ಮಲ್ಪೆ ಆಹಾರಮೇಳದಲ್ಲಿದೆ ಬಾಯಲ್ಲಿ ನೀರೂರಿಸುವ ಖಾದ್ಯ ವೈವಿದ್ಯ: ಇಂದಿನಿಂದ ಉಡುಪಿಯಲ್ಲಿ ಆಹಾರಮೇಳ ಆಹಾರ ಪ್ರಿಯರೇ ಮಿಸ್ ಮಾಡ್ಕೊಬೇಡಿ!
ಮಲ್ಪೆ : ಇಂದಿನಿಂದ ಉಡುಪಿಯಲ್ಲಿ ಖಾದ್ಯಪ್ರಿಯರ ಆಹಾರದ ಆಸೆಯನ್ನು ಈಡೇರಿಸಲು ಮಲ್ಪೆ ಆಹಾರಮೇಳ ಶುರುವಾಗಿದೆ. ಇಲ್ಲಿನ ಪರಶುರಾಮ ಫ್ರೆಂಡ್ಸ್ ವತಿಯಿಂದ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಜ.11ರಿಂದ 14ರವರೆಗೆ 4 ದಿನಗಳ ಕಾಲ ಮಲ್ಪೆ ಫುಡ್ ಫೆಸ್ಟ್ ಎಂಬ ಆಹಾರ ಮೇಳ ನಡೆಯಲಿದ್ದು ವಿವಿಧ ಅಹಾರ ಮೇಳಗಳ ಸ್ಟಾಲ್‌ಗಳು, ಸಾಂಸ್ಕೃತಿಕ ವೇದಿಕೆಗಳು ಜಿಲ್ಲೆಯ ಜನರನ್ನು ಸೆಳೆಯುವಂತೆ ಆಯೋಜನೆಗೊಂಡಿದೆ. ಬೃಹದಾಕರಾದ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ರಂಗೇಳಲಿವೆ. ಇಂದು ಸಂಜೆ ಸ್ಥಳೀಯ 5 ಭಜನಾ ಮಂದಿರಗಳ ಅಧ್ಯಕ್ಷರು ಹಾಗೂ ಮಲ್ಪೆ ಅಯ್ಯಪ್ಪಸ್ವಾಮಿ […]
ಉಡುಪಿ-ಮಂಗಳೂರಿನಲ್ಲಿರುವ USA ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ
ಉಡುಪಿ:ಉಡುಪಿ-ಮಂಗಳೂರಿನಲ್ಲಿರುವ USA ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಲಭ್ಯವಿರುವ ಸ್ಥಾನಗಳು:◾ ಲೆಕ್ಕಪರಿಶೋಧಕ ◾ಕಚೇರಿ ಕೆಲಸ / ಬಿಲ್ಲಿಂಗ್ ◾ ತಂತ್ರಜ್ಞ◾ ಸಹಾಯಕ ◾ಟೆಲಿಕಾಲರ್◾ಮೆಷಿನ್ ಆಪರೇಟರ್◾ಮೇಲ್ವಿಚಾರಕ ◾ಮಾರಾಟ / ಮಾರ್ಕೆಟಿಂಗ್ ◾ಸಹಾಯಕ ವ್ಯವಸ್ಥಾಪಕ ◾ ದೈನಂದಿನ ಕೆಲಸಗಾರ◾ಗ್ರಾಹಕ ಸೇವೆ ಎಲ್ಲಾ ರೀತಿಯ ವಿದ್ಯಾರ್ಹತೆಗಳಿಗೆ ಅನುಗುಣವಾಗಿ ಅತ್ಯುತ್ತಮ ವೇತನ ಹಾಗೂ PF, ESI ಸೌಲಭ್ಯವನ್ನು ಒದಗಿಸಲಾಗಿದೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:📞94813 47563, 9481347653
ಜ.11 ರಿಂದ 14 ರವರೆಗೆ ಮಲ್ಪೆ ಕಡಲ ಕಿನಾರೆಯಲ್ಲಿ “ಮಲ್ಪೆ ಫುಡ್ ಫೆಸ್ಟ್”
ಮಲ್ಪೆ: ಪರಶುರಾಮ ಫ್ರೆಂಡ್ಸ್ ಮಲ್ಪೆ ಇದರ ಆಶ್ರಯದಲ್ಲಿ “ಮಲ್ಪೆ ಫುಡ್ ಫೆಸ್ಟ್” ಎಂಬ ಆಹಾರೋತ್ಸವ ಕಾರ್ಯಕ್ರಮವನ್ನು ಜ.11 ರಿಂದ 14 ರವರೆಗೆ ಮಲ್ಪೆ ಕಡಲ ಕಿನಾರೆಯಲ್ಲಿ ಆಯೋಜಿಸಲಾಗಿದೆ. ನಾಲ್ಕು ದಿನಗಳ ಕಾಲ ನಡೆಯುವ ಆಹಾರೋತ್ಸವದಲ್ಲಿ ಬಗೆ ಬಗೆ ಖಾದ್ಯಗಳನ್ನು ಸವಿಯಬಹುದು.ಮಲ್ಪೆಯಲ್ಲಿ ಇದೇ ಮೊದಲ ಬಾರಿಗೆ ರಾತ್ರಿ ಲ್ಯಾಟಿನ್ ಫೆಸ್ಟಿವಲ್ (ಲ್ಯಾಟೀನ್ ಹಬ್ಬ) ವನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಸಾವಿರಕ್ಕೂ ಹೆಚ್ಚು ಲ್ಯಾಟಿನ್ಗಳನ್ನು ಆಕಾಶಕ್ಕೆ ಹಾರಿ ಬಿಡಲಾಗುವುದು. ಮಾತ್ರವಲ್ಲದೆ, ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಪ್ರತಿನಿತ್ಯ ಲೈವ್ ಮ್ಯೂಸಿಕ್, ಡ್ಯಾನ್ಸ್, ಸುಡುಮದ್ದು […]
ಸಿಎಂ ಸಿದ್ದರಾಮಯ್ಯ ರಾಜಕೀಯದ ಕೊನೆಗಾಲದಲ್ಲಿ ಮಾವೋವಾದಕ್ಕೆ ವಾಲಿದ್ದಾರೆ
ಉಡುಪಿ: ರಾಜಕೀಯದಲ್ಲಿ ಗಾಂಧಿ ವಾದವನ್ನು ಮುಂದಿಟ್ಟ ಸಿಎಂ ಸಿದ್ದರಾಮಯ್ಯನವರು, ರಾಜಕೀಯದ ಕೊನೆಗಾಲದಲ್ಲಿ ಮಾವೋವಾದಕ್ಕೆ ವಾಲಿದ್ದಾರೆ. ಅವರ ವಿಚಾರ, ಧೋರಣೆಯಿಂದ ಇದು ಸ್ಪಷ್ಟವಾಗುತ್ತದೆ. ರಾಜ್ಯ ಸರ್ಕಾರ ನಗರ ನಕ್ಸಲರ ಕೈ ಗೊಂಬೆಯಂತೆ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ವಿ.ಸುನಿಲ್ ಕುಮಾರ್ ಆರೋಪಿಸಿದರು. ಉಡುಪಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಕ್ಸಲರ ಶರಣಾಗತಿ ಪ್ರತಿದಿನ ಅನುಮಾನ ಹುಟ್ಟಿಸುತ್ತಿದೆ. 15 ದಿನಗಳೊಳಗೆ ಶರಣಾಗತಿ ವೇದಿಕೆಯ ಮೇಲೆ ನಡೆದ ನಾಟಕದಂತಿದೆ ಕಾಣುತ್ತಿದೆ. ಶರಣಾಗತಿ ವೇಳೆ ಶಸ್ತ್ರಾಸ್ತ್ರ ಯಾಕೆ ಇರಲಿಲ್ಲ. ಯಾವ […]
ಸಿಎಂ ಸಿದ್ದರಾಮಯ್ಯ ಸರಕಾರ ನಕ್ಸಲರಿಗೆ ಶರಣಾಗಿದೆ; ಸಂಸದ ಕೋಟ ಲೇವಡಿ
ಉಡುಪಿ: ನಕ್ಸಲರು ಸರಕಾರಕ್ಕೆ ಶರಣಾಗಿದ್ದಲ್ಲ, ಬದಲಾಗಿ ಸರಕಾರವೇ ನಕ್ಸಲರಿಗೆ ಶರಣಾಗಿದೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಲೇವಡಿ ಮಾಡಿದ್ದಾರೆ. ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಶಸ್ತಾಸ್ತ್ರ ತ್ಯಜಿಸಿ ಬರುವ ನಕ್ಸಲರ ಶರಣಾಗತಿಗೆ ನಮ್ಮ ವಿರೋಧ ಇಲ್ಲ. ಆದರೆ ಈ ಸಲ ಅವರು ಶರಣಾದ ರೀತಿಯ ಬಗ್ಗೆ ವಿರೋಧ ಇದೆ. ಸರಕಾರವೇ ಅವರಿಗೆ ಶರಣಾದ ರೀತಿ ವರ್ತಿಸಿದೆ ಎಂದರು. ಈ ಮೊದಲು ಶರಣಾದ ನಕ್ಸಲರಿಗೆ ಯಾವುದೇ ಸೌಲಭ್ಯ ನೀಡಿಲ್ಲ ಎಂದು ಅವರೇ ಹೇಳಿದ್ದಾರೆ. […]