ಮುಂಬೈ:ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ ದುಷ್ಕರ್ಮಿಗಳಿಂದ ಚಾಕು ಇರಿತ; ಆಸ್ಪತ್ರೆಗೆ ದಾಖಲು

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದ ಘಟನೆ ಜ.16ರಂದು ನಡೆದ ಬಗ್ಗೆ ವರದಿಯಾಗಿದೆ. ಬಾಂದ್ರಾ (ಪಶ್ಚಿಮ) ದಲ್ಲಿರುವ ಅವರ ನಿವಾಸದೊಳಗೆ ನುಗ್ಗಿದ ದುಷ್ಕರ್ಮಿಗಳು ಚೂರಿಯಿಂದ 2-3 ಬಾರಿ ಇರಿದ ಪರಿಣಾಮ ನಟ ಗಾಯಗೊಂಡಿದ್ದಾರೆ. ಮುಂಬೈ ನ ಲೀಲಾವತಿ ಆಸ್ಪತ್ರೆಯಲ್ಲಿ ನಟ ಚಿಕಿತ್ಸೆ ಪಡೆಯುತ್ತಿದ್ದಾರೆ. ಜ.16ರ ಗುರುವಾರ ಮುಂಜಾನೆ 2:30 ರ ಸುಮಾರಿಗೆ ನಟ ತನ್ನ ಇತರ ಕುಟುಂಬ ಸದಸ್ಯರೊಂದಿಗೆ ತನ್ನ ಮನೆಯಲ್ಲಿ ಮಲಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತದೆ. […]

ONGC ಕಂಪೆನಿಯಲ್ಲಿದೆ ನೂರಾರು ಹುದ್ದೆಗಳು: ಅರ್ಹತೆ ಇದ್ರೆ ಮಿಸ್ ಮಾಡದೇ ಅರ್ಜಿ ಸಲ್ಲಿಸಿ ! ಯಾವ ಹುದ್ದೆ? ಎಷ್ಟು ಸಂಬಳ?

ಓಎನ್ ಜಿ ಸಿ ನೂರಕ್ಕೂ ಹೆಚ್ಚಿನ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು . ಈ ಎಲ್ಲಾ ಹುದ್ದೆಗಳಿಗೆ ಪ್ರತೀ ತಿಂಗಳು 60 ಲಕ್ಷದಿಂದ ಒಂದುವರೆ ಲಕ್ಷದವರೆಗೂ ಸಂಬಳ ಇರುತ್ತದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಜನವರಿ 10 ರಿಂದ ಆರಂಭಗೊಂಡಿದೆ. ಅರ್ಜಿ ಸಲ್ಲಿಸಲು ಜವರಿ 24 ಕೊನೆಯ ದಿನ, ಲಿಖಿತ ಹಾಗೂ ಸಂದರ್ಶನದ ಮೂಲಕ ಆಯ್ಕೆ ನಡೆಸಲಾಗುವುದು. ಯಾವುದೆಲ್ಲಾ ಹುದ್ದೆಗಳಿವೆ? ಅರ್ಹತೆಗಳೇನು? ಸಂಬಂಧಿತ ವಿಷಯಗಳಲ್ಲಿ ಶೇ.60 ಅಂಕವಿರಬೇಕು. ಎಂಎಸ್ಸಿ, ಎಂಟೆಕ್ ಪದವಿ ವಯಸ್ಸು ಎಷ್ಟಿರಬೇಕು? ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು […]

ಕುಂದಾಪುರ: ನೂತನ ಡಿವೈಎಸ್ಪಿ ಆಗಿ ಎಚ್.ಡಿ.ಕುಲಕರ್ಣಿ ಅಧಿಕಾರ ಸ್ವೀಕಾರ.

ಕುಂದಾಪುರ: ಕುಂದಾಪುರ ಪೊಲೀಸ್ ಉಪವಿಭಾಗದ ನೂತನ ಡಿವೈಎಸ್ಪಿಆಗಿ ಎಚ್.ಡಿ.ಕುಲಕರ್ಣಿ ಅಧಿಕಾರ ಸ್ವೀಕರಿಸಿದ್ದಾರೆ. ಇವರು 1998ನೇ ಬ್ಯಾಚ್ ಪೊಲೀಸ್ ಅಧಿಕಾರಿಯಾಗಿದ್ದು ಉಡುಪಿ ಜಿಲ್ಲೆ ಸಹಿತ ರಾಜ್ಯದ ಹಲವು ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು ಕಳೆದ 4 ವರ್ಷಗಳ ಹಿಂದೆ ಡಿವೈಎಸ್ಪಿಆಗಿ ಪದೋನ್ನತಿ ಹೊಂದಿ ಬೆಂಗಳೂರು ಗ್ರಾಮಾಂತರ ಸೈಬರ್ ಕ್ರೈಮ್ ವಿಭಾಗದಲ್ಲಿ ಡಿವೈಎಸ್ಪಿ ಆಗಿದ್ದರು. ನಂತರ ಬೆಂಗಳೂರು ಸಿಐಡಿಯಲ್ಲಿ ಡಿವೈಎಸ್ಪಿ ಆಗಿದ್ದ ಇವರನ್ನು ಇದೀಗ ಕುಂದಾಪುರ ಪೊಲೀಸ್ ಉಪವಿಭಾಗದ ಉಪಾಧೀಕ್ಷಕರಾಗಿ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು. ಅವರ ವರ್ಗಾವಣೆ […]

ಬ್ರಹ್ಮಾವರ: ವಿದ್ಯಾರ್ಥಿ ನಾಪತ್ತೆ

ಬ್ರಹ್ಮಾವರ: ಚಾಂತಾರು ಗ್ರಾಮದ ಕ್ರಾಸ್ ಲ್ಯಾಂಡ್ ಕಾಲೇಜಿನ ಹಾಸ್ಟೇಲ್‌ನಲ್ಲಿ ವಾಸವಾಗಿರುವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಲೊಕೇಶ್ ಜಾತವ್(16) ಎಂಬವರು ಜ.14ರಂದು ಸಂಜೆ ಹಾಸ್ಟೇಲ್ ಕ್ಯಾಂಪಸ್‌ನಿಂದ ಎಂಟಿಎಂಗೆ ಹೋಗಿ ಹಣ ಡ್ರಾ ಮಾಡಿಕೊಂಡು ಬರುವುದಾಗಿ ಹೇಳಿ ಹೋದವರು ವಾಪಾಸ್ಸು ಬಾರದೇ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಜ.17 ರಂದು ಸಿಎಂ ಸಿದ್ದರಾಮಯ್ಯ ಪ್ರವಾಸ

ಮಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಜ.17ರಂದು ದ.ಕ. ಜಿಲ್ಲೆಗೆ ಆಗಮಿಸಲಿದ್ದಾರೆ.ಅಂದು ಪೂ.11:30ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಬಳಿಕ ಮೇರಿಹಿಲ್‌ನಲ್ಲಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಮಂಗಳೂರು ಪ್ರಾದೇಶಿಕ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸುವರು. ಮಧ್ಯಾಹ್ನ 12:15ಕ್ಕೆ ಪುರಭವನದಲ್ಲಿ ನಡೆಯುವ ಬಹುಸಂಸ್ಕೃತಿ ಉತ್ಸವ-ಕರ್ನಾಟಕ ಸುವರ್ಣ ಸಂಭ್ರಮ 50 ಉದ್ಘಾಟಿಸುವರು. ಸಂಜೆ 5ಕ್ಕೆ ಮಂಗಳಾ ಕ್ರೀಡಾಂಗಣದಲ್ಲಿ ಕರ್ನಾಟಕ ಕ್ರೀಡಾಕೂಟ ಉದ್ಘಾಟಿಸುವರು. ರಾತ್ರಿ 8ಕ್ಕೆ ಬೆಂಗಳೂರಿಗೆ ತೆರಳುವರು ಎಂದು ಪ್ರಕಟನೆ ತಿಳಿಸಿದೆ.