ಉಡುಪಿ: ಉಚಿತ ತೆಂಕುತಿಟ್ಟು ಯಕ್ಷಗಾನ ನಾಟ್ಯ ತರಬೇತಿಯ 2025ರ ಹೊಸ ತರಗತಿ(ಬ್ಯಾಚ್) ಆರಂಭ.
ಉಡುಪಿ, ಜ.12: ಪಣಂಬೂರು ವೆಂಕಟ್ರಾಯ ಐತಾಳ ಸಾಂಸ್ಕೃತಿಕ ಪ್ರತಿಷ್ಠಾನ, ಉಡುಪಿ ಇವರ ವತಿಯಿಂದ ನಡೆಯುತ್ತಿರುವ ತೆಂಕುತಿಟ್ಟು ಯಕ್ಷಗಾನ ನಾಟ್ಯ (ಹೆಜ್ಜೆಗಾರಿಕೆ) ತರಬೇತಿ ಕಾರ್ಯಕ್ರಮದ ಹೊಸ ತರಗತಿ ಆರಂಭಗೊಂಡಿದೆ. ಕಳೆದ 8 ವರ್ಷಗಳಿಂದ ಉಡುಪಿಯ ಸೋದೆ ಮಠದಲ್ಲಿ ಸಮರ್ಥ ಯಕ್ಷಗುರು ಶ್ರೀ ರಾಕೇಶ್ ರೈ ಅಡ್ಕ ಇವರ ಮೂಲಕ ಸುಮಾರು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದೆ. ತರಬೇತಿ ಉಚಿತವಾಗಿದ್ದು, ಪ್ರತೀ ಬುಧವಾರ ಸಂಜೆ ಗಂಟೆ 5.30ರಿಂದ 6.30ರವರೆಗೆ ನಡೆಯಲಿರುವುದು. ಪ್ರತಿಷ್ಠಾನದ ಈ ಸತ್ಕಾರ್ಯಕ್ಕೆ ಸೋದೆ ಮಠದ […]
ಮೂಡಲಕಟ್ಟೆ ವಿದ್ಯಾ ಅಕಾಡೆಮಿಗೆ ಪ್ರತಿಷ್ಠಿತ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ
ಕುಂದಾಪುರ: ಮೂಡಲಕಟ್ಟೆಯ ವಿದ್ಯಾ ಅಕಾಡೆಮಿ ಪ್ರಾಥಮಿಕ ಶಾಲೆ ಪ್ರೀ-ಸ್ಕೂಲ್ ಕ್ಷೇತ್ರದಲ್ಲಿ ನೀಡಿದ ಸಶಕ್ತ ಕೊಡುಗೆಯನ್ನು ಮೆಚ್ಚಿ ‘ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ’ಗೆ ಭಾಜನವಾಗಿದೆ. ಈ ಪ್ರಶಸ್ತಿಯನ್ನು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಶಾಲೆಯ ಪ್ರೀ-ಸ್ಕೂಲ್ ಸಂಯೋಜಕಿ ಶ್ರೀಮತಿ ರಷ್ಮಾ ಶೆಟ್ಟಿ ಮತ್ತು ಶಾಲೆಯ ಆಡಳಿತಾಧಿಕಾರಿ ಶ್ರೀಮತಿ ಪಾವನಾ ಮಹೇಶ್ ಸ್ವೀಕರಿಸಿದರು. ಶಾಲೆಯ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಒತ್ತು ನೀಡುವ ಹೊಸ ಪ್ರಯತ್ನಗಳು ಮತ್ತು ಅವರ ಭವಿಷ್ಯವನ್ನು ರೂಪಿಸಲು ಕೈಗೊಂಡ ಸೃಜನಾತ್ಮಕ ಮಾರ್ಗಗಳು ವಿದ್ಯಾ ಅಕಾಡೆಮಿಯನ್ನು […]