ಅಧ್ಯಕ್ಷ ಹುದ್ದೆ ಕೇಳಿಲ್ಲ, ಕೊಟ್ಟರೆ ತಗೊಳ್ತೇನೆ ಎಂದಿದ್ದೇನೆ
ಉಡುಪಿ: ನಾನು ಕೆಪಿಸಿಸಿ ಅಧ್ಯಕ್ಷ ಹುದ್ದೆ ಬೇಕು ಅಂತ ಕೇಳಿಲ್ಲ. ಕೊಟ್ಟರೆ ತಗೊಳ್ತೇನೆ ಎಂದು ಹೇಳಿದ್ದೇನೆ. ನನಗೆ ಅಧ್ಯಕ್ಷಗಿರಿ ಕೊಡ್ತೇನೆ ಅಂದ್ರೆ ಆಗಲಿಕ್ಕೆ ಸಿದ್ದ ಇದ್ದೇನೆ. ಮಂತ್ರಿ ಕೆಲಸ ಬಿಡಲು ಸಿದ್ದ ಇದ್ದೇನೆ. ಎಲ್ಲೂ ಅರ್ಜಿ ಹಾಕೊಂಡು ಕೇಳುವ ಪ್ರಮೇಯ ಇಲ್ಲ ಎಂದು ಸಹಕಾರಿ ಸಚಿವ ಕೆ ಎನ್ ರಾಜಣ್ಣ ಹೇಳಿದರು.ಕೆಪಿಸಿಸಿ ಹುದ್ದೆ ಆಕಾಂಕ್ಷಿ ವಿಚಾರದ ಕುರಿತು ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದರು. ನಾನಿದ್ದೇನೆ ನನ್ನ ಪಕ್ಷ ಇದೆ ಹೈಕಮಾಂಡ್ ಇದೆ ..ಯಾರೂ ಮಾತನಾಡುವ ಅಗತ್ಯ ಇಲ್ಲ […]
ಉಡುಪಿ – ಬ್ರಹ್ಮಾವರದ ಹೆಸರಾಂತ ಐಟಿ ಸರ್ವಿಸ್ ಮತ್ತು ಕನ್ಸ್ಟ್ರಕ್ಷನ್ ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ಬೇಕಾಗಿದ್ದಾರೆ.
ಉಡುಪಿ: ಉಡುಪಿ – ಬ್ರಹ್ಮಾವರದ ಹೆಸರಾಂತ ಐಟಿ ಸರ್ವಿಸ್ ಮತ್ತು ಕನ್ಸ್ಟ್ರಕ್ಷನ್ ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: ◾ಸಾಫ್ಟ್ ವೇರ್ ಡೆವಲಪರ್ ◾ಡಾಟಾ ಎಂಟ್ರಿ ಆಪರೇಟರ್ ◾ಸೈಟ್ ಸೂಪರ್ವೈಸರ್ ◾ಅಕೌಂಟ್ಸ್ ಎಕ್ಸಿಕ್ಯೂಟಿವ್ ◼ ರಿಸೆಪ್ಷನಿಷ್ಟ್ ◼ ಎಲೆಕ್ಟ್ರಿಷಿಯನ್(Maintenance) ◼ಸೆಕ್ಯುರಿಟಿ ಗಾರ್ಡ್ ಅತ್ಯುತ್ತಮ ವೇತನದೊಂದಿಗೆ PF ESI ಸೌಲಭ್ಯವಿದೆ. ಮಾಹಿತಿಗಾಗಿ ಕರೆ ಮಾಡಿ:7019891796, 9606968198
ವಿಡ್ವಾರ್ಸ್ ಬಾಯ್ಸ್ ಮಂಗಳೂರು ತಂಡಕ್ಕೆ ಟ್ರೋಫಿ.
ಉಡುಪಿ: ಇತ್ತೀಚೆಗೆ ದುಬೈಯ ಅಬು-ಹೈಲ್ ಮೈದಾನದಲ್ಲಿ ಜರಗಿದ ಯು.ಎ.ಇಯ ಪ್ರತಿಷ್ಠಿತ ನ್ಯೂ ಇಯರ್ ಕ್ರಿಕೆಟ್ ಪಂದ್ಯಾಕೂಟದಲ್ಲಿ ದುಬೈನ ವಿಡ್ವಾರ್ಸ್ ಬಾಯ್ಸ್ ಮಂಗಳೂರು ಕ್ರಿಕೆಟ್ ತಂಡವು ಚತುರ್ಥ ಸ್ಥಾನ ಪಡೆಯಿತು. ಬಹುತೇಕ ಉಡುಪಿ ಮಂಗಳೂರು ಕುಂದಾಪುರದ ಆಟಗಾರರನ್ನೇ ಹೊಂದಿದ್ದ ವಿದ್ಯಾನಂದ ಶೆಟ್ಟಿ ಹಾಗೂ ಪ್ರವೀಣ್ ಶೆಟ್ಟಿ ಒಡೆತನದ ವಿಡ್ವಾರ್ಸ ಬಾಯ್ಸ್ ಮಂಗಳೂರು ತಂಡವು ತೀವ್ರ ಜಿದ್ದಾಜಿದ್ದಿನ ಹೋರಾಟದಲ್ಲಿ ಕೂದಲೆಳೆ ಅಂತರದಲ್ಲಿ ಫೈನಲ್ಸ್ ತಲುಪುವ ಅವಕಾಶದಿಂದ ವಂಚಿತವಾಗಿ ಚತುರ್ಥ ಸ್ಥಾನ ಪಡೆದು ಮಿನುಗುವ ಟ್ರೋಫಿ ಗಳಿಸಿ ಸಂಘಟಕರ ವಿಶೇಷ ಪ್ರಶಂಸೆಗೆ […]
ಕುಂದಾಪುರದ ಸಮೃದ್ಧಿ ಎಂಟರ್ ಪ್ರೈಸಸ್ ನಲ್ಲಿದೆ ಗ್ರಾಹಕರಿಗೆ ಸೂಪರ್ ಆಫರ್ ಲಕ್ಕಿ ಸ್ಕೀಮ್ ಆರಂಭ: ಸಮೃದ್ಧಿಯಿಂದ ನಿಮ್ಮ ಮನೆಯಾಗುತ್ತದೆ ಸಮೃದ್ಧ..!
ಕುಂದಾಪುರ: ನಿಮ್ಮ ಮನೆ, ಮನ, ಜೀವನ ಸಮೃದ್ಧಿಯಿಂದ ತುಂಬಿ ತುಳುಕಬೇಕಾದರೆ ಕುಂದಾಪುರದಲ್ಲಿರುವ ಸಮೃದ್ಧಿ ಎಂಟರ್ ಪ್ರೈಸಸ್ ಗೆ ನೀವು ಖಂಡಿತವಾಗಿ ಭೇಟಿ ನೀಡಲೇಬೇಕು. ನಿಮ್ಮ ಮನೆಯನ್ನು ಅಲಂಕರಿಸಬಹುದಾದ ಎಲ್ಲಾ ರೀತಿಯ ಫರ್ನೀಚರ್ ಗಳು, ಎಲೆಕ್ಟ್ರಾನಿಕ್ ಐಟಮ್ ಗಳು, ಅಲಂಕಾರಿಕ ವಸ್ತುಗಳು ಎಲ್ಲವೂ ಕಡಿಮೆ ಬೆಲೆಯಲ್ಲಿ ದೊರೆಯುವ ಸಮೃದ್ಧಿ ಎಂಟರ್ ಪ್ರೈಸಸ್ ಕಡೆಯಿಂದ ಇದೀಗ ಗ್ರಾಹಕರಿಗೆ ಹೊಸ ಲಕ್ಕಿ ಸ್ಕೀಮ್ ಆಫರ್ ಪ್ರಾರಂಭವಾಗಲಿದೆ. ಸಮೃದ್ಧಿ ಎಂಟರ್ ಪ್ರೈಸಸ್’ನಲ್ಲಿ ಪ್ರತಿ ತಿಂಗಳು ಡ್ರಾ ಆಗುವ ಆಫರ್ಗಳು ಹೀಗಿದೆ:1 ನೇ ತಿಂಗಳು: […]
ಮಾಂಬಾಡಿಯವರಿಗೆ ಪಾರ್ಥಿಸುಬ್ಬ ಪ್ರಶಸ್ತಿ ಲಭಿಸಿರುವುದು ಯಕ್ಷಗಾನದ ಹಿರಿಮೆಯನ್ನು ಹೆಚ್ಚಿಸಿದೆ: ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು
ಉಡುಪಿ: ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಅನೇಕ ಪ್ರಸಿದ್ಧ ಭಾಗವತರ ಗುರುಗಳಾಗಿರುವ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರು ಲವಲವಿಕೆಯಿಂದ ಭಾಗವತಿಕೆಯ ಮೂಲ ಪಾಠವನ್ನು ಮಾಡುತ್ತಾ ಗಾನಾಮೃತದ ಮೂಲ ಸತ್ವವನ್ನು ವಿವರಿಸುತ್ತಾ ಪ್ರಸಿದ್ದಿ ಪಡೆದ ಭಾಗವತರು. ೭೫ರ ಇಳೀ ವಯಸ್ಸಿನಲ್ಲಿಯೂ ಅವರ ಪಾಠವನ್ನು ಮುಂದುವರಿಸಿರುವುದು ಶ್ಲಾಘನೀಯ. ಅವರ ಈ ಕಲಾಸಾಧನೆಗೆ ಕರ್ನಾಟಕ ಯಕ್ಷಗಾನ ಅಕಾಡೆಮಿ ೨೦೨೪ನೇ ಸಾಲಿನ ಪ್ರತಿಷ್ಠಿತ ` ಪಾರ್ಥಿಸುಬ್ಬ ಪ್ರಶಸ್ತಿ’ ನೀಡುತ್ತಿರುವುದು ಯಕ್ಷಗಾನ ಕಲೆಯ ಹಿರಿಮೆಯನ್ನು ಎತ್ತಿ ಹಿಡಿದಿದೆ ಎಂದು ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ […]