ಉಡುಪಿ ಜಿಲ್ಲಾ ಕೃಷಿಕ ಸಂಘದ ರೈತ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ: ಫೆ.8ರಂದು ಕುಂಜಿಬೆಟ್ಟಿನ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆಯುವ ಉಡುಪಿ ಜಿಲ್ಲಾ ಕೃಷಿಕ ಸಂಘದ ರೈತ ಸಮಾವೇಶದ ಆಮಂತ್ರಣ ಪತ್ರಿಕೆಯನ್ನು ನಿತ್ಯಾನಂದ ಸ್ವಾಮಿ ಮಂದಿರದಲ್ಲಿ ಬಿಡುಗಡೆಗೊಳಿಸಲಾಯಿತು. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಪ್ರಗತಿಪರ ಕೃಷಿಕ, ಉದ್ಯಮಿ ರಾಜಾರಾಂ ಭಟ್ ಅವರು, ಮನುಷ್ಯನಲ್ಲಿ ಎಷ್ಟೇ ದುಡ್ಡಿದ್ದರೂ ಅದನ್ನು ತಿನ್ನಲಾಗುವುದಿಲ್ಲ. ಬದುಕಿಗೆ ಆಹಾರ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ರೈತರ ಪರಿಶ್ರಮವನ್ನು ಅಲ್ಲಗಳೆಯಲಾಗದು ಎಂದರು. ಕಟಪಾಡಿಯ ವಿಜಯಾ ಸೋಲಾರ್ಸ್ ಮಾಲೀಕ ಸತ್ಯೇಂದ್ರ ಪೈ, ಶ್ರೀ ನಿತ್ಯಾನಂದಸ್ವಾಮಿ ಮಂದಿರದ ಆಡಳಿತ ಟ್ರಸ್ಟಿ ಕೆ. […]
ಗಂಗೊಳ್ಳಿ ಪಂಚಾಯತ್ ಪಿಡಿಓ ಉಮಾಶಂಕರ್, ದ್ವಿತೀಯ ದರ್ಜೆ ಗುಮಾಸ್ತ ಶೇಖರ ಲೋಕಾಯುಕ್ತ ಬಲೆಗೆ

ಉಡುಪಿ: ಗಂಗೊಳ್ಳಿ ಪಂಚಾಯತ್ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಪಿಡಿಓ ಉಮಾಶಂಕರ್ ಹಾಗೂ ದ್ವಿತೀಯ ದರ್ಜೆ ಗುಮಾಸ್ತ ಶೇಖರ ಜಿ ಲಂಚ ಪಡೆಯುತ್ತಿದ್ದಾಗ ಬಲೆಗೆ ಬಿದ್ದಿದ್ದಾರೆ. ನೈನ್ ಲವೆನ್ ( 9/11) ಮಾಡಿಕೊಡಲು ಪಿಡಿಒ 20 ಸಾವಿರ ಲಂಚ ಕೇಳಿದ್ದ. 9/11 ಮಾಡಿಸಲು ದ್ವಿತೀಯ ದರ್ಜೆ ಗುಮಾಸ್ತ 2 ಸಾವಿರ ರೂಪಾಯಿ ಹಣ ಪಡೆದಿದ್ದ. ಒಟ್ಟು 22 ಸಾವಿರ ಲಂಚ ಪಡೆಯುತ್ತಿದ್ದಾಗ ಪಿಡಿಓ ಹಾಗೂ ಗುಮಾಸ್ತ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮಹಮ್ಮದ್ ಹನೀಫ್ ಎಂಬವರ ದೂರಿನ ಮೇಲೆ […]
ಕಟಪಾಡಿ:ಬರವಣಿಗೆಯಲ್ಲಿ ಧೀರಜ್ ಬೆಳ್ಳಾರೆಯವರ ಗಮನಾರ್ಹ ಸಾಧನೆ

ಕಟಪಾಡಿ: ಕಟಪಾಡಿಯ ತ್ರಿಶಾ ವಿದ್ಯಾ ಕಾಲೇಜಿನ ಪ್ರಾಧ್ಯಾಪಕರಾದ ಧೀರಜ್ ಬೆಳ್ಳಾರೆ ಇವರಿಗೆ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ಸ್ (KABR) ವತಿಯಿಂದ ಜನವರಿ 10, 2025 ರಂದು, ರಾಷ್ಟ್ರೀಯ ದಾಖಲೆ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಯಿತು . ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಯುವ ಮತ್ತು ಉತ್ಸಾಹಭರಿತ ಬರಹಗಾರಾಗಿದ್ದು,”ಸ್ಟೇಟಸ್ ಕಥೆಗಳು” ಎಂಬ ಶೀರ್ಷಿಕೆಯ ಸರಣಿಯಡಿಯಲ್ಲಿ ಜುಲೈ 2020 ರಿಂದ ಡಿಸೆಂಬರ್ 2024 ವರೆಗೆ 1,635 ಸಣ್ಣ ಕಥೆಗಳನ್ನು ಬರೆಯುವ ಮೂಲಕ ಈ ಗಮನಾರ್ಹ ಸಾಧನೆಯನ್ನು ಮಾಡಿದ್ದಾರೆ. […]
ಬ್ರಹ್ಮಾವರ: ಡೆಲಿವರಿ ಕೆಲಸಕ್ಕೆ ಹುಡುಗರು ಬೇಕಾಗಿದ್ದಾರೆ.

ಬ್ರಹ್ಮಾವರ: ಬ್ರಹ್ಮಾವರದಲ್ಲಿ ಡೆಲಿವರಿ ಕೆಲಸ ಮಾಡಲು ಹುಡುಗರು ಬೇಕಾಗಿದ್ದಾರೆ. ಕೆಲಸದ ಸಮಯ: ಬೆಳಿಗ್ಗೆ 8 ರಿಂದ ಸಂಜೆ 5 ರವರೆಗೆ. ಸಂಬಳ ತಿಂಗಳಿಗೆ 15000 ದಿಂದ 20000. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9880608302, 9481523354
ಉಡುಪಿಯಲ್ಲಿ ಇಲ್ಲಿಯವರೆಗೂ ಯಾವ ಶಾಸಕರು ದ್ವೇಷದ ರಾಜಕಾರಣ ಮಾಡಿಲ್ಲ; ಶಾಸಕ ಯಶ್ ಪಾಲ್ ವಿರುದ್ಧ ರಘುಪತಿ ಭಟ್ ಗರಂ

ಉಡುಪಿ: ಉಡುಪಿಯಲ್ಲಿ ಇಲ್ಲಿಯವರೆಗೂ ಯಾವ ಶಾಸಕರು ದ್ವೇಷದ ರಾಜಕಾರಣ ಮಾಡಿಲ್ಲ. ಕಾಂಗ್ರೆಸ್ ಶಾಸಕರಾಗಿದ್ದ ಯು.ಆರ್.ಸಭಾಪತಿ, ಪ್ರಮೋದ್ ಮಧ್ವರಾಜ್ ಅವರನ್ನು ರಾಜಕೀಯವಾಗಿ ಎದುರಿಸಿಕೊಂಡು ಬಂದಿದ್ದೇನೆ. ನಾವೆಲ್ಲ ರಾಜಕೀಯವಾಗಿ ಜಗಳ ಮಾಡುತ್ತಿದ್ದೆವು. ಆದರೆ ನಾವು ಯಾರೂ ವೈಯಕ್ತಿಕವಾಗಿ ನಿಂದನೆ ಹಾಗೂ ವ್ಯವಹಾರಕ್ಕೆ ತೊಂದರೆ ಮಾಡುತ್ತಿರಲಿಲ್ಲ ಎಂದು ಮಾಜಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಶಾಸಕರು ನನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇರುವುದರ ಬಗ್ಗೆ ನೂರಕ್ಕೆ ನೂರರಷ್ಟು ಬೇಸರವಿದೆ. ಅವರ ದ್ವೇಷದ ರಾಜಕಾರಣ […]