ಉಡುಪಿ:ಉಚಿತ ನೇತ್ರ ತಪಾಸಣಾ ಶಿಬಿರ

ಉಡುಪಿ: ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂಧತ್ವ ನಿವಾರಣಾವಿಭಾಗ), ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಗ್ರಾಮ ಪಂಚಾಯತ್ ಬೊಮ್ಮರಬೆಟ್ಟು, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಲಯನ್ಸ್ ಕ್ಲಬ್ ಹಿರಿಯಡಕ ಇವರ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ಕಾರ್ಯಕ್ರಮವು ಜನವರಿ 19 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರ ವರೆಗೆ ಹಿರಿಯಡಕದ ಕೊಂಡಾಡಿ ಸರಕಾರಿಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದ್ದು, ಸಾರ್ವಜನಿಕರು […]

ಬೈಂದೂರು: ಬಾವಿಗೆ ಬಿದ್ದು ಕೃಷಿಕ ಮೃತ್ಯು

ಬೈಂದೂರು: ಬಾವಿಗೆ ಬಿದ್ದು ಕೃಷಿಕರೊಬ್ಬರು ಮೃತಪಟ್ಟ ಘಟನೆ ಜ.12ರಂದು ರಾತ್ರಿ ವೇಳೆ ಯಡ್ತರೆ ಗ್ರಾಮದ ಆಲಂದೂರು ಎಂಬಲ್ಲಿ ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿ ಕುಷ್ಟು(60) ಎಂದು ಗುರುತಿಸಲಾಗಿದೆ. ಕೃಷಿ ಕೆಲಸ ಮಾಡಿಕೊಂಡಿದ್ದ ಇವರು, ಕೃಷಿಗೆ ನೀರು ಹಾಯಿಸಲು ಆವರಣವಿಲ್ಲದ ಬಾವಿ ಸಮೀಪ ಹೋದಲ್ಲಿ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಡುಪಿ:ಕನ್ನಡ ವೈಚಾರಿಕ ಚಿಂತನೆಗೆ ಕಾರಂತರ ಕೊಡುಗೆ ಅಪೂರ್ವ: ಡಾ.ಸುಧಾಕರ ದೇವಾಡಿಗ

ಉಡುಪಿ: 20 ನೇ ಶತಮಾನದ ಭಾರತೀಯ ಸಾಹಿತ್ಯದಲ್ಲಿ ಡಾ.ಶಿವರಾಮ ಕಾರಂತರು ಸದಾಸ್ಮರಣೀಯರು.ಸಾಹಿತ್ಯ ಮತ್ತು ಸಂಸ್ಕೃತಿಯ ಎಲ್ಲಾ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದವರು. ಅವರು ತಮ್ಮ ಬರಹಗಳ ಮೂಲಕ ಕನ್ನಡ ವೈಚಾರಿಕ ಚಿಂತನೆಗೆ ನೀಡಿದ ಕೊಡುಗೆ ಅಪೂರ್ವವಾದದ್ದು ಎಂದು ಚಿಂತಕ ಡಾ.ಸುಧಾಕರ ದೇವಾಡಿಗ ಬಿ ಹೇಳಿದರು. ಅವರು ಶುಕ್ರವಾರ ಕುಂದಾಪುರದ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಅರಿವಿನ ಬೆಳಕು: […]

ಉಡುಪಿ:ವಾಯುಪಡೆಯಲ್ಲಿ ಏರ್‌ಮ್ಯಾನ್, ಅಗ್ನೀವೀರ್ ವಾಯು ಹುದ್ದೆ : ಅರ್ಜಿ ಆಹ್ವಾನ

ಉಡುಪಿ: ಭಾರತೀಯ ವಾಯುಪಡೆಯಲ್ಲಿ ಏರ್‌ಮ್ಯಾನ್ ಮತ್ತು ಅಗ್ನಿವೀರ್ ವಾಯು ಹುದ್ದೆಗಳಿಗೆ ಅರ್ಹ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಏರ್‌ಮ್ಯಾನ್ ಆಗಿ ಗ್ರೂಪ್ ವೈ (ತಾಂತ್ರಿಕವಲ್ಲದ) (ಎ) ವೈದ್ಯಕೀಯ ಸಹಾಯಕ ವೃತ್ತಿಗೆ ಸೇರಲು 10+2 ವಿದ್ಯಾರ್ಹತೆ ಹೊಂದಿದ ಅವಿವಾಹಿತ ಅಭ್ಯರ್ಥಿಯು 2004 ರ ಜುಲೈ 3 ಮತ್ತು 2008 ರ ಜುಲೈ 03 ರ ನಡುವೆ ಜನಿಸಿರಬೇಕು. (ಬಿ)ವೈದ್ಯಕೀಯ ಸಹಾಯಕ ವೃತ್ತಿಗೆ ಫಾರ್ಮಸಿಯಲ್ಲಿ ಡಿಪ್ಲೋಮಾ/ ಬಿ.ಎಸ್ಸಿ ಆಗಿರುವ ಅವಿವಾಹಿತ ಅಭ್ಯರ್ಥಿಯು 2001 ರ ಜುಲೈ 03 […]

ಉಡುಪಿ:ಫಲಪುಷ್ಪ ಪ್ರದರ್ಶನ : ಮಳಿಗೆ ತೆರೆಯಲು ಅವಕಾಶ

udupixpress

ಉಡುಪಿ: ತೋಟಗಾರಿಕೆ ಇಲಾಖೆ, ಉಡುಪಿ ಇವರ ವತಿಯಿಂದ ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 26 ರಿಂದ 28 ರ ವರೆಗೆ ರೈತ ಸೇವಾ ಕೇಂದ್ರ, ಶಿವಳ್ಳಿ ತೋಟಗಾರಿಕೆ ಕ್ಷೇತ್ರ, ದೊಡ್ಡಣಗುಡ್ಡೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಸದರಿ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ನರ್ಸರಿದಾರರು, ಬೀಜ ಮಾರಾಟಗಾರರು, ವಿವಿಧ ಗೊಬ್ಬರಗಳ ಮಾರಾಟಗಾರರು, ತೋಟಗಾರಿಕೆಗೆ ಸಂಬಂಧಪಟ್ಟ ಉದ್ಯಮದಾರರು, ಯಂತ್ರೋಪಕರಣ ಮಾರಾಟಗಾರರು, ಬ್ಯಾಂಕ್ ಹಾಗೂ ಆಹಾರ ಮಳಿಗೆದಾರರಿಗೆ 100 ಚದರ ಅಡಿ ಗಾತ್ರದ ಮಳಿಗೆಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಸದರಿ ಮಳಿಗೆಗೆ ರೂ. […]