ಮಲ್ಪೆ ಕಡಲ ಕಿನಾರೆಯಲ್ಲಿ ಮಲ್ಪೆ ಫುಡ್ ಫೆಸ್ಟ್ ಉದ್ಘಾಟನೆ

ಮಲ್ಪೆ : ಉಡುಪಿ ಜಿಲ್ಲೆ ವಿಶ್ವದಲ್ಲಿ ವಿಶೇಷ ಸ್ಥಾನಮಾನ ಗಳಿಸಿದ್ದು ಇಂದು ದೇಶದ ಎಲ್ಲ ಕಡೆಯಿಂದ ಜನರು ಉಡುಪಿಗೆ ಬರುತ್ತಿದ್ದಾರೆ. ಇಲ್ಲಿನ ಪರಶುರಾಮ ಫ್ರೆಂಡ್ಸ್ ಆಹಾರಮೇಳ ಆಯೋಜಿಸಿ ಕರಾವಳಿಯ ಖಾದ್ಯವನ್ನು ಉಣಬಡಿಸಿ ಪ್ರವಾಸಿಗರನ್ನು ಜಿಲ್ಲೆಗೆ ಆಕರ್ಷಿಸುವ ಕೆಲಸ ಮಾಡಿದ್ದಾರೆ ಎಂದು ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು. ಅವರು ಮಲ್ಪೆ ಬೀಚ್‌ನಲ್ಲಿ ಪರಶುರಾಮ ಫ್ರೆಂಡ್ಸ್ ವತಿಯಿಂದ ಜ. 11ರಿಂದ14ರ ವರೆಗೆ ನಡೆಯುವ ‘ಮಲ್ಪೆ ಫುಡ್ ಫೆಸ್ಟ್’ ಎಂಬ ಆಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ […]
ಕೋಟ ಮೂರ್ತೆದಾರರ ಸೇವಾ ಸಹಕಾರಿ ಸಂಘ: ಕೇಂದ್ರ ಕಚೇರಿಯ ಸ್ವಂತ ಕಟ್ಟಡ ಉದ್ಘಾಟನೆ

ಕುಂದಾಪುರ: ಬಡಜನರು ತಮ್ಮ ಬದುಕನ್ನು ಕಟ್ಟಿಕೊಳ್ಳಲು ಪೂರಕವಾಗಿ ನಮ್ಮ ಪೂರ್ವಿಕರು ಸಹಕಾರಿ ಸಂಸ್ಥೆಯನ್ನು ಆರಂಭಿಸಿದ್ದು, ಈಗ ಅದು ಬೆಳೆದು ನಿಂತು ಜನರ ಜೀವನದ ಒಂದು ಅಂಗವಾಗಿದೆ. ಅಲ್ಲದೆ ಆರ್ಥಿಕವಾಗಿ ಸುದೃಢವಾಗಿ ನಿಂತಿದೆ ಎಂದು ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿದರು. ಸಂಘದ ಕಟ್ಟಡಕ್ಕೆ ಬ್ಯಾಂಕ್ ವತಿಯಿಂದ 10 ಲಕ್ಷ ರೂ. ಅನುದಾನ: ಕೇಂದ್ರ ಕಚೇರಿ ಉದ್ಘಾಟಿಸಿದ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎನ್.ಎಂ. ರಾಜೇಂದ್ರ ಕುಮಾರ್ ಮಾತನಾಡಿ, ಸಂಸ್ಕೃತಿ, ಸಂಸ್ಕಾರ ತಿಳಿದ ಊರಿನ ಜನರಿಂದಲೇ ನಡೆಸಲ್ಪಡುವ ಸಹಕಾರಿ […]
ಕಾರ್ಕಳ: ಜ.15 ರಂದು ಉಚಿತ ಶ್ರವಣ ಶಕ್ತಿ ತಪಾಸಣೆ ಶಿಬಿರ

ಕಾರ್ಕಳ: ಕಾರ್ಕಳ ಖಾಸಗಿ ಬಸ್ ನಿಲ್ದಾಣದ ಸಮೀಪ ಮುಖ್ಯರಸ್ತೆಗೆ ತಾಗಿ ಮಣ್ಣಗೋಪುರದ ಎದುರಿನ ಸವರಿನ್ ಬಿಲ್ಡಿಂಗ್‌ನ ಮೊದಲ ಮಹಡಿಯಲ್ಲಿ ಪ್ರಥಮ ಬಾರಿಗೆ ಶ್ರವಣ ಸಾಧನಗಳ ಕೇಂದ್ರ ಆರಂಭ ಪ್ರಯುಕ್ತ ಉಚಿತ ಶ್ರವಣ ಶಕ್ತಿ ತಪಾಸಣೆ ಶಿಬಿರ ಜ.15ರ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಇದ್ದು ಕಿವಿ ಕೇಳಿಸದ ಸಮಸ್ಯೆ ಇದ್ದವರಿಗೆ ಇಲ್ಲಿ ಉಚಿತ ಸಂದರ್ಶನ ಹಾಗೂ ಉಚಿತ ಶ್ರವಣ ಶಕ್ತಿ ಪರೀಕ್ಷೆಯಾದ ಆಡಿಯೋ ಮೆಟ್ರಿ ಮಾಡಲಾಗುವುದು. ಸೂಕ್ತ ಉಚಿತ ಸಲಹೆ ನೀಡಲಾಗುವುದು. ಈ ಶ್ರವಣ ಸಾಧನ ಕೇಂದ್ರವು […]
ಮಂಗಳೂರು: ಯುವಕ ನಾಪತ್ತೆ

ಮಂಗಳೂರು: ನಗರದ ಬಜಾಲ್ ಗ್ರಾಮದ ಕುತ್ತಡ್ಕ ಎಂಬಲ್ಲಿನ ನಾರಾಯಣ ರೈ ಎಂಬವರ ಮಗ ಚರಣ್ ರಾಜ್ (22) ಎಂಬಾತ ಕಳೆದ ವರ್ಷದ ಡಿಸೆಂಬರ್ 1ರಿಂದ ಕಾಣೆಯಾದ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬ್ಯಾಂಕ್ ವೊಂದರಲ್ಲಿ ಕ್ರೆಡಿಟ್ ಕೆಲಸ ಮಾಡಿಕೊಂಡಿದ್ದ ಚರಣ್‌ರಾಜ್ ಬಳಿಕ ಕೆಲಸ ಬಿಟ್ಟು ಮನೆಯಲ್ಲೇ ಇದ್ದು, ಡಿಸೆಂಬರ್ 1ರ ಬೆಳಗ್ಗೆ 9 ಗಂಟೆಗೆ ಮನೆಯಿಂದ ಹೊರಗೆ ಹೋದಾತ ಮತ್ತೆ ಮರಳಿ ಬಂದಿಲ್ಲ. ಆ ದಿನ ರಾತ್ರಿ ಮನೆಗೆ ಬರುವುದಾಗಿ ಹೇಳಿದರೂ ಬಾರದಿದ್ದಾಗ ಫೋನ್ […]