ಬ್ರಹ್ಮಾವರದಲ್ಲಿ ಶಿರಿಯಾರ ಪ್ರಭಾಕರ್ ನಾಯಕ್ ಅವರ ನೂತನ ನೋಟರಿ ಕಚೇರಿ ಆರಂಭ.

ಬ್ರಹ್ಮಾವರ: ಉಡುಪಿ ಜಿಲ್ಲೆ, ಬ್ರಹ್ಮಾವರದ ರಾಷ್ಟ್ರೀಯ ಹೆದ್ದಾರಿ 66ರ ಆಕಾಶವಾಣಿ ವೃತ್ತದ ಬ್ರಹ್ಮಾವರ ನ್ಯಾಯಾಲಯದ ಹತ್ತಿರ “ಶೇಷಗೋಪಿ ಪ್ಯಾರಡೈಸ್” ಕಾಂಪ್ಲೆಕ್ಸ್‌ನಲ್ಲಿ ಉಡುಪಿ ಹಿರಿಯ ನ್ಯಾಯವಾದಿ ಮತ್ತು ನೋಟರಿ ಶಿರಿಯಾರ ಪ್ರಭಾಕರ ನಾಯಕ್ ಮತ್ತು ನ್ಯಾಯವಾದಿ ಕೆ. ಮನೀಷ್ ವಿ. ಶೆಟ್ಟಿಯವರ ಬ್ರಹ್ಮಾವರ ಶಾಖೆಯನ್ನು ನಿವೃತ್ತ ಉಪನ್ಯಾಸಕರಾದ ಹಾಲಾಡಿ ಕುದ್ರುಮನೆ ಶ್ರೀ ಕರುಣಾಕರ ಶೆಟ್ಟಿಯವರು ಅಮೃತ ಹಸ್ತದಿಂದ ದೀಪ ಬೆಳಗಿಸಿ ಉದ್ಘಾಟಿಸಿ ಶೀಘ್ರ ನ್ಯಾಯ ಒದಗಿಸುವ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ಶ್ರೀಮತಿ ವಿಜೇತಾ ಎಂ. ಶೆಟ್ಟಿ, ಶ್ರೀಮತಿ […]
ಮಲ್ಪೆ: ಆಭರಣ ಮಳಿಗೆಯ ಉದ್ಯೋಗಿ ಬಾವಿಗೆ ಹಾರಿ ಆತ್ಮಹತ್ಯೆ

ಉಡುಪಿ: ಆಭರಣ ಮಳಿಗೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ರಮೇಶ್ ಶೇರಿಗಾರ್ ಎನ್ನುವರು, ಬೇರೆಯವರ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು, ಮಲ್ಪೆ ಪೋಲಿಸ್ ಠಾಣೆ ವ್ಯಾಪ್ತಿಯ ಗರಡಿಮಜಲಿನಲ್ಲಿ ನಡೆದಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಎರಡು ದಿನಗಳ ಹಿಂದೆ ಮೃತ ವ್ಯಕ್ತಿ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು, ಹುಡುಕಾಟ ನಡೆಯುತಿತ್ತು.
ಉಡುಪಿ: 40 ಲಕ್ಷ ಅನುದಾನದಲ್ಲಿ ಇನ್ನಂಜೆ ಮಾರ್ಕೊಡಿ ಸೇತುವೆ ಬಳಿ ತಡೆಗೋಡೆ ನಿರ್ಮಾಣ ಕಾಮಗಾರಿ.

ಉಡುಪಿ: ಕಾಪು – ಬಂಟಕಲ್ಲು ರಸ್ತೆ ಇನ್ನಂಜೆ ಮಾರ್ಕೋಡಿ ಸೇತುವೆ ಬಳಿ ಮಳೆಯಿಂದ ಹಾನಿಯಾದ ಭಾಗದಲ್ಲಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ 40 ಲಕ್ಷ ರೂಪಾಯಿ ಅನುದಾನದ ಮಂಜೂರಾಗಿದ್ದು, ಇದರ ಗುದ್ದಲಿ ಪೂಜೆಯನ್ನು ಇಂದು ದಿನಾಂಕ ಜ.15 ರಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ಇನ್ನಂಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಾಲಿನಿ ಶೆಟ್ಟಿ, ಉಪಾಧ್ಯಕ್ಷರಾದ ಸುರೇಖಾ ಶೆಟ್ಟಿ, ಇನ್ನಂಜೆ ಗ್ರಾಮ ಪಂಚಾಯತ್ ಸದಸ್ಯರಾದ ದಿವೇಶ್ ಶೆಟ್ಟಿ, ನಿತೇಶ್ ಸಾಲ್ಯಾನ್, ಸವಿತಾ […]
ಬ್ರಹ್ಮಾವರ ಮತ್ತು ಕುಂದಾಪುರದ ಪ್ಲೇಸ್ಮೆಂಟ್ ಆಫೀಸಿನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ.

ಉಡುಪಿ:ಬ್ರಹ್ಮಾವರ ಮತ್ತು ಕುಂದಾಪುರದ ಪ್ಲೇಸ್ಮೆಂಟ್ ಆಫೀಸಿನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 1.ಟೆಲಿಕಾಲರ್ – 2 (Female) 2.ಆಫೀಸ್ ಸ್ಟಾಫ್ – 2 (Female) ಯಾವುದೇ ಡಿಗ್ರಿ ವಿದ್ಯಾರ್ಹತೆಯೊಂದಿಗೆ ಉತ್ತಮ ಸಂವಹನ ಕೌಶಲ್ಯ ಹೊಂದಿರಬೇಕು.ಕೆಲಸದ ಸಮಯ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆ. ಆದಿತ್ಯವಾರ ರಜಾದಿನ. ಸಂದರ್ಶನದ ನಡೆಯುವ ದಿನಾಂಕ -08-01-2025.ನಿಮ್ಮ ರೆಸ್ಯೂಮ್ ಅನ್ನು ವಾಟ್ಸಪ್ ಮುಖಾಂತರ ಕಳುಹಿಸಿ.9019112723.
ಬಂಟ್ವಾಳ: ಬೈಕ್ ಗಳ ನಡುವೆ ಅಪಘಾತ; ಬಾಲಕಿ ಮೃತ್ಯು ಸವಾರರಿಬ್ಬರಿಗೆ ಗಾಯ

ಬಂಟ್ವಾಳ: ಎರಡು ಬೈಕ್ ಗಳ ನಡುವೆ ನಡೆದ ಅಪಘಾತದಲ್ಲಿ ಸಹ ಪ್ರಯಾಣಿಕೆಯಾಗಿದ್ದ ಬಾಲಕಿ ಮೃತಪಟ್ಟ ಘಟನೆ ಇಂದು ರಾತ್ರಿ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರಾಮಲ್ ಕಟ್ಟೆಯಲ್ಲಿ ನಡೆದಿದೆ. ಕುಕ್ಕಿಪಾಡಿ ಗ್ರಾಮದ ಕೊಡಂಬೆಟ್ಟು ನಿವಾಸಿ ಇಸ್ಮತ್ ಆಯಿಶಾ (13) ಮೃತಪಟ್ಟ ಬಾಲಕಿ. ಬೈಕ್ ಸವಾರ ಬಾಲಕಿಯ ತಂದೆ ಅಬ್ದುಲ್ ರಹ್ಮಾನ್ ಅವರು ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಮಲ್ ಕಟ್ಟೆಯಿಂದ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ನೆತ್ತರಕೆರೆ ನಿವಾಸಿ ರಂಜಿತ್ ಎಂಬಾತ ಬಿ.ಸಿ.ರೋಡ್ […]