ಜ.14 ರಂದು ಶಿರಿಯಾರ ಪ್ರಭಾಕರ ನಾಯಕ್ ರವರ ಬ್ರಹ್ಮಾವರ ಶಾಖಾ ನೋಟರಿ ಕಛೇರಿ ಆರಂಭ

ಉಡುಪಿ:ಉಡುಪಿ ಹಿರಿಯ ನ್ಯಾಯವಾದಿ ಮತ್ತು ನೋಟರಿ ಶಿರಿಯಾರ ಪ್ರಭಾಕರ ನಾಯಕ್ ರವರ ಬ್ರಹ್ಮಾವರ ಶಾಖಾ ನೋಟರಿ ಕಛೇರಿಯು ಜ.14 ರ ಮಂಗಳವಾರ ಮಕರ ಸಂಕ್ರಾಂತಿ ಯಂದು ಬೆಳಿಗ್ಗೆ ರಾ.ಹೆ 66, ಆಕಾಶವಾಣಿ, ನ್ಯಾಯಲಯದ ಹತ್ತಿರ ಬ್ರಹ್ಮಾವರದಲ್ಲಿ ಆರಂಭಗೊಳ್ಳಲಿದೆ.
ಉಡುಪಿ: ಜ.26ರಂದು “ಗುರುವಂದನಾ ಕಾರ್ಯಕ್ರಮ”

ಉಡುಪಿ: ಉಡುಪಿ ಗುಂಡಿಬೈಲು ಹಿರಿಯ ಪ್ರಾಥಮಿಕ ಶಾಲಾ ಹಳೆ ವಿದ್ಯಾರ್ಥಿಗಳ ಗುರುವಂದನಾ ಸಮಿತಿಯ ವತಿಯಿಂದ “ಗುರುವಂದನಾ ಕಾರ್ಯಕ್ರಮ” ಜ. 26ರಂದು ದೊಡ್ಡಣಗುಡ್ಡೆಯ ಸರಕಾರಿ ಆಟದ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನವೀನ್ ರಾವ್ ತಿಳಿಸಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ 4 ರಿಂದ 5 ರವರೆಗೆ ಹಳೆ ವಿದ್ಯಾರ್ಥಿ ಹಾಗೂ ಗುರುಗಳ ಕುಶಲೋಪರಿ ಮಾತುಕತೆ ನಡೆಯಲಿದೆ. ಸಂಜೆ 6 ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, 27 ನಿವೃತ್ತ ಶಿಕ್ಷಕರಿಗೆ […]
ಶಂಕರನಾರಾಯಣ:ಟಿಪ್ಪರ್ ಲಾರಿ ಢಿಕ್ಕಿ; ಬೈಕ್ ಸವಾರ ಮೃತ್ಯು, ಸಹಸವಾರ ಗಂಭೀರ

ಶಂಕರನಾರಾಯಣ: ಅಕ್ರಮ ಮರಳು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ಬೈಕ್ ನಿಲ್ಲಿಸಿ ಮಾತನಾಡುತಿದ್ದ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಬೆಳ್ವೆ ಗ್ರಾಮದ ಕಾರಿಕೊಡ್ಲು ಕ್ರಾಸ್ ಬಳಿ ಜ.11ರಂದು ಸಂಜೆ ವೇಳೆ ನಡೆದಿದೆ. ಮೃತರನ್ನು ನಾಲ್ಕೂರು ಗ್ರಾಮದ ಅರೇಕಲ್ಲು ನಿವಾಸಿ, ಬೈಕ್ ಸವಾರ ಉದಯ ಎಂದು ಗುರುತಿಸಲಾಗಿದೆ. ಸಹಸವಾರ ಕೃಷ್ಣ ಎಂಬವರು ಗಂಭೀರ ವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೋಳಿಯಂಗಡಿ ಕಡೆಯಿಂದ ಕಾಡಿಕೊಡ್ಲು ಕಡೆಗೆ ಹೋಗುತ್ತಿದ್ದ ಟಿಪ್ಪರ್ […]
ಮಣಿಪಾಲ: ಟೂರಿಸ್ಟ್ ವಾಹನ ಚಾಲಕ ನೇಣು ಬಿಗಿದು ಆತ್ಮಹತ್ಯೆ

ಮಣಿಪಾಲ:ವಿಪರೀತ ಮದ್ಯಪಾನದ ಚಟ ಹೊಂದಿದ್ದ ಟೂರಿಸ್ಟ್ ವಾಹನ ಚಾಲಕ ಸಂತೋಷ ಆರ್.ಕೆ.(43) ಎಂಬವರು ವೈಯಕ್ತಿಕ ಕಾರಣದಿಂದ ಮನನೊಂದು ಜ.10ರಂದು ರಾತ್ರಿ ಪರ್ಕಳ ಅಚ್ಚುತ ನಗರ ದಲ್ಲಿರುವ ಟೂರಿಸ್ಟ್ ವಾಹನಗಳನ್ನು ಇಡುವ ಶೆಡ್ಡಿನ ಕಬ್ಬಿಣದ ರಾಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಟ ಮೂರ್ತೆದಾರರ ಸೇವಾ ಸಹಕಾರಿ ಸಂಘ, ಕೇಂದ್ರ ಕಚೇರಿಯ ಸ್ವಂತ ಕಟ್ಟಡ ಉದ್ಘಾಟನೆ.

ಕುಂದಾಪುರ: ಶೋಷಣೆಯ ವಿರುದ್ಧ ಹಾಗೂ ಜನಪರ ಕಾಳಜಿಗೆ ಹೋರಾಟ ಮೂಲಕ ಉತ್ತರ ಸಿಗಲು ಸಾಧ್ಯ. ಮೂರ್ತೆದಾರರ ಸಂಘಗಳ ಸಭೆಯನ್ನು ಆದಷ್ಟು ಶೀಘ್ರದಲ್ಲೇ ಬೆಂಗಳೂರಿನಲ್ಲಿ ಸಭೆ ಕರೆದು ಏಳು ಬಿಳಿನ ಕುರಿತು ಚರ್ಚೆ ನಡೆಸಲಾಗುವುದು ಎಂದು ರಾಜ್ಯ ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಕೋಟದ ಮೂರ್ತೆದಾರರ ಸಹಕಾರಿ ಸಂಘದ 34ನೇ ವರ್ಷಾಚರಣೆ ಹಾಗೂ ಸಂಘದ ಕೇಂದ್ರ ಕಛೇರಿಯ ಕಟ್ಟಡ ಲೋಕಾರ್ಪಣೆ, ದಿ.ಬಂಗಾರಪ್ಪ ಸಭಾಭವನವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು. ಯುವ ಸಮುದಾಯ ಈ ಸಮಾಜದ ಆಸ್ತಿ. ಸ್ಪರ್ಧಾತ್ಮಕ ಜಗತ್ತಿನಲ್ಲಿ […]