ಎನ್ ಕೌಂಟರ್, ನಕ್ಸಲರ ಶರಣಾಗತಿ ಪ್ರಕ್ರಿಯೆಯಲ್ಲಿ ಸಂಶಯವಿದೆ
ಉಡುಪಿ: ಎನ್ ಕೌಂಟರ್ ನಲ್ಲಿ ಆರಂಭಗೊಂಡು ಬಳಿಕ ನಡೆದ ನಕ್ಸಲರ ಶರಣಾಗತಿ ಪ್ರಕ್ರಿಯೆಯಲ್ಲಿ ಅನುಮಾನ ಮೂಡುತ್ತಿದೆ. ಸಿಎಂ ಮುಂದೆ ನಕ್ಸಲರ ಶರಣಾಗತಿ ಮಾಡುವ ಅಗತ್ಯವಿರಲಿಲ್ಲ ಎಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಹೇಳಿದರು. ಆರು ಮಂದಿ ನಕ್ಸಲರ ಶರಣಾಗತಿ ವಿಚಾರಕ್ಕೆ ಸಂಬಂಧಿಸಿ ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿ, ಎಸ್ಪಿ ಅವರ ಸಮ್ಮುಖದಲ್ಲಿ ಕೆಲವು ಪ್ರಕ್ರಿಯೆಗಳ ಮೂಲಕ ಶರಣಾಗತಿ ನಡೆಸಬೇಕಿತ್ತು. ಮೊದಲು ನಕ್ಸಲರು ಶರಣಾಗತಿಯಾಗಿ, ಬಳಿಕ ಕೋರ್ಟ್ ಗೆ ಹೋಗಬೇಕು. ಅವರ ಮೇಲಿರುವ ಎಫ್ […]
ಉಡುಪಿ- ಮಂಗಳೂರಿನ ಪ್ರಸಿದ್ಧ ಗ್ರೂಪ್ ಆಫ್ ಇಂಡಸ್ಟ್ರಿಯಲ್ಲಿ ವಿವಿಧ ಹುದ್ದೆಗಳಿಗೆ ಬೇಕಾಗಿದ್ದಾರೆ
ಉಡುಪಿ:ಉಡುಪಿ ಹಾಗೂ ಮಂಗಳೂರಿನ ಪ್ರಸಿದ್ಧ ಗ್ರೂಪ್ ಆಫ್ ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: ಆಕರ್ಷಕ ವೇತನ ಸೌಲಭ್ಯವಿದೆ.ಮಾಹಿತಿಗಾಗಿ ಕರೆ ಮಾಡಿ:7975861846, 7019791796
ಕುಂದಾಪುರ: ವಿಷದ ಹಾವು ಕಚ್ಚಿ ಮಹಿಳೆ ಮೃತ್ಯು.
ಶಂಕರನಾರಾಯಣ: ವಿಷದ ಹಾವು ಕಚ್ಚಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಆಜ್ರಿ ಗ್ರಾಮದ ಹನಬಚ್ಚಲು ಎಂಬಲ್ಲಿ ನಡೆದಿದೆ. ಮೃತರನ್ನು ಹನಬಚ್ಚಲು ನಿವಾಸಿ ಗೌರಿ(72) ಎಂದು ಗುರುತಿಸಲಾಗಿದೆ. ಇವರು ಜ.6ರಂದು ಬೆಳಗ್ಗೆ ಕೃಷಿ ಕೆಲಸದ ಬಗ್ಗೆ ತೋಟದಲ್ಲಿ ಹುಲ್ಲನ್ನು ತೆಗೆಯುತ್ತಿರುವಾಗ ವಿಷದ ಹಾವು ಕಚ್ಚಿತ್ತೆನ್ನಲಾಗಿದೆ. ಇದರಿಂದ ತೀವ್ರ ಅಸ್ವಸ್ಥ ಗೊಂಡಿದ್ದ ಅವರು, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜ.8ರಂದು ಸಂಜೆ ವೇಳೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶರಣಾದ ನಕ್ಸಲರು ಬಳಸುತ್ತಿದ್ದ AK 56 ಗನ್ ಸೇರಿದಂತೆ 6 ಶಸ್ತ್ರಾಸ್ತ್ರಗಳು ಪತ್ತೆ
ಚಿಕ್ಕಮಗಳೂರು: ಶರಣಾದ ಆರು ಮಂದಿ ನಕ್ಸಲರು ಬಳಸುತ್ತಿದ್ದ AK 56 ಗನ್, ರಿವಾಲ್ವಾರ್, ಬಂದೂಕು ಸೇರಿದಂತೆ 6 ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದು, ಚಿಕ್ಕಮಗಳೂರು ಪೊಲೀಸರು ಜಪ್ತಿ ಮಾಡಿದ್ದಾರೆ. ಕೊಪ್ಪ ತಾಲೂಕಿನ ಮೇಗೂರು ಅರಣ್ಯದಲ್ಲಿ AK 56 ಗನ್, ರಿವಾಲ್ವಾರ್, ಬಂದೂಕು ಸೇರಿದಂತೆ 6 ಶಸ್ತ್ರಾಸ್ತ್ರಗಳನ್ನು ನಕ್ಸಲರು ಹೂತು ಇಟ್ಟಿದ್ದರು. ನಕ್ಸಲರು ಶರಣಾಗುವ ದಿನ ಮೇಗೂರು ಅರಣ್ಯದಲ್ಲೇ ಕೊನೆಯಬಾರಿಗೆ ಸಭೆ ನಡೆಸಿ, ಬಳಿಕ ಸಿಎಂ ಸಿದ್ದರಾಮಯ್ಯ ಮುಂದೆ ಶರಣಾಗಿದ್ದರು ಎನ್ನಲಾಗಿದೆ. ಶರಣಾಗತಿ ವೇಳೆ ಶಸ್ತ್ರಾಸ್ತ್ರ ಹಸ್ತಾಂತರ ಬಗ್ಗೆ ಚರ್ಚೆಯಾಗಿತ್ತು. ಈ […]
ಮಂಗಳೂರು: ಅಸೌಖ್ಯದಿಂದ ಬಾಣಂತಿ ಮೃತ್ಯು.
ಕಡಬ: ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಎರಡು ತಿಂಗಳ ಬಾಣಂತಿ ಅಸೌಖ್ಯದಿಂದ ಸಾವನ್ನಪ್ಪಿದ ಘಟನೆ ಶುಕ್ರವಾರ ಸಂಭವಿಸಿದೆ. ಮೃತರು ಕಡಬ ತಾಲೂಕು ಆಲಂಕಾರು ಗ್ರಾಮದ ದಯಾನಂದ ಗೌಡರ ಪತ್ನಿ ಪುಷ್ಪಾವತಿ (34). ಅವರು ಎರಡು ತಿಂಗಳ ಹಿಂದೆ ನಾಲ್ಕನೇ ಹೆರಿಗೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.ತಾಯಿ ಮಗು ಆರೋಗ್ಯವಾಗಿದ್ದು ಆಸ್ಪತ್ರೆಯಿಂದ ಮನೆಗೆ ತೆರಳಿದ್ದರು. ಕೆಲವು ದಿನಗಳ ಹಿಂದೆ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾಗಿ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ […]