ಬೈಂದೂರು: ಪತಿಯ ಕಿರುಕುಳ ಆರೋಪ: ಪತ್ನಿ ನೇಣು ಬಿಗಿದು ಆತ್ಮಹತ್ಯೆ.!

ಬೈಂದೂರು: ಇಲ್ಲಿನ ಗಂಗಾನಾಡು ಎಂಬಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿ ಕಿರುಕುಳವೇ ಆತ್ಮಹತ್ಯೆ ಕಾರಣ ಎಂದು ಮನೆಯವರು ಆರೋಪಿಸಿದ್ದಾರೆ. ಮೃತರನ್ನು ಕುಂದಾಪುರದ ಕೊರಗ ಎಂಬವರ ಮಗಳು ಹಾಗೂ ಗಂಗಾನಾಡು ನಿವಾಸಿ ವಿಷ್ಣು ಎಂಬವರ ಪತ್ನಿ ರಂಜಿತಾ (28) ಎಂದು ಗುರುತಿಸಲಾಗಿದೆ. ಇವರು ಜ.13ರಂದು ರಾತ್ರಿ ಮನೆಯಿಂದ ಹೋದವರು ನಾಪತ್ತೆಯಾಗಿದ್ದು, ಹುಡುಕಾಡಿ ದಾಗ ಆಕೆ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ; ಸವಾರ ಮೃತ್ಯು.

ಪುತ್ತೂರು: ಕಾರೊಂದು ಢಿಕ್ಕಿಯಾಗ ಪರಿಣಾಮ ಸ್ಕೂಟರ್ ಸವಾರ ಗಂಭಿರ ಗಾಯಗೊಂಡು ಮೃತಪಟ್ಟ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಬಂಟ್ವಾಳ ತಾಲೂಕಿನ ಪೆರಮುಗೇರು ಸತ್ತಿಕಲ್ಲು ಎಂಬಲ್ಲಿ ಬುಧವಾರ ಸಂಜೆ ನಡೆದಿದೆ. ಬಂಟ್ವಾಳ ತಾಲೂಕಿನ ಕೆದಿಲ ಗ್ರಾಮದ ಕುದ್ಮಾನ್ ನಿವಾಸಿ ಅಬ್ಬಾಸ್ ಎಂಬವರ ಪುತ್ರ ಉಸ್ಮಾನ್ (24) ಮೃತರು ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಪೈಂಟರ್ ಆಗಿದ್ದ ಉಸ್ಮಾನ್ ಅವರು ತನ್ನ ಸ್ಕೂಟರ್ ನಲ್ಲಿ ಮನೆಗೆ ತೆರಳುತ್ತಿದ್ದು, ಸತ್ತಿಕಲ್ಲಿನಲ್ಲಿ ರಸ್ತೆ ಬದಿಯಲ್ಲಿ ಸ್ಕೂಟರ್ ನಿಲ್ಲಿಸಿ ಮೊಬೈಲ್ ನಲ್ಲಿ ಮಾತನಾಡುತ್ತಿರುವ ವೇಳೆ […]

ಕಾರ್ಕಳ: ಹರಿಪ್ರಸಾದ್ ನಂದಳಿಕೆ ಅವರಿಗೆ ಪ್ರತಿಷ್ಠಿತ ಆರ್ ಎಲ್ ವಾಸುದೇವರಾವ್ ಪ್ರಶಸ್ತಿ

ಉಡುಪಿ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಆರ್ ಎಲ್ ವಾಸುದೇವರಾವ್ ಪ್ರಶಸ್ತಿಗೆ ವಿಜಯವಾಣಿಯ ಕಾರ್ಕಳ ತಾಲೂಕು ವರದಿಗಾರ ಹರಿಪ್ರಸಾದ್ ನಂದಳಿಕೆ ಅವರನ್ನು ಆಯ್ಕೆ ಮಾಡಲಾಗಿದೆ. 39ನೇ ರಾಜ್ಯ ಪತ್ರಕರ್ತರ ಸಮ್ಮೇಳನ ತುಮಕೂರಿನಲ್ಲಿ ಜ.18 ಮತ್ತು ಜನವರಿ 19ರಂದು ನಡೆಯಲಿದೆ ಎಂದು ಅಧ್ಯಕ್ಷ ಶಿವಾನಂದ ತಗಡೂರು ಹಾಗೂ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಪ್ರಕಟಿಸಿದರು. ಅಸಾಧಾರಣ ವರದಿಗಾರಿಕೆಯನ್ನು ಗುರುತಿಸಿ ವಾರ್ಷಿಕವಾಗಿ ನೀಡಲಾಗುವ ಆರ್ ಎಲ್ ವಾಸುದೇವರಾವ್ ಪ್ರಶಸ್ತಿಯು ಹರಿಪ್ರಸಾದ್ ನಂದಳಿಕೆ ಅವರ ಅರಣ್ಯ […]