ಲಕ್ನೋ:ಸೆಲ್ಫಿ ಕಾಟ ಹೆಚ್ಚಾಗಿ ಕುಂಭಪ್ರದೇಶ ತೊರೆದ ಮಧ್ಯ ಪ್ರದೇಶ ಮೂಲದ ಸುಂದರಿ ಮೊನಾಲಿಸಾ!

ಲಕ್ನೋ: ಉತ್ತರ ಪ್ರದೇಶದ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ವಿಶಿಷ್ಟ ಕಣ್ಣಿನ ಸುಂದರಿ ಮೊನಾಲಿಸಾ ಭೋಸ್ಲೆ (16) ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಸ್ನಿಗ್ಧ ಸೌಂದರ್ಯದಿಂದ ವೈರಲ್ ಆಗಿದ್ದರು. ಇದೀಗ ನೆಟ್ಟಿಗರ ಹಾವಳಿಯಿಂದಾಗಿ ಅವರು ಕುಂಭಮೇಳ ತೊರೆದಿದ್ದಾರೆ. ಮಧ್ಯ ಪ್ರದೇಶ ಮೂಲದ ಮೊನಾಲಿಸಾ ರುದ್ರಾಕ್ಷಿ ಮಾಲೆ, ಮಣಿಸರಗಳ ಮಾರಾಟಕ್ಕೆಂದು ಕುಟುಂಬಸ್ಥರೊಂದಿಗೆ ಬಂದಿದ್ದರು. ಆದರೆ ರುದ್ರಾಕ್ಷಿ, ಮಾಲೆ ಖರೀದಿಸಲು ಬರುತ್ತಿದ್ದವರೆಲ್ಲ ಆಕೆ ಜತೆಗೆ ಸೆಲ್ಫಿ, ಫೋಟೋಗೆ ಮುಗಿಬಿದ್ದು, ವ್ಯಾಪಾರಕ್ಕೂ ಅಡ್ಡಿ ಪಡಿಸಿದ್ದಾರೆ. ಹೀಗಾಗಿ ಆಕೆಯನ್ನು ಅವರ ತಂದೆ ಮನೆಗೆ ಕಳಿಸಿದ್ದಾರೆಂದು […]
ನವದುರ್ಗಾ ಲೇಖನಯಜ್ಞ ಸಂಕಲ್ಪ ಕಾರ್ಯಕ್ರಮ

ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ, ಗುರುನಿತ್ಯಾನಂದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಹಾಗೂ ಉಡುಪಿ ಗೃಹ ನಿರ್ಮಾಣ ಸಹಕಾರ ಸಂಘದ ಸಹಭಾಗಿತ್ವದಲ್ಲಿ ಕಾಪು ಹೊಸ ಮಾರಿಗುಡಿ ದೇವಸ್ಥಾನದ ನವದುರ್ಗಾ ಲೇಖನಯಜ್ಞದ ಸಂಕಲ್ಪ ಕಾರ್ಯಕ್ರಮವು ಬಡಗಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ನಡೆಯಿತು. ವಿವಿಧ ಸಹಕಾರ ಸಂಸ್ಥೆಗಳ 9 ಸ್ತ್ರೀಯರು ನವದೀಪವನ್ನು ಪ್ರಜ್ವಲಿಸಿ ದೇವಿಗೆ ಆರತಿ ಬೆಳಗಿಸಿದರು. ಕಾಪು ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮನೋಹರ್ ಎಸ್.ಶೆಟ್ಟಿ, ನವದುರ್ಗಾ ಲೇಖನ ಯಜ್ಞ […]
ಮುಂಬೈ:ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿದ ಬಾಂಗ್ಲಾ ಆರೋಪಿ ಅರೆಸ್ಟ್

ಮುಂಬಯಿ: ಮುಂಬಯಿ ಪೊಲೀಸರು ಬಾಲಿವುಡ್ ನಟ ಸೈಫ್ ಅಲಿ ಖಾನ್‌ಗೆ ಚಾಕು ಇರಿದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಾಂಗ್ಲಾ ಮೂಲದ ಮೊಹಮ್ಮದ್ ಶರೀಫುಲ್ ಇಸ್ಲಾಂ ಶೆಹಜಾದ್ (30) ಬಂಧಿತ ಆರೋಪಿ.ಆರೋಪಿಯನ್ನು ಠಾಣೆ ಜಿಲ್ಲೆಯ ಹೀರಾನಂದಾನಿ ಎಸ್ಟೇಟ್ ಬಳಿ ಭಾನುವಾರ ಬಂಧಿಸಲಾಗಿದೆ. ಬಾಂದ್ರಾ ಕೋರ್ಟ್, ಆರೋಪಿಯನ್ನು ಐದು ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ. 8 ತಿಂಗಳ ಹಿಂದೆಯೇ ಬಾಂಗ್ಲಾ ದೇಶದಿಂದ ಭಾರತ ಪ್ರವೇಶಿಸಿದ್ದ ಬಂಧಿತ ಆರೋಪಿ ಬಿಜೋಯ್ ದಾಸ್, ವಿಜಯ್ ದಾಸ್, ಮೊಹಮ್ಮದ್ ಇಲಿಯಾಸ್ ಎಂದೆಲ್ಲಾ ಹೆಸರು […]
ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ ಪ್ರಧಾನ

ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತುಮಕೂರು ಜಿಲ್ಲಾ ಘಟಕದ ಸಹಯೋಗದೊಂದಿಗೆ ತುಮಕೂರಿನಲ್ಲಿ ರವಿವಾರ ನಡೆದ 39ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಉತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಕಳದ ಪತ್ರಕರ್ತರ ಹಾಗೂ ಸಂಘದ ಸದಸ್ಯ ಹರಿಪ್ರಸಾದ್ ನಂದಳಿಕೆ […]
ಉಡುಪಿ: ಕೊರಗ ಸಮುದಾಯದ ಅಭಿವೃದ್ಧಿಗೆ ಕೇಂದ್ರದಿಂದ 1.20 ಕೋಟಿ ರೂ. ಬಿಡುಗಡೆ; ಸಂಸದ ಕೋಟ

ಉಡುಪಿ: ಕೇಂದ್ರ ಸರಕಾರದ ವತಿಯಿಂದ ಉಡುಪಿ ಜಿಲ್ಲೆಯ ಹಾಲಾಡಿಯ ಬತ್ತಗುಳಿ ಮತ್ತು ಕೆರಾಡಿಯ ಬೆಳ್ಳಾಳ ಮತ್ತು ಚಪ್ಪರಮಕ್ಕಿ ಪ್ರದೇಶಗಳ ಕೊರಗ ಸಮುದಾಯದ ಮೂಲಭೂತ ಸೌಕರ್ಯದ ಅಭಿವೃದ್ಧಿಗೆ 1.20 ಕೋಟಿ ಬಿಡುಗಡೆ ಯಾಗಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ. ಪ್ರಧಾನಮಂತ್ರಿ ಆದಿವಾಸಿ ಮಹಾ ಅಭಿಯಾನ ಯೋಜನೆಯಡಿ ಮಂಜೂರಾದ ಈ ಕಾಮಗಾರಿಗಳು ಸದ್ಯದಲ್ಲೇ ಅನುಷ್ಠಾನ ವಾಗಲಿದ್ದು, ಕೇಂದ್ರಕ್ಕೆ ಮತ್ತು ಬುಡಕಟ್ಟು ಜನಾಂಗದ ಪ್ರದೇಶದ ಅಭಿವೃದ್ಧಿಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು […]