ಮೇ.3ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 53ನೇ ಉಚಿತ ಸಾಮೂಹಿಕ ವಿವಾಹ.

ಬೆಳ್ತಂಗಡಿ: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಸಮ್ಮುಖದಲ್ಲಿ ಮೇ 3ರ ಶನಿವಾರ ಸಂಜೆ 6.48ರ ಗೋಧೂಳಿ ಲಗ್ನದಲ್ಲಿ 53ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ವರನಿಗೆ ಧೋತಿ, ಶಾಲು ಮತ್ತು ವಧುವಿಗೆ ಸೀರೆ, ರವಿಕೆ ಕಣ ಹಾಗೂ ಮಂಗಳಸೂತ್ರ, ಹೂವಿನ ಹಾರ ನೀಡಲಾಗುವುದು. ಎರಡನೇ ವಿವಾಹಕ್ಕೆ ಅವಕಾಶವಿರುವುದಿಲ್ಲ. ಮದುವೆಯ ಎಲ್ಲ ವೆಚ್ಚವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ವತಿಯಿಂದ ಭರಿಸಲಾಗುತ್ತದೆ. ವರದಕ್ಷಿಣೆ ಹಾಗೂ ಮದುವೆಯ ದುಂದುವೆಚ್ಚವನ್ನು ತಡೆಯುವ ಉದ್ದೇಶದಿಂದ ‘ಡಾ| ಡಿ.ವೀರೇಂದ್ರ ಹೆಗ್ಗಡೆಯವರು […]
ಇಲ್ಲಿನ ಮಲ್ಟಿಬ್ರ್ಯಾಂಡ್ ಕಾರುಗಳನ್ನು ನೋಡಿದ್ರೆ ನೀವು ವ್ಹಾವ್ ಅಂತೀರಿ: ಇನ್ನು ಕಾರು ಕೊಳ್ಳುವ/ಮಾರುವ ಚಿಂತೆಯೇ ಬೇಕಿಲ್ಲ, ಎಲ್ಲವೂ ಇಲ್ಲಿಯೇ ಇದೆಯಲ್ಲ! :ಉಡುಪಿಗೆ ಬಂತು ಸರ್ಟಿಫೈಡ್ ಮಲ್ಟಿಬ್ರ್ಯಾಂಡ್ ಪ್ರಿ ಓನ್ಡ್ ಕಾರ್ ಗಳು!

ಕಾರು ಕೊಳ್ಳುವ ಕನಸು ಯಾರಿಗಿಲ್ಲ ಹೇಳಿ, ಚಂದದ ಕಾರೊಂದು ತಮ್ಮದಾಗಬೇಕು ಎನ್ನುವ ಆಸೆ ಸಾಮಾನ್ಯ ಜನರ ನೆಚ್ಚಿನ ಆಸೆ. ಹಾಗೆಯೇ ಇದ್ದ ಕಾರನ್ನು ಒಳ್ಳೆಯ ಬೆಲೆಗೆ ಮಾರಬೇಕು ಎನ್ನುವುದು ಪ್ರತಿಯೊಬ್ಬನ ತುಡಿತ. ನಿಮ್ಮ ಈ ಎಲ್ಲಾ ಕಾರಿನ ಕುರಿತ ಕನಸುಗಳನ್ನ ನನಸು ಮಾಡಲು ಕರಾವಳಿಗೆ ಬಂದಿದೆ, ಸರ್ಟಿಫೈಡ್ ಮಲ್ಟಿಬ್ರ್ಯಾಂಡ್ ಪ್ರಿ ಓನ್ಡ್ ಕಾರ್ಸ್. ಉಡುಪಿಯ ಕಲ್ಸಂಕ ರಸ್ತೆಯ ವಿಶಾಲ್ ಮೆಗಾ ಮಾರ್ಟ್ ಎದುರಿಗಿರುವ ಕರಾವಳಿ ಆಟೋಮೊಬೈಲ್ಸ್ ನಿಮ್ಮ ಕಾರು ಕೊಳ್ಳುವ ಕನಸನ್ನು ಇನ್ನಷ್ಟು ಹತ್ತಿರವಾಗಿಸಿದೆ. ಇದು ಕರಾವಳಿ […]
ಉಡುಪಿ:ಜ.19ರಂದು ಸೈಕ್ಲಿಂಗ್ ಸ್ಪರ್ಧೆ ; ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ.!

ಉಡುಪಿ: ಕರ್ನಾಟಕ ಕ್ರೀಡಾ ಕೂಟದ ‘ಸೈಕ್ಲಿಂಗ್ ಸ್ಪರ್ಧೆ’ ಯನ್ನು ಬ್ರಹ್ಮಾವರ ತಾಲೂಕಿನ ಕೊಳಲಗಿರಿ ವಾಟರ್ ಟ್ಯಾಂಕ್ ನಿಂದ ಆರಂಭಿಸಿ, ಪೆರ್ಡೂರು ಮಾರ್ಗದಲ್ಲಿ ಬರುವ ಕುಕ್ಕೆಹಳ್ಳಿ ಜಂಕ್ಷನ್ ಸಮೀಪದ ಶಾಂತಿವನ ಜಂಕ್ಷನ್ ವರೆಗೆ ಸುಮಾರು 10 ಕಿ.ಮೀ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಕೆಳಕಂಡ ರಸ್ತೆಯನ್ನು ಝೀರೋ ಟ್ರಾಫಿಕ್ ಮಾಡುವುದು ಅಗತ್ಯವಾಗಿದ್ದು, ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ. ನಾಳೆ (ಜ. 19) ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 […]
ಮಾರುತಿ ಸುಜುಕಿ ಎಲೆಕ್ಟ್ರಿಕ್ ಎಸ್‌ಯುವಿ ಇ-ವಿಟಾರಾ ಮಾರುಕಟ್ಟೆಗೆ ಬಿಡುಗಡೆ.

ಪುಣೆ: ಭಾರತದ ಅತೀ ದೊಡ್ಡ ಕಾರು ತಯಾರಿಕಾ ಸಂಸ್ಥೆಯಾದ ಮಾರುತಿ ಸುಜುಕಿ ತನ್ನ ಮೊಟ್ಟ ಮೊದಲ ಎಲೆಕ್ಟ್ರಿಕ್ ಎಸ್ ಯುವಿ ಇ-ವಿಟಾರಾ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಭಾರತದಲ್ಲಿ ಮಾರುತಿ ಸುಜುಕಿ ಎಲೆಕ್ಟ್ರಿಕ್ ವಾಹನಗಳ ಬೃಹತ್ ಉತ್ಪಾದನೆಯೇ ತಮ್ಮ ಗುರಿಯಾಗಿದ್ದು, ಈ ಮೂಲಕ ಮುಂದಿನ ಒಂದು ವರ್ಷದೊಳಗೆ ಭಾರತ ಎಲೆಕ್ಟ್ರಿಕ್ ವಾಹನಗಳ ರಫ್ತು ಕೇಂದ್ರವನ್ನಾಗಿ ಮಾಡುವ ಇಚ್ಛೆ ಹೊಂದಿರುವುದಾಗಿ ಮಾರುತಿ ಸುಜುಕಿ ತಿಳಿಸಿದೆ. ಟಾಟಾ ಮೋಟಾರ್ಸ್, ಮಹೀಂದ್ರ ಮತ್ತು ಎಂಜಿ ಮೋಟಾರ್ ವಿರುದ್ಧ ಇದೀಗ ಜಪಾನಿನ ದೈತ್ಯ ಕಂಪನಿ ಸ್ಪರ್ಧೆಗಿಳಿದಿದೆ.
ಮಣಿಪಾಲ: ಮನೆಯ ಮಹಡಿಯಿಂದ ಬಿದ್ದು ವಿದ್ಯಾರ್ಥಿ ಮೃತ್ಯು.

ಮಣಿಪಾಲ: ಮನೆಯ ಮಹಡಿಯಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದು ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟ ವಿದ್ಯಾರ್ಥಿ ಸಪ್ತಗಿರಿ ನಗರ ನಿವಾಸಿ, ಕಾಮರ್ಸ್ ವಿಭಾಗದಲ್ಲಿ ಮೂರನೇ ವರ್ಷದಲ್ಲಿ ಬಿಕಾಂ ಓದುತ್ತಿದ್ದ ಕಾರ್ತಿಕ್ (21). ಅವರು ಜ. 12ರಂದು ರಾತ್ರಿ ಊಟ ಮುಗಿಸಿ ಮೊಬೈಲ್ ಹಿಡಿದುಕೊಂಡು ಮನೆಯ ಇನ್ನೊಂದು ಮಹಡಿಗೆ ಹೋದವರು ಮನೆಯ ಮೇಗ್ಗಡೆಯ ದಂಡೆಯಲ್ಲಿ ಹಾಡು ಕೇಳುತ್ತಾ ಕುಳಿತಿದ್ದರು.ಈ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆಳಗೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿತ್ತು. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. […]