಂಕ್

ಕಾರ್ಕಳ: ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮಾತು ಪ್ರದರ್ಶನ ಕಾಲೇಜುಗಳ ವಿಶ್ವವಿದ್ಯಾನಿಲಯ, ಮೈಸೂರು 2024 ನೇ ಸಾಲಿನ ಭರತನಾಟ್ಯ ಹಿರಿಯ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ಅನ್ವಿತಾ ಮುಗೇರಾಯ 3ನೇ ರ್ಯಾಂಕ್ ಪಡೆದಿದ್ದಾರೆ. ಇವರು ರವಿಶಂಕರ್ ವಿದ್ಯಾಮಂದಿರದ 9ನೇ ತರಗತಿ. ವಿದ್ಯಾರ್ಥಿನಿ. ವಿದ್ವಾನ್ ಸುಬ್ರಮಣ್ಯ ನಾವುಡ ಅವರ ಶಿಷ್ಯೆ ವಕೀಲರಾ ಹರಿ ಮುಗೇರಾಯ ಅವರ ಪುತ್ರಿ.
ಪ್ರಯಾಗರಾಜ್: ಮಹಾಕುಂಭದ ಕೊನೆಯ ಸ್ನಾನ ಯಾವಾಗ ?ನಿಯಮಗಳೇನು?ಹಾಗೂ ಈ ದಿನದ ವಿಶೇಷತೆ ಏನು?ಎಂಬುದರ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಪ್ರಯಾಗರಾಜ್‌ನಲ್ಲಿ ಜನವರಿ 13ರಿಂದ ಫೆಬ್ರವರಿ 26ರವರೆಗೆ ನಡೆಯುವ ಮಹಾಕುಂಭ ಮೇಳದಲ್ಲಿ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡುವುದು ಅತ್ಯಂತ ಪವಿತ್ರ ಎಂದು ನಂಬಲಾಗಿದೆ. ಪೌಷಪೂರ್ಣಿಮೆ, ಮಕರ ಸಂಕ್ರಾಂತಿ, ಮೌನಿ ಅಮಾವಾಸ್ಯೆ, ವಸಂತ ಪಂಚಮಿ ಮತ್ತು ಮಹಾಶಿವರಾತ್ರಿಯಂದು ಪ್ರಮುಖ ಸ್ನಾನಗಳು ನಡೆಯುತ್ತವೆ. ಸ್ನಾನದ ನಿಯಮಗಳನ್ನು ಪಾಲಿಸುವುದು ಮುಖ್ಯ. ಭಕ್ತರು ದೇಶ-ವಿದೇಶಗಳಿಂದ ಆಗಮಿಸುತ್ತಾರೆ. ಪ್ರಯಾಗರಾಜ್‌ನಲ್ಲಿ ಮಹಾಕುಂಭದ ಮಹಾ ಧಾರ್ಮಿಕ ಕಾರ್ಯಕ್ರಮವು ಜನವರಿ 13 ರಂದು ಪೌಷ ಪೂರ್ಣಿಮೆಯ ದಿನದಂದು ಪ್ರಾರಂಭವಾಗಿದೆ. ಇದು 26 ಫೆಬ್ರವರಿ ಮಹಾಶಿವರಾತ್ರಿಯ ದಿನದಂದು ಮುಕ್ತಾಯಗೊಳ್ಳುತ್ತದೆ. ಮಹಾಕುಂಭದಲ್ಲಿರುವ ಪವಿತ್ರ […]
ಕಂಪೆನಿ ಸೆಕ್ರೇಟರಿ ಪ್ರವೇಶ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ.

ಹೆಮ್ಮಾಡಿ: ಇನ್ಸಿಟ್ಯೂಟ್ ಆಫ್ ಕಂಪೆನಿ ಸೆಕ್ರೇಟರಿಸ್ ಇನ್ ಇಂಡಿಯಾದವರು ನಡೆಸಿದ ಸಿ.ಎಸ್.ಇ.ಇ.ಟಿ(ಕಂಪೆನಿ ಸಕ್ರೇಟರಿ ಎಕ್ಸಿಕ್ಯೂಟಿವ್ ಎಂಟ್ರೆನ್ಸ್ ಟೆಸ್ಟ್) ಪ್ರವೇಶ ಪರೀಕ್ಷೆಯಲ್ಲಿ ಹೆಮ್ಮಾಡಿ ಜನತಾ ಪದವಿ ಪೂರ್ವ ಕಾಲೇಜಿನ 10 ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.ಕ್ರಮವಾಗಿ ಧೀರಜ್ ಶೇಟ್, ಸುಜನ್ ಎಸ್.ಪಿ, ಅರ್ಚನ್ ಕುಮಾರ್, ಮೈತ್ರಿ, ಅಕ್ಷೋಭ್ಯ, ವಿಸ್ಮಿತಾ, ಸ್ಪಂದನ್, ಶಾಶ್ವತ್ ಶೆಟ್ಟಿ, ಕೌಶಿಕ್ ಶೆಟ್ಟಿ, ಭುವನ್ ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ/ಬೋಧಕೇತರ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಜನವರಿ 23ರಿಂದ 26ರ ವರೆಗೆ ಕದ್ರಿ ಉದ್ಯಾನವನದಲ್ಲಿ ಫಲ ಪುಷ್ಪ ಪ್ರದರ್ಶನ.

ಕರ್ನಾಟಕ ಸರಕಾರ, ದ.ಕ.ಜಿಲ್ಲೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ತೋಟಗಾರಿಕೆ ಇಲಾಖೆ ಹಾಗೂ ಮಂಗಳೂರಿನ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿಯ ಸಹಯೋಗದಲ್ಲಿ ಕದ್ರಿ ಉದ್ಯಾವನದಲ್ಲಿ ಜನವರಿ 23ರಿಂದ 26 ವರೆಗೆ ಫಲ ಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ವಿವಿಧ ಜಾತಿಯ ಹೂಗಳ ಪ್ರದರ್ಶನ ಹೂ ಮತ್ತು ಸಿರಿಧಾನ್ಯಗಳಿಂದ ರಚಿಸಿದ ವಿವಿಧ ಕಲಾ ಕೃತಿಯ ಪ್ರದರ್ಶನ, ಹಣ್ಣು ಮತ್ತು ತರಕಾರಿಗಳಿಂದ ರಚಿತವಾದ ಕಲಾ ಕೃತಿ, ರೈತರು ಬೆಳೆದ ಹೂವು, ಹಣ್ಣು,ತರಕಾರಿ, ತೋಟಗಾರಿಕಾ ಬೆಳೆಗಳು, ಸಾಂಬಾರು ಬೆಳೆಗಳು, ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಉಡುಪಿ:ಸಮಾಜದಲ್ಲಿದ್ದ ತಾರತಮ್ಯವನ್ನು ಹೋಗಲಾಡಿಸುವಲ್ಲಿ ವಚನಗಳು ಪ್ರಮುಖ ಪಾತ್ರ ವಹಿಸುತ್ತವೆ : ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ

ಉಡುಪಿ: 12 ನೇ ಶತಮಾನವು ವಚನ ಸಾಹಿತ್ಯದಲ್ಲಿ ಬಹು ಮುಖ್ಯವಾದ ಕಾಲಘಟ್ಟವಾಗಿದ್ದು, ವಚನಕಾರರು ತಮ್ಮ ವಚನಗಳ ಮೂಲಕ ಸಮಾಜದಲ್ಲಿದ್ದ ತಾರತಮ್ಯವನ್ನು ಹೋಗಲಾಡಿಸಿ, ಸಮಾನತೆ ತರುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ಮಂಗಳವಾರ ನಗರದ ಅಜ್ಜರಕಾಡುವಿನ ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪಿ.ಜಿ.ಎ.ವಿ. ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ […]