ಉಡುಪಿ: ಮಹಾರಾಷ್ಟ್ರ ಎಫೆಕ್ಸ್ ಬ್ಯಾಂಕ್ ಉದ್ಯೋಗಿ ನೇಣಿಗೆ ಶರಣು

ಉಡುಪಿ: ಉಡುಪಿ ನಗರದ ಆದರ್ಶ್ ಆಸ್ಪತ್ರೆಯ ಬಳಿ ಇರುವ, ವಸತಿ ಸಂಕೀರ್ಣದ ನಾಲ್ಕನೇ ಮಹಡಿಯಲ್ಲಿ ವಾಸವಾಗಿದ್ದ ಗೋಪಾಲ ಕೃಷ್ಣ ಪ್ರಭು ಎನ್ನುವರು ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆಗೈದಿರುವ ಘಟನೆ ನಡೆದಿದೆ. ಮೃತ ವ್ಯಕ್ತಿ ಮಹಾರಾಷ್ಟ್ರ ಎಫೆಕ್ಸ್ ಬ್ಯಾಂಕ್ ಉದ್ಯೋಗಿಯಾಗಿದ್ದರು. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಇವರು, ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಬೆಳಿಗ್ಗೆ ಬಾಗಿಲು ತೆರೆಯದೆರುವುದನ್ನು ಗಮನಿಸಿದಾಗ ನೇಣು ಬಗೆದುಕೊಂಡಿರುವುದು ಗೊತ್ತಾಗಿದೆ . ತಕ್ಷಣವೇ ಉಡುಪಿ ನಗರ ಪೊಲೀಸರಿಗೆ ಮಾಹಿತಿ ನೀಡಿ , ಶವವನ್ನು ಕೆಳಕ್ಕೆ ಇಳಿಸಲಾಗಿದೆ […]

ಗೋವಿನ ಕೆಚ್ಚಲು ಕತ್ತರಿಸಿರುವುದು ಭವಿಷ್ಯದ ಅಪಾಯವನ್ನು ಸೂಚಿಸುತ್ತದೆ: ಪುತ್ತಿಗೆ ಶ್ರೀ

ಉಡುಪಿ: ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಘಟನೆ ಅಮಾನವೀಯವಾಗಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತೇವೆ. ಈ ಘಟನೆಯ ಬಗ್ಗೆ ಕೇಳಿ ಆಘಾತವಾಗಿದೆ ಎಂದು ಉಡುಪಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ‌ ಶ್ರೀಪಾದರು ಹೇಳಿದ್ದಾರೆ. ಚಾಮರಾಜಪೇಟೆಯಲ್ಲಿ ಹಸುವಿನ ಕೆಚ್ಚಲು ಕೊಯ್ದ ಪ್ರಕರಣದ ಕುರಿತು ಶ್ರೀಗಳು ಕಳವಳ ವ್ಯಕ್ತಪಡಿಸಿದ್ದಾರೆ.ಗೋವುಗಳೆಂದರೆ ದೇವರ ಸನ್ನಿಧಾನ ಇರುವ ಸ್ಥಳ ಎಂದು ನಾವು ಗೌರವಿಸುತ್ತೇವೆ. ಪವಿತ್ರ ಎಂದು ಪರಿಗಣಿಸಿ ಭಾರತದಲ್ಲಿ ಪೂಜಿಸಲಾಗುತ್ತದೆ. ಆದರೆ, ಚಾಮರಾಜಪೇಟೆಯಲ್ಲಿ ಕ್ರೂರವಾಗಿ ಹಿಂಸೆಯನ್ನು ನೀಡಿ ಹಸುವಿಗೆ ಘಾಸಿಗೊಳಿಸಲಾಗಿದೆ. ನಮ್ಮ ದೇಶದಲ್ಲಿ […]

ಮಕರ ಸಂಕ್ರಾಂತಿ ವಿಶೇಷ: ರೇಷ್ಮೆ ಜರಿಯ ಸಂಕ್ರಮಣ ಸಂಭ್ರಮ: ಮಗಳು ನೆನಪಿಸಿದ ಅಮ್ಮನ ಬಾಲ್ಯದ ನೆನಪು

“ನಾನು ಸಂಕ್ರಾಂತಿಗೆ ಜರಿ ಲಂಗ ತೊಟ್ಟು ಶಾಲೆಗೆ ಹೋಗುತ್ತೇನೆ. ಪೊಂಗಲ್‌ ಕುರಿತು ನನಗೆ ಭಾಷಣ ನೀಡಲು ಟೀಚರ್‌ ಹೇಳಿದ್ದಾರೆ’ ಎಂದು ಮಗಳು ಹೇಳಿದ್ದು ಕೇಳಿ ವಾರಕ್ಕೆ ಮೊದಲೇ ಮನೆಯಲ್ಲಿ ಹಬ್ಬದ ಸಡಗರ ಗರಿಗೆದರಿತು. ಜನವರಿ ತಿಂಗಳನ್ನು ಇಲ್ಲಿಯ ಶಾಲೆಗಳಲ್ಲಿ “ತಮಿಳು ಹೆರಿಟೇಜ್‌ ಮಂಥ್‌’ ಎಂದು ಆಚರಿಸುತ್ತಾರೆ. ಶಾಲಾ-ಕಾಲೇಜುಗಳಲ್ಲದೇ ಸ್ಥಳೀಯ ತಮಿಳು ಕೂಟಗಳು ಹಲವು ಕಾರ್ಯಕ್ರಮ, ಸ್ಪರ್ಧೆಗಳನ್ನು ಹಮ್ಮಿಕೊಳ್ಳುತ್ತವೆ. ಭಾರತ, ಶ್ರೀಲಂಕಾ ಮತ್ತು ಮಲೇಶಿಯಾದಿಂದ ಕೆನಡಾಕ್ಕೆ ವಲಸೆ ಬಂದ ತಮಿಳು ಜನಾಂಗದವರ ಕೊಡುಗೆ, ಸಂಸ್ಕೃತಿ, ಆಚಾರ-ವಿಚಾರ ಕುರಿತು ಇಲ್ಲಿಯ […]

ಮಲ್ಪೆ ಫುಡ್ ಫೆಸ್ಟ್; ಇಂದು (ಜ.14) ಕೊನೆಯ ದಿನ.

ಉಡುಪಿ: ಮಲ್ಪೆ ಕಡಲ ಕಿನಾರೆಯಲ್ಲಿ ಪರಶುರಾಮ ಫ್ರೆಂಡ್ಸ್ ಆಯೋಜಿಸಿದ ಮಲ್ಪೆ ಫುಡ್ ಫೆಸ್ಟ್ ಆಹಾರ ಮೇಳ ಜನವರಿ 11ರಂದು ಪ್ರಾರಂಭಗೊಂಡಿದ್ದು, ಇಂದು (ಜ.14) ಕೊನೆಯ ದಿನವಾಗಿದೆ. ಈ ಆಹಾರೋತ್ಸವದಲ್ಲಿ ಬಾಯಲ್ಲಿ ನೀರೂರಿಸುವ ವೈವಿಧ್ಯಮಯ ಖಾದ್ಯಗಳು ಜನರನ್ನು ಆಕರ್ಷಿಸಿದೆ. ಕಳೆದ ಮೂರು ದಿನಗಳಲ್ಲಿ ಸಹಸ್ತ್ರಾರು ಮಂದಿ ಪ್ರವಾಸಿಗರು ಮಲ್ಪೆ ಫುಡ್ ಫೆಸ್ಟ್ ನಲ್ಲಿ ಪಾಲ್ಗೊಂಡಿದ್ದರು. ಅತ್ಯಂತ ಅದ್ದೂರಿಯಾಗಿ ಈ‌ ಆಹಾರ ಮೇಳವನ್ನು ಆಯೋಜಿಸಲಾಗಿದೆ. ಇಂದಿನ (14-01-2025) ಸಾಂಸ್ಕೃತಿಕ ಕಾರ್ಯಕ್ರಮ: ಇಲ್ಲಿದೆ 50ಕ್ಕೂ ಅಧಿಕ ವೈವಿಧ್ಯಮಯ ಆಹಾರದ ಸ್ಟಾಲ್‌ಗಳು:ಆಹಾರ ಮೇಳದಲ್ಲಿ […]

ಕುಂದಾಪುರ: ಕಾರಿನಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನ; ಐವರು ಆರೋಪಿಗಳ ಬಂಧನ

ಉಡುಪಿ: ಕಾರಿನಲ್ಲಿ ಮಾದಕ ವಸ್ತು ಎಂಡಿಎಂಎ ಪೌಡರ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಸೆನ್ ಪೊಲೀಸರು ಮರವಂತೆ ಬೀಚ್ ಬಳಿ ವಶಕ್ಕೆ ಪಡೆದಿದ್ದಾರೆಬಂಧಿತರನ್ನು ಭಟ್ಕಳ ನಿವಾಸಿಗಳಾದ ಅಬ್ರಾರ್ ಶೇಖ್ (22), ಮೊಹಮ್ಮದ್ ಇಸ್ಮಾಯಿಲ್ ಫರ್ಹಾನ್ (25) , ಮೊಹಮ್ಮದ್ ಜಿಯಾಮ್ ಬೆಳ್ಳಿ (26), ನೌಮನ್ (27) ಮತ್ತು ಹೊನ್ನಾವರ ನಿವಾಸಿ ಸಜ್ಜಾದ್ ಮುಸ್ತಕೀಮ್ ಕೆವಾಕ (21) ಎಂದು ಗುರುತಿಸಲಾಗಿದೆ. ಬಂಧಿತರಿಂದ 78,000 ರೂ. ಮೌಲ್ಯದ 15 ಗ್ರಾಂ 59 ಮಿಲಿ ಗ್ರಾಂ ತೂಕದ ಎಂಡಿಎಂಎ ಪೌಡರ್, […]