ಉಡುಪಿ: ಕೇಶವ ಜ್ಞಾನ ಮಂದಿರ ಶಿಲಾನ್ಯಾಸ ಕಾರ್ಯಕ್ರಮ

ಉಡುಪಿ: ಕೊಡವೂರು ಗ್ರಾಮದಲ್ಲಿ ಮುಂದಿನ ಪೀಳಿಗೆಗೆ ಸಂಸ್ಕಾರಯುತವಾದ ಶಿಕ್ಷಣ ಮಾರ್ಗದರ್ಶನ ಭಜನೆ ಭಗವದ್ಗೀತೆ ಯೋಗದಂತಹ ಶಿಕ್ಷಣವನ್ನು ಶಿಶುಮಂದಿರದ ಮುಖಾಂತರ ಮುಂದಿನ ಪೀಳಿಗೆಗೆ ನೀಡಬೇಕು ಈ ಮುಖಾಂತರ ಮುಂದಿನ ಪೀಳಿಗೆಗೆ ದೇಶ ಧರ್ಮದ ಪರವಾಗಿ ಜೀವನ ನಡೆಯುವಂತಾಗಬೇಕು ಅನ್ನುವ ದೃಷ್ಟಿಯಿಂದ ಕೊಡುವೂರಿನ ಶ್ರೀ ಶಂಕರನಾರಾಯಣ ತೀರ್ಥ ಕೆರೆಯ ಧಾರ್ಮಿಕ ವಾತಾವರಣದಲ್ಲಿ ಕೇಶವ ಜ್ಞಾನ ಮಂದಿರದ ಶಿಲನ್ಯಾಸ ಕಾರ್ಯಕ್ರಮದಲ್ಲಿ ವಿಜಯ್ ಕೊಡವೂರು ಮಾತನಾಡಿದರು. ಈ ಸಂದರ್ಭದಲ್ಲಿ ಕೆರೆ ಅಭಿವೃದ್ಧಿಯ ಸಮಿತಿಯ ಅಧ್ಯಕ್ಷರಾದ ದೇವರಾಜ್ ಸುವರ್ಣ,ಶ್ರೀಧರ್ ಕಾನಂಗಿ,ಪ್ರಭಾತ್, ಸುಧಾಕರ್ ಕುಂದರ್,ದಿನೇಶ್ ಹರಿಹರನಗರ,ಚಂದ್ರಕಾಂತ್,ಸಂದೇಶ, […]

ಉಡುಪಿ: ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ

ಉಡುಪಿ: ಜಿಲ್ಲೆಯಲ್ಲಿನ ಅಂತ್ಯೋದಯ ಅನ್ನ ಯೋಜನೆ, ಆದ್ಯತಾ ಪಡಿತರ ಚೀಟಿಗಳಿಗೆ ಮತ್ತು ಆದ್ಯತೇತರ ಪಡಿತರ ಚೀಟಿಗಳಿಗೆ ಕುಟುಂಬದ ಸದಸ್ಯರ ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆ ಹಾಗೂ ಹೆಸರು ತೆಗೆಯುವ ಬಗ್ಗೆ ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಜನವರಿ 31ರ ವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಅವಕಾಶ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ : ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿ ವಿಳಂಬ ಹಿನ್ನೆಲೆ- ಸ್ಥಳಕ್ಕೆ ಡಿಸಿ ಎಸ್ಪಿ ಭೇಟಿ

ಉಡುಪಿ: ಗಡುವು ನೀಡಲಾಗಿದ್ದ ಅವಧಿಯಲ್ಲಿ ಇನ್ನೂ ಪೂರ್ಣಗೊಳ್ಳದ ರಾಷ್ಟ್ರೀಯ ಹೆದ್ದಾರಿ 169 ಎ ಇದರ ಇಂದ್ರಾಳಿ ಸೇತುವೆ ಕಾಮಗಾರಿ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಹಳ ವರ್ಷಗಳಿಂದ ಕುಂಟುತ್ತಾ ಸಾಗುತ್ತಿರುವ ಇಂದ್ರಾಳಿ ಸೇತುವೆ ಕಾಮಗಾರಿ, ತೀವ್ರ ಜನಾಕ್ರೋಶದ ಬಳಿಕ ಜನವರಿ 15ರೊಳಗೆ ಪೂರ್ಣಗೊಳಿಸುವ ಕುರಿತು ಗುತ್ತಿಗೆದಾರರಿಂದ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿತ್ತು. ಈ ಅವಧಿ ಮುಗಿದಿದ್ದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಈ […]

ಉಡುಪಿ-ಮಣಿಪಾಲದ ಎಕ್ಸ್ ಪೋರ್ಟ್ ಮತ್ತು ಪಿವಿಸಿ ಪೈಪ್ ಇಂಡಸ್ಟ್ರಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ: ಉಡುಪಿ-ಮಣಿಪಾಲದ ಎಕ್ಸ್ ಪೋರ್ಟ್ ಮತ್ತು ಪಿವಿಸಿ ಪೈಪ್ ಇಂಡಸ್ಟ್ರಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 1 ಪ್ರೊಡಕ್ಷನ್ ಸೂಪರ್ ವೈಸರ್ -10 Posts 2 ಅಕೌಂಟೆಂಟ್ – 3 Posts 1 3 ಟೆಕ್ನಿಷಿಯನ್ (ITI/Diploma) – 50 Posts 4 ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ – 5 Posts 5 ಎಲೆಕ್ನಿಷಿಯನ್ (ITI) – 10 Posts 6 ಬಿಲ್ಡಿಂಗ್ cum ಕ್ಯಾಶಿಯರ್ – 5 Posts 7 ಟೆಲಿಕಾಲರ್ – 48 Posts […]

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಅತ್ತ್ಯುತ್ತಮ ಅಂಕ ಗಳಿಸಿ ತೇರ್ಗಡೆಯಾದ ವಿದ್ಯಾರ್ಥಿನಿಯರು

ಉಡುಪಿ:ಕುಮಾರಿ ಸುನವ್ಯ.ಎಚ್.ಎನ್, ಸಂಹಿತಾ ಎಚ್.ಎನ್ ರವರು ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ನಡೆಸಿದ ವಿಶೇಷ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಅತ್ತ್ಯುತ್ತಮ (ಕ್ರಮವಾಗಿ 97.25%, 87.25%) ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ. ಉಡುಪಿಯ ಸುನಾಗ್ ಆರ್ಥೋ ಕೇರ್ ಮತ್ತು ಮಲ್ಟಿಸ್ಪೆಷಾಲಿಟಿ ಸೆಂಟರ್‌ನ ಸಂಸ್ಥಾಪಕರು ಮತ್ತು ವೈದ್ಯಕೀಯ ನಿರ್ದೇಶಕರಾದ ಡಾ. ನರೇಂದ್ರ ಕುಮಾರ್ ಹೆಚ್.ಎಸ್ ಮತ್ತು ಡಾ.ವೀಣಾ ನರೇಂದ್ರ ರವರ ಪುತ್ರಿಯರಾದ ಇವರು ಉಡುಪಿಯ ಹೆಜ್ಜೆ ಗೆಜ್ಜೆ ನೃತ್ಯ ಸಂಸ್ಥೆಯ ನಿರ್ದೇಶಕಿ ವಿದುಷಿ ಯಶಾ ರಾಮಕೃಷ್ಣರಲ್ಲಿ […]