ಮಲ್ಪೆ ಫುಡ್ ಫೆಸ್ಟ್ ಗೆ ಅದ್ದೂರಿ ತೆರೆ, ಕಣ್ಮನ ಸೆಳೆದ ಆಕಾಶ ದೀಪಗಳು, ನಾಲಗೆಗೆ ರುಚಿ ಹತ್ತಿಸಿದ ಬಗೆ ಬಗೆ ಖಾದ್ಯಗಳು

ಉಡುಪಿ: ಮಲ್ಪೆ ಕಡಲ ಕಿನಾರೆಯಲ್ಲಿ ಪರಶುರಾಮ ಫ್ರೆಂಡ್ಸ್ ಬಳಗವು ಜನವರಿ 11- ಜ.14 ವರೆಗೆ ಆಯೋಜಿಸಿದ್ದ  ಮಲ್ಪೆ ಫುಡ್ ಫೆಸ್ಟ್ ಆಹಾರ ಮೇಳ ಯಶಸ್ವಿಯಾಗಿದ್ದು ಮೇಳದಲ್ಲಿದ್ದ ವಿವಿಧ ಖಾಧ್ಯಗಳ ರುಚಿಗೆ  ಜನರು ಮಾರು ಹೋಗಿದ್ದಾರೆ, ಅಲ್ಲದೇ ಆಕಾಶದಲ್ಲಿ ಆಕಾಶ ದೀಪಗಳನ್ನು ಹಾರಿಸುವ ವಿಭಿನ್ನ ಕಾರ್ಯಕ್ರಮಕ್ಕೆ ಜನರು ಫುಲ್ ಫೀಧಾಗೊಂಡಿದ್ದಾರೆ. ಈ ಆಹಾರೋತ್ಸವದಲ್ಲಿ ಬಾಯಲ್ಲಿ ನೀರೂರಿಸುವ ವೈವಿಧ್ಯಮಯ ಖಾದ್ಯಗಳು ಜನರನ್ನು ಆಕರ್ಷಿಸಿದೆ. ಕಳೆದ ಮೂರು ದಿನಗಳಲ್ಲಿ ಸಹಸ್ತ್ರಾರು ಮಂದಿ ಪ್ರವಾಸಿಗರು ಮಲ್ಪೆ ಫುಡ್ ಫೆಸ್ಟ್ ನಲ್ಲಿ ಪಾಲ್ಗೊಂಡಿದ್ದರು. ಅತ್ಯಂತ […]

ಉಡುಪಿ :ವಾರದೊಳಗೆ ನಗರಕ್ಕೆ ಬಹುನಿರೀಕ್ಷತ ವಾರಾಹಿ ನದಿ ನೀರು ಪೂರೈಕೆ

ಉಡುಪಿ :ಜನರ ಬಹುಕಾಲದ ಕನಸೊಂದು ನನಸಾಗುವ ಕಾಲ ಕೂಡಿ ಬಂದಿದೆ. ಈ ವಾರಾಂತ್ಯದಲ್ಲಿ ಉಡುಪಿ ನಗರದ ಮನೆಗಳಿಗೆ ವಾರಾಹಿ ನದಿಯ ನೀರು ಪೂರೈಕೆ ಆಗಲಿದೆ. ನಗರಸಭೆ ವ್ಯಾಪ್ತಿಯಲ್ಲಿ ದಿನಪೂರ್ತಿ ಕುಡಿಯುವ ನೀರು ಪೂರೈಸುವ ಈ ಯೋಜನೆಯ ಪೈಪ್ ಲೈನ್ ಸಂಪರ್ಕ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ನೀರು ಪೂರೈಕೆಗೆ ಎಲ್ಲವೂ ಸಜ್ಜಾಗಿದ್ದು ಇದಕ್ಕೆ ಪೂರ್ವಭಾವಿಯಾಗಿ ಮಣಿಪಾಲದಲ್ಲಿರುವ ನಗರಸಭೆ ನೀರಿನ ರೇಚಕದಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಯಿತು. ಅಧಿಕಾರಿಗಳು ನೀರಿನ ಗುಣಮಟ್ಟ ಪರಿಶೀಲನೆ ನಡೆಸಿದರು. ನಗರಸಭೆ ವ್ಯಾಪ್ತಿಯ 35 ವಾರ್ಡ್ ಗಳಲ್ಲಿ […]

ಜ.18ರಂದು ವಿಶೇಷ ಮಕ್ಕಳ ಜಿಲ್ಲಾಮಟ್ಟದ “ಹೆಜ್ಜೆ ಸಂಭ್ರಮ” ನೃತ್ಯರೂಪಕ

ಉಡುಪಿ: ಫಸ್ಟ್ ಸ್ಟೆಪ್ ನೃತ್ಯ ತರಬೇತಿ ಕೇಂದ್ರ ಕುಂದಾಪುರ ಇದರ ವತಿಯಿಂದ ಕನ್ನಡ ಮತ್ತು‌ ಸಂಸ್ಕೃತ ಇಲಾಖೆಯ‌ ಸಹಕಾರದೊಂದಿಗೆ ವಿಶೇಷ ಮಕ್ಕಳ ಪ್ರತಿಭೆಗಳ ಅನಾವರಣಕ್ಕಾಗಿ ನಡೆಯುವ ಸತತ ಮೂರನೇ ವರ್ಷದ ಜಿಲ್ಲಾಮಟ್ಟದ “ಹೆಜ್ಜೆ ಸಂಭ್ರಮ” ನೃತ್ಯ ರೂಪಕ ಇದೇ ಜ.18ರಂದು ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ಅಜ್ಜರಕಾಡಿನ ಟೌನ್ ಹಾಲ್ ನಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಸಂಸ್ಥಾಪಕಿ ಅಕ್ಷತಾ ರಾವ್ ತಿಳಿಸಿದರು. ಈ ಕುರಿತು ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ವಿಶೇಷ ಶಾಲೆಯ […]

ಗಣರಾಜ್ಯೋತ್ಸವಕ್ಕೆ ಹೆಬ್ರಿ ಎಸ್.ಆರ್ ಪಬ್ಲಿಕ್ ಸ್ಕೂಲ್’ನ ವಿದ್ಯಾರ್ಥಿ ವಿನೀಶ್ ಆಚಾರ್ಯ ಆಯ್ಕೆ.

ಉಡುಪಿ: ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿ.ಬಿ.ಎಸ್.ಇ) ಮತ್ತು ಕೇಂದ್ರ ರಕ್ಷಣಾ ಸಚಿವಾಲಯ(ಎಂಓಡಿ) ಸಹಯೋಗದೊಂದಿಗೆ ಶಿಕ್ಷಣ ಸಚಿವಾಲಯ(ಎಂಇಒ)ಶೌರ್ಯ ಪ್ರಶಸ್ತಿಗಳ ಉಪಕ್ರಮದ ಭಾಗವಾಗಿ ವೀರ್ ಗಾಥಾ 4.0 ಸ್ಪರ್ಧೆಯನ್ನು 3 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು. ಇದರಲ್ಲಿ ಹೆಬ್ರಿಯ ಎಸ್.ಆರ್.ಪಬ್ಲಿಕ್ ಸ್ಕೂಲಿನ 7ನೇ ತರಗತಿ ವಿದ್ಯಾರ್ಥಿ ವಿನೀಶ್ ಆಚಾರ್ಯ, ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾಗಿ ದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ಭಾಗಿಯಾಗುವ ಅವಕಾಶ ಪಡೆದಿದ್ದಾರೆ. ಇವರು ರಕ್ಷಣಾ ಸಚಿವರಿಂದ ಸನ್ಮಾನವನ್ನು ಪಡೆಯಲಿದ್ದಾರೆ. ಶೌರ್ಯ ಪ್ರಶಸ್ತಿಗಳನ್ನು ಪಡೆದವರ ಶೌರ್ಯ ಮತ್ತು ಶೌರ್ಯದ […]

ಉತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ

ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡುವ ರಾಜ್ಯಮಟ್ಟದ ಉತ್ತಮ ಸಂಘ ಪ್ರಶಸ್ತಿಗೆ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘವು ಆಯ್ಕೆಯಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ತಿಳಿಸಿದ್ದಾರೆ. ಉಡುಪಿ ಪತ್ರಿಕಾ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ರಜತ ಮಹೋತ್ಸವ ಹಿನ್ನೆಲೆ ಮತ್ತು 2024ನೇ ಸಾಲಿನಲ್ಲಿ ಸಂಘ ಹಮ್ಮಿ ಕೊಂಡಿರುವ ನಿರಂತರ ಹಾಗೂ ಅತ್ಯುತ್ತಮ ಕಾರ್ಯ ಚಟುವಟಿಕೆ ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ […]