ಕರ್ನಾಟಕ ಯಕ್ಷಗಾನ ಅಕಾಡೆಮಿಯ 2024ನೇ ಸಾಲಿನ ಪ್ರಶಸ್ತಿ ಪ್ರಕಟ
ಉಡುಪಿ: ಕರ್ನಾಟಕ ಯಕ್ಷಗಾನ ಅಕಾಡೆಮಿಯು ಒಬ್ಬರನ್ನು ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ 5 ಜನರನ್ನು ವಾರ್ಷಿಕ ಗೌರವ ಪ್ರಶಸ್ತಿಗೆ ಹಾಗೂ 10 ಜನ ಗಣ್ಯರನ್ನು ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಿದೆ. ತೆಂಕುತಿಟ್ಟು ಯಕ್ಷಗಾನ ಕಲಾವಿದರಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಇವರನ್ನು ಪ್ರತಿಷ್ಠಿತ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ತಿಳಿಸಿದರು. ಉಡುಪಿ ಪತ್ರಿಕಾ ಭವನದಲ್ಲಿ 2024ನೇ ಸಾಲಿನ ಅಕಾಡೆಮಿ ಪ್ರಶಸ್ತಿ ಪುರಸ್ಕೃತರ ಹೆಸರು ಪ್ರಕಟಿಸಿದ ಅವರು, ಪಾರ್ತಿಸುಬ್ಬ […]
ಉಚ್ಚಿಲ: ರಸ್ತೆ ದಾಟುತ್ತಿದ್ದ ಪಾದಚಾರಿಗೆ ಕಾರು ಡಿಕ್ಕಿ; ಸ್ಥಳದಲ್ಲೇ ಸಾವು
ಉಡುಪಿ: ರಸ್ತೆ ದಾಟುತ್ತಿದ್ದ ವೃದ್ಧ ವ್ಯಕ್ತಿಯೊಬ್ಬರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉಚ್ಚಿಲದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕುಂಜೂರು ನಿವಾಸಿ ಶ್ರೀನಿವಾಸ ತೋಣಿತ್ತಾಯ (72)ಎಂದು ಗುರುತಿಸಲಾಗಿದೆ. ಶುಕ್ರವಾರ ಬೆಳಗ್ಗೆ ಉಚ್ಚಿಲ ಪೇಟೆಯ ರಿಕ್ಷಾ ನಿಲ್ದಾಣದ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಕಾರು ಶ್ರೀನಿವಾಸ ತೋಣಿತ್ತಾಯರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಅವರು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಈ ವೇಳೆ ಸ್ಥಳೀಯ ಯುವಕರ ತಂಡ […]
ಶರಣಾದರೆ ನಂಬಿದ ಜನರಿಗೆ ಮೋಸ ಮಾಡಿದಂತೆ
ಉಡುಪಿ: ರಾಜ್ಯದ 6 ಮಂದಿ ಪ್ರಮುಖ ನಕ್ಸಲರು ಬುಧವಾರ ಶರಣಾಗತಿ ಆಗಿದ್ದಾರೆ. ಆದರೆ ಕರ್ನಾಟಕದಲ್ಲಿ ತೀವ್ರಗಾಮಿ ನಕ್ಸಲ್ ಚಟುವಟಿಕೆಯ ನಾಯಕ ಎಂದೆನಿಸಿ ಕೊಂಡಿದ್ದ, ಇತ್ತೀಚೆಗೆ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ ವಿಕ್ರಂ ಗೌಡ ಶರಣಾಗತಿಗೆ ನಿರಾಕರಿಸಿದ್ದ ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ. 2024ರ ನ. 19ರಂದು ನಕ್ಸಲ್ ನಾಯಕ ವಿಕ್ರಂ ಗೌಡನನ್ನು ಹೆಬ್ರಿ ಸಮೀಪದ ಕಾಡಿನಲ್ಲಿ ಎನ್‌ಕೌಂಟರ್ ಮಾಡಲಾಗಿತ್ತು. ಅದಕ್ಕೂ ಒಂದೂವರೆ ತಿಂಗಳ ಹಿಂದೆ ವಿಕ್ರಂ ಗೌಡನಿಗೆ ಶರಣಾಗುವಂತೆ ಕೆಲವು ಸಂಘಟನೆಗಳು ಹಾಗೂ ಸ್ಥಳೀಯರ ಮೂಲಕ ಮನವೊಲಿಸುವ ಪ್ರಯತ್ನವನ್ನು […]
ಅಮೆರಿಕಾದ ಫಿನಿಕ್ಸ್ ನ ಶ್ರೀಪುತ್ತಿಗೆ ಮಠದ ವೆಂಕಟಕೃಷ್ಣ ಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಸಂಭ್ರಮ
ಉಡುಪಿ: ಇಂದು ವೈಕುಂಠ ಏಕಾದಶಿ. ನಾಡಿನಾದ್ಯಂತ ಅತ್ಯಂತ ವೈಭವದಿಂದ ಶ್ರೀನಿವಾಸ ದೇವರ ಆರಾಧನೆ ಮಾಡಲಾಗುತ್ತಿದೆ. ಇದೀಗ ದೇಶ ಮಾತ್ರವಲ್ಲ ವಿದೇಶದಲ್ಲೂ ವೈಕುಂಠ ಏಕಾದಶಿಯ ಕಲರವ ಕೇಳಿ ಬರುತ್ತಿದೆ. ಅಮೆರಿಕಾದ ಫಿನಿಕ್ಸ್ ನಲ್ಲಿರುವ ಶ್ರೀ ಪುತ್ತಿಗೆ ಮಠದ ಶ್ರೀ ವೆಂಕಟಕೃಷ್ಣ ಕ್ಷೇತ್ರದಲ್ಲಿ ವೈಕುಂಠ ಏಕಾದಶಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ಹಬ್ಬದ ಪ್ರಯುಕ್ತ ಶ್ರೀನಿವಾಸ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದೆ.ಪೂಜ್ಯ ಪುತ್ತಿಗೆ ಶ್ರೀಪಾದರು ೨೦೦೦ನೇ ಇಸವಿಯಲ್ಲಿ ದೇಗುಲವನ್ನು ಅರ್ಪಿಸಿದ್ದು ಇದು ಶ್ರೀಪಾದರು ವಿದೇಶದಲ್ಲಿ ಸ್ಥಾಪಿಸಿದ ಮೊದಲ ದೇವಾಲಯವಾಗಿರುತ್ತದೆ. ಕ್ಷೇತ್ರದ ಆಸು […]
ಕೃಷ್ಣನಗರಿ ಉಡುಪಿಯಲ್ಲಿ ಕುಡುಕರ ಹಾವಳಿ; ಸಾರ್ವಜನಿಕರಿಗೆ ನಿತ್ಯ ಕಿರಿಕಿರಿ
ಉಡುಪಿ: ಉಡುಪಿಯ ಬಸ್ ನಿಲ್ದಾಣಗಳಲ್ಲಿ ಹೊರಜಿಲ್ಲೆಗಳ ವಲಸೆ ಕಾರ್ಮಿಕರು ವಿಪರೀತ ಪಾನಮತ್ತರಾಗಿ ಬಿದ್ದಿರುವುದು ಕಂಡುಬರುತ್ತಿದೆ. ಇದರಿಂದ ಪ್ರಯಾಣಿಕರು ಹಾಗೂ ಸಾರ್ವಜನಿಕರು ತೀರಾ ತೊಂದರೆ ಎದುರಿಸುವಂತಾಗಿದೆ. ಸಂಜೆಯಾಗುತ್ತಲೇ ಉಡುಪಿ ಸಿಟಿ ಬಸ್ ನಿಲ್ದಾಣ, ನರ್ಮ್ ಬಸ್ ನಿಲ್ದಾಣ ಸೇರಿದಂತೆ ಸುತ್ತಮತ್ತಲು ಮದ್ಯ ವ್ಯಸನಿ ಕಾರ್ಮಿಕರು ಪಾನಮತ್ತರಾಗಿ ಪರಸ್ಪರ ಗಲಾಟೆ ಮಾಡುವುದು, ಕಚ್ಚಾಡಿಕೊಳ್ಳುವುದು, ಹೊಡೆದಾಡಿಕೊಳ್ಳುತ್ತಿದ್ದಾರೆ. ಇದೀಗ ಇವರು ಸ್ಥಳೀಯರ ಮೇಲೂ ಏರಿ ಬರುತ್ತಿರುವುದು ಕಂಡುಬಂದಿದೆ. ಅಲ್ಲೇ ಮಲಗುವುದು, ಅಲ್ಲೇ ಊಟ, ಅಲ್ಲೇ ಮದ್ಯ ಸೇವನೆ, ಅಲ್ಲಿಯೇ ಜೂಜಾಡುತ್ತಾರೆ. ಮತ್ತೆ ವಿನಾಕಾರಣ […]