ಹಿರಿಯಡಕ: ಜ.19 ರಂದು ಉಚಿತ ನೇತ್ರ ತಪಾಸಣಾ ಶಿಬಿರ.

ಉಡುಪಿ: ಕರ್ನಾಟಕ ಸರಕಾರ ಜಿಲ್ಲಾ ಪಂಚಾಯತ್ ಉಡುಪಿ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಉಡುಪಿ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಉಡುಪಿ, ಗ್ರಾಮ ಪಂಚಾಯತ್ ಬೊಮ್ಮರಬೆಟ್ಟು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವಾರಣಾ ವಿಭಾಗ), ಉಡುಪಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಿರಿಯಡಕ, ಲಯನ್ಸ್ ಕ್ಲಬ್ ಹಿರಿಯಡಕ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣಾ ಶಿಬಿರ ಜ.19 ರಂದು ಆದಿತ್ಯವಾರ ಸಮಯ ಬೆಳಗ್ಗೆ 10.00 ರಿಂದ ಮಧ್ಯಾಹ್ನ 1.00 ರವರೆಗೆ ಸ್ಥಳ: ಸರಕಾರಿ […]
ಉಡುಪಿ: ವ್ಯಕ್ತಿ ನಾಪತ್ತೆ

ಉಡುಪಿ, ಜ.15: ಕಾಪುವಿನ ಉಳಿಯಾರಗೋಳಿ ಗ್ರಾಮದ ಕಲ್ಯ ಭಾರತ್ ನಗರ ನಿವಾಸಿ ರಾಮ ದೇವಾಡಿಗ (64) ಎಂಬ ವ್ಯಕ್ತಿಯು ಜನವರಿ 10 ರಂದು ಮನೆಯಿಂದ ಹೊರಗೆ ಹೋದವರು ವಾಪಾಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 5 ಇಂಚು ಎತ್ತರ, ಸಾಧಾರಣ ಮೈ ಕಟ್ಟು, ದುಂಡು ಮುಖ ಹೊಂದಿದ್ದು, ಕನ್ನಡ, ತುಳು, ಹಿಂದಿ ಹಾಗೂ ಮರಾಠಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ಉಡುಪಿ ದೂ.ಸಂಖ್ಯೆ: 0820-2526444, 2526709, ಕಾಪು ಪೊಲೀಸ್ […]
ಉಡುಪಿ ಕೃಷ್ಣಮಠಕ್ಕೆ ಆಸ್ಟ್ರೇಲಿಯ ವಿಕ್ಟೋರಿಯ ಸಂಸದ ಜಾನ್ ಮುಲಾಹಿ ಭೇಟಿ

ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದ ಮಕರ ಸಂಕ್ರಾಂತಿ ಉತ್ಸವಕ್ಕೆ ಈ ಬಾರಿ ಆಸ್ಟ್ರೇಲಿಯ ವಿಕ್ಟೋರಿಯ ರಾಜ್ಯದ ಸಂಸದ ಜಾನ್ ಮುಲಾಹಿ ಭೇಟಿ ನೀಡಿದ್ದಾರೆ. ದಿನವಿಡೀ ಶ್ರೀ ಕೃಷ್ಣ ಮಠದಲ್ಲಿ ಕಳೆದ ಅವರು ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ರಾತ್ರಿ ನಡೆದ ಮಕರ ಸಂಕ್ರಾಂತಿ ಉತ್ಸವದಲ್ಲೂ ಭಾಗಿಯಾಗಿ ಸಂಭ್ರಮಿಸಿದ್ದಾರೆ. ಭಾರತೀಯ ಸಮುದಾಯದ ಜೊತೆ ತಮ್ಮ ಸಂಬಂಧ ಚೆನ್ನಾಗಿದ್ದು ವಿವಿಧ ಚಟುವಟಿಕೆಗಳಿಗೆ ಆರ್ಥಿಕ ಸಹಕಾರಗಳನ್ನು ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಿರ್ಮಾಣಗೊಂಡ ಪುತ್ತಿಗೆ ಮಠದ ವೆಂಕಟಕೃಷ್ಣ ಬೃಂದಾವನ ಮತ್ತು ಅನ್ನದಾನ […]
ಮಹಾಕುಂಭ ಮೇಳದಲ್ಲಿ ಪುಣ್ಯಸ್ನಾನ ಕೈಗೊಂಡ ಪಲಿಮಾರು ಶ್ರೀ

ಉಡುಪಿ: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಕೋಟ್ಯಾಂತರ ಜನರು ಭಾಗವಹಿಸಿದ್ದಾರೆ. ಮೊದಲ ದಿನದ ಶಾಹಿ ಸ್ಥಾನದಲ್ಲಿ ಮೂರುವರೆ ಕೋಟಿಗೂ ಅಧಿಕ ಭಕ್ತರು ಭಾಗವಹಿಸಿದ್ದರು. ಉಡುಪಿಯ ಅಷ್ಟಮಠಗಳ ಪೈಕಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಮೊದಲ ದಿನವೇ ಪುಣ್ಯಸ್ನಾನ ಕೈಗೊಳ್ಳುವ ಮೂಲಕ ತಮ್ಮ ಶೃದ್ದೆ, ಭಕ್ತಿ ಸಲ್ಲಿಸಿದ್ದಾರೆ. ಉಡುಪಿಯಿಂದ ಅನೇಕ ಭಕ್ತರು ಕುಂಭಮೇಳದಲ್ಲಿ ಭಾಗವಹಿಸುತ್ತಿದ್ದು ಇದೇ ತಿಂಗಳ 24ರಂದು ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥರು ಕುಂಭಮೇಳದಲ್ಲಿ ಭಾಗಿಯಾಗಲಿದ್ದಾರೆ.
ಜ.17- 21: ಕಚ್ಚೂರು ಶ್ರೀ ಮಾಲ್ತಿದೇವಿ ಶ್ರೀ ಬಬ್ಬುಸ್ವಾಮಿ ಮೂಲ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ

ಬ್ರಹ್ಮಾವರ: ಕಚ್ಚೂರು ಶ್ರೀ ಮಾಲ್ತಿದೇವಿ ಬಬ್ಬುಸ್ವಾಮಿ, ಶ್ರೀ ಮೂಲ ಕ್ಷೇತ್ರದ ಜಾತ್ರಾ ಮಹೋತ್ಸವ ಜ.17ರಿಂದಜ.21ರ ವರೆಗೆ ನಡೆಯಲಿದೆ. ಹೊರೆ ಕಾಣಿಕೆ ಮೆರವಣಿಗೆ:ಜ.17 ರಂದು ಹಸಿರು ಹೊರೆ ಕಾಣಿಕೆ ಮಂಗಳೂರಿನಿಂದ ಹೊರಟು ಮೂಲ್ಕಿ ಕಟಪಾಡಿ ಉಡುಪಿ ಮಾರ್ಗವಾಗಿ ಅಲ್ಲಲ್ಲಿ ಭಕ್ತಾದಿಗಳಿಂದ ಹೊರೆ ಕಾಣಿಕೆ ಸ್ವೀಕರಿಸಿ ಮಧ್ಯಾಹ್ನ 3.30ಕ್ಕೆ ಹಸುರು ಹೊರೆ ಕಾಣಿಕೆ ಮೆರವಣಿಗೆ ಮೂಲಕ ಶ್ರೀ ಕ್ಷೇತ್ರಕ್ಕೆ ತಲುಪಲಿದೆ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಆಡಳಿತ ಮೊಕ್ತಸರ ಬಿ.ಎನ್. ಶಂಕರ ಪೂಜಾರಿ, ಧಾರ್ಮಿಕ ಮುಖಂಡ ಪ್ರೇಮಾನಂದ ಶೆಟ್ಟಿ ಕಣ್ಣೀರೆ, […]