ಉಡುಪಿ:ಜಿಲ್ಲಾ ಮಟ್ಟದಲ್ಲಿ ಸ್ಥಳೀಯ ದೂರು ಸಮಿತಿ ರಚನೆ

ಉಡುಪಿ: ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ (ತಡೆಗಟ್ಟುವಿಕೆ, ನಿಷೇಧಿಸುವಿಕೆ, ನಿವಾರಿಸುವಿಕೆ)ಅಧಿನಿಯಮ 2013 ರ ಅನ್ವಯ ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳಗಳನ್ನು ತಡೆಯಲು, ಹತ್ತಕ್ಕಿಂತ ಹೆಚ್ಚು ಕೆಲಸಗಾರರನ್ನು ಹೊಂದಿರದ ಕಾರಣದಿಂದಾಗಿ ಯಾವುದಾದರೂ ಇಲಾಖೆ, ಕಛೇರಿ ಅಥವಾ ಸಂಸ್ಥೆಯಲ್ಲಿ ಆಂತರಿಕ ದೂರು ಸಮಿತಿಯು ಸ್ಥಾಪನೆಯಾಗದಿದ್ದಲ್ಲಿ ಮತ್ತು ಮಾಲೀಕರ ವಿರುದ್ದವೇ ದೂರುಗಳನ್ನು ಸ್ವೀಕರಿಸಲು, ಅಸಂಘಟಿತ ಕಾರ್ಮಿಕ ವಲಯದ ದೂರುಗಳನ್ನು ಸ್ವೀಕರಿಸಲು ಮತ್ತು ವಿಚಾರಣೆ ಮಾಡಲು ಜಿಲ್ಲಾ ಮಟ್ಟದಲ್ಲಿ ಸ್ಥಳೀಯ ದೂರು ಸಮಿತಿಯನ್ನು ರಚಿಸುವಂತೆಸರ್ಕಾರವು […]
ಉಡುಪಿ: ಅಪ್ರಾಪ್ತ ಬಾಲಕಿಯ ಅತ್ಯಾಚಾರ, ಅಶ್ಲೀಲ ಚಿತ್ರ ವೈರಲ್ ಪ್ರಕರಣ: ಆರೋಪಿಗೆ 20ವರ್ಷ ಕಠಿಣ ಕಾರಾಗೃಹ ಶಿಕ್ಷೆ.

ಉಡುಪಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಆಕೆಯ ಅಶ್ಲೀಲ ಭಾವಚಿತ್ರ ಸಾಮಾಜಿಕ ಜಾಲತಾಣ ಗಳಲ್ಲಿ ವೈರಲ್ ಮಾಡಿರುವ ಪ್ರಕರಣದ ಆರೋಪಿಗೆ ಉಡುಪಿ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಪೊಕ್ಸೋ ನ್ಯಾಯಾಲಯ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಇಂದು ಆದೇಶ ನೀಡಿದೆ. ಬ್ರಹ್ಮಾವರದ ರಫೀಕ್ (25) ಶಿಕ್ಷೆಗೆ ಗುರಿಯಾದ ಆರೋಪಿ. ರಿಕ್ಷಾ ಚಾಲಕನಾಗಿದ್ದ ರಫೀಕ್ ನೊಂದ ಬಾಲಕಿಯನ್ನು ಕಾಲೇಜಿಗೆ ಕರೆದುಕೊಂಡು ಹೋಗಿ ಬರುತ್ತಿದ್ದು, ನಂತರ ಆಕೆಯ ಮೊಬೈಲ್‌ಗೆ ಕರೆ ಮಾಡಿ ಸಂದೇಶ ಕಳುಹಿಸಿ ತನ್ನನ್ನು ಪ್ರೀತಿಸುವಂತೆ ಒತ್ತಾಯಿಸುತ್ತಿದ್ದನು. […]
ಉಡುಪಿ: ಗ್ಯಾಸ್ ಟ್ಯಾಂಕರ್ ಪಲ್ಟಿ: ಅದೃಷ್ಟವಶಾತ್ ತಪ್ಪಿದ ಭಾರೀ ಅನಾಹುತ

ಉಡುಪಿ: ಚಾಲಕನ ನಿಯಂತ್ರಣ ತಪ್ಪಿದ ಗ್ಯಾಸ್ ಟ್ಯಾಂಕರ್ ವೊಂದು ಪಲ್ಟಿಯಾದ ಘಟನೆ ಉಡುಪಿ ಕಿನ್ನಿಮೂಲ್ಕಿ ಸಮೀಪ ರಾ.ಹೆ. 66ರಲ್ಲಿ ಇಂದು ಬೆಳಿಗ್ಗೆ 7.20ರ ಸುಮಾರಿಗೆ ಸಂಭವಿಸಿದೆ. ಗುಜರಾತ್ ನಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಟ್ಯಾಂಕರ್ ಕಿನ್ನಿಮೂಲ್ಕಿ ಸಮೀಪ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಮಗುಚಿಬಿದ್ದಿದೆ. ಚಾಲಕ ಹಾಗೂ ಕ್ಲಿನರ್ ಸಣ್ಣಪುಟ್ಟ ಗಾಯದೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಕೆಲಕಾಲ ಹೆದ್ದಾರಿ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ಮೂಲಕ ಟ್ಯಾಂಕರ್ ಅನ್ನು ತೆರವುಗೊಳಿಸುವ […]
ಉಡುಪಿ:ಕಾಪು ಪುರಸಭೆ: ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕ ಪರವಾನಗಿ ಕಡ್ಡಾಯ

ಉಡುಪಿ: ಕಾಪು ಪುರಸಭೆ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ಉದ್ಯಮದಾರರು, ನಗರಾಭಿವೃದ್ಧಿ ಇಲಾಖೆಯ ಸುತ್ತೋಲೆಯಂತೆ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕವಾಗಿ ಪರವಾನಗಿ ಪಡೆಯುವುದುಕಡ್ಡಾಯವಾಗಿದ್ದು, ಕೋಟ್ಪಾ ಕಾಯ್ದೆಯಂತೆ ನಿಗಧಿತ ಶುಲ್ಕ ಪಾವತಿಸಿಕೊಂಡು ಕಡ್ಡಾಯವಾಗಿ ಉದ್ಯಮ ಪರವಾನಿಗೆಯನ್ನುಪಡೆದುಕೊಳ್ಳಬೇಕು. ಸರಕಾರದ ಸುತ್ತೋಲೆಯಂತೆ ಶಾಲಾ-ಕಾಲೇಜು, ದೇವಸ್ಥಾನ, ಆಸ್ಪತ್ರೆ ಹಾಗೂ ಸಂಸ್ಥೆಯಿಂದ 100 ಗಜ ಅಂತರದಲ್ಲಿ ಯಾರು ಕೂಡ ತಂಬಾಕು ಉತ್ಪನ್ನಗಳ ಮಾರಾಟವನ್ನು ಮಾಡುವಂತಿಲ್ಲ. ಒಂದುವೇಳೆ ಮಾರಾಟ ಮಾಡುತ್ತಿದ್ದಲ್ಲಿ ಪ್ರಕಟಣೆ ತಲುಪಿದ ತಕ್ಷಣವೇ ಸದ್ರಿ ಉದ್ಯಮವನ್ನು ಸದ್ರಿ ಸ್ಥಳದಲ್ಲಿ ಸ್ಥಗಿತಗೊಳಿಸಿ ಬೇರೆ ಕಡೆ […]
ಹೂ ಹಣ್ಣು ಪ್ರಿಯರಿಗೆ ಇಲ್ಲಿದೆ ಹೊಸ ಲೋಕ! ಮಂಗಳೂರಲ್ಲಿ ಜ.23 ರಿಂದ ಅದ್ಧೂರಿ ಫಲಪುಷ್ಪ ಪ್ರದರ್ಶನ

ಮಂಗಳೂರು: ಫಲಪುಷ್ಪ ಪ್ರದರ್ಶನ ಅಂದರೆ ಮಂಗಳೂರು ಜನತೆಗೆ ಹಬ್ಬ. ಪ್ರತೀ ವರ್ಷವೂ ಸಾವಿರಾರು ಪುಷ್ಪ ಮತ್ತು ಹಣ್ಣುಗಳು ಕುರಿತು ಆಸಕ್ತಿಯುಳ್ಳ ಜನರಿಗೆ ಫಲ ಪುಷ್ಪ ಪ್ರದರ್ಶನ ಅಂದರೆ ಎಲ್ಲಿಲ್ಲದ ಹಿಗ್ಗು. ಈ ವರ್ಷವೂ ಜನವರಿ 23-26 ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ಫಲ ಪುಷ್ಪ ಪ್ರದರ್ಶನ ರಂಗೇಳಲಿದೆ. ವಿವಿಧ ಜಾತಿಯ ಹಣ್ಣುಗಳು, ಬಗೆ ಬಗೆಯ ಹೂಗಳು ಜನರನ್ನ ಕೈಬೀಸಿ ಕರೆಯಲಿವೆ. ಜೊತೆಗೆ ರೈತರು ಬೆಳೆದ ಹೊಸ ಬಗೆಯ ಹಣ್ಣುಗಳು, ಹೂ ಗಿಡಗಳು. ಕಲಾಕೃತಿಗಳು, ತರಕಾರಿ ಗಿಡಗಳು, ಸಾಂಬಾರು ಬೆಳೆಗಳು […]