ಬೆಳ್ತಂಗಡಿ:ವಿದ್ವತ್ ಟ್ರೋಫಿ 2025 – ಬೆಳ್ತಂಗಡಿ ತಾಲೂಕು ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಬೆಳ್ತಂಗಡಿ:ವಿದ್ವತ್ ಪಿಯು ಕಾಲೇಜ್ ಗುರುವಾಯನಕೆರೆ ಇವರ ನೇತೃತ್ವದಲ್ಲಿ ಬೆಳ್ತಂಗಡಿ ವಾಲಿಬಾಲ್ ಅಸೋಸಿಯೇಷನ್ ಇವರ ಸಹಭಾಗಿತ್ವದಲ್ಲಿ ಮತ್ತು ಲಯನ್ಸ್ ಕ್ಲಬ್ ಬೆಳ್ತಂಗಡಿ ಇವರ ಸಹಯೋಗದೊಂದಿಗೆ ತಾಲೂಕು ಮಟ್ಟದ ಪುರುಷರ ಮತ್ತು ಆಹ್ವಾನಿತ ಮಹಿಳೆಯರ ತಂಡಗಳ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟವನ್ನು ವಿದ್ವತ್ ಪಿ ಯು ಕಾಲೇಜಿನ ಕ್ರೀಡಾಂಗಣದಲ್ಲಿ ಜನವರಿ 4, 2025 ರಂದು ನೆರವೇರಿತು. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ 4 ಆಹ್ವಾನಿತ ಮಹಿಳಾ ತಂಡಗಳಲ್ಲಿ ಉಜಿರೆಯ ಎಸ್.ಡಿ.ಮ್ ತಂಡವು ಪ್ರಥಮ ಸ್ಥಾನವನ್ನು ಮುಡಿಗೇರಿಸಿ ಕೊಂಡರೆ, ಮಂಗಳ […]

ಜ.11ರಂದು ಸಂವಿಧಾನ ಸಮ್ಮಾನ ಕಾರ್ಯಕ್ರಮ: ಉಡುಪಿಗೆ ಅಣ್ಣಾಮಲೈ

ಉಡುಪಿ: ಸಂವಿಧಾನ ತಿದ್ದುಪಡಿ ಮಾಡಲು ಕಾಂಗ್ರೆಸ್ ಸರಕಾರಕ್ಕಿದ್ದ ದುರುದ್ದೇಶ ಹಾಗು ಸಾರ್ವಜನಿಕರ ಹಿತಾಸಕ್ತಿಗಾಗಿ ಬಿಜೆಪಿ ಸರಕಾರ ಮಾಡಿರುವ ತಿದ್ದುಪಡಿಗಳ ಕುರಿತು ಬೆಳಕು ಚೆಲ್ಲುವ ಸಲುವಾಗಿ ಸಿಟಿಜನ್ ಫಾರ್ ಸೋಶಿಯಲ್ ಜಸ್ಟಿಸ್ ಮತ್ತು ದಲಿತ ಹಿಂದುಳಿದ ವರ್ಗಗಳ ಸಂಘಟನೆಗಳ ಸಹಯೋಗದಲ್ಲಿ ಜ.11ರಂದು ಬೆಳಿಗ್ಗೆ 11 ಗಂಟೆಗೆ ಉಡುಪಿಯ ಪುರಭವನದಲ್ಲಿ ಸಂವಿಧಾನ ಸಮ್ಮಾನ್ ಕಾರ್ಯಕ್ರಮ ಆಯೋಜಿಸಲಾಗಿದೆ. ತಮಿಳುನಾಡು ಬಿಜೆಪಿ ಅಧ್ಯಕ್ಷರಾದ ಅಣ್ಣಾಮಲೈ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಸಂವಿಧಾನ ಸಮ್ಮಾನ ಸಮಿತಿಯ ವಿಭಾಗ ಸಂಚಾಲಕರಾದ ಕೆ. ಉದಯ ಕುಮಾರ್ ಶೆಟ್ಟಿ […]

ಮಣಿಪಾಲ ಜ್ಞಾನಸುಧಾ : ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಅಲಿಶಾಗೆ ದ್ವಿತೀಯ ಸ್ಥಾನ

ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಜನವರಿ 8 ರಂದು ತುಮಕೂರಿನ ಎಂಪ್ರೆಸ್ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2024-25ನೇ ಸಾಲಿನ ಪದವಿ ಪೂರ್ವ ವಿದ್ಯಾರ್ಥಿಗಳ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾನಗರದ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಅಲಿಶಾ ಕ್ಲಿಯಾಂತ ರ‍್ಬೋಜಾ ಇಂಗ್ಲಿಷ್ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಇವರು ಮೂಡುಬೆಳ್ಳೆಯ ಎಡ್ವಿನ್ ರ‍್ಬೋಜಾ ಹಾಗೂ ಶಾಂತಿ ಪಿಂಟೋ […]

ಉಡುಪಿ:ತ್ರಿಶಾ ಕ್ಲಾಸಸ್: ಸಿಎಸ್ ಎಕ್ಸಿಕ್ಯೂಟಿವ್ ತರಗತಿಗಳು ಆರಂಭ

ಉಡುಪಿ:ಸಿಎ, ಸಿ ಎಸ್ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ ಸತತ 27 ವರ್ಷಗಳಿಂದ ಉತ್ತಮ ತರಬೇತಿಯನ್ನು ನೀಡುತ್ತಾ ಬಂದಿರುವ ತ್ರಿಶಾ ಕ್ಲಾಸಸ್ ವತಿಯಿಂದ ಸಿಎಸ್ ಎಕ್ಸಿಕ್ಯೂಟಿವ್ ತರಗತಿಗಳು ಜನವರಿ 15ರಿಂದ ಮಂಗಳೂರಿನಲ್ಲಿ ಆರಂಭವಾಗಲಿದೆ. ವೃತ್ತಿಪರ ಕೋರ್ಸ್ ಗಳಿಗೆ ವಿಷಯವಾಗಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ರೀತಿಯಲ್ಲಿ ತರಬೇತಿ ಆಯೋಜಿಸಿದೆ. ತ್ರಿಶಾ ಸಂಸ್ಥೆಯು ಅಖಿಲ ಭಾರತ ಮಟ್ಟದಲ್ಲಿ ಸಿಎ ಫೌಂಡೇಶನ್ , ಸಿಎ ಇಂಟರ್ಮಿಡಿಯೇಟ್ , ಸಿಎ ಫೈನಲ್, ಸಿಎಸ್ಇಇಟಿ, ಸಿಎಸ್ ಎಕ್ಸಿಕ್ಯೂಟಿವ್ ವಿಭಾಗದಲ್ಲಿ ಅತ್ಯುತ್ತಮ ಫಲಿತಾಂಶವನ್ನು ಗಳಿಸಿಕೊಂಡಿದೆ. ತರಗತಿಯ ವಿಶೇಷತೆಗಳು […]

ನಕ್ಸಲರು ಶರಣಾದ ನಂತರ ಏನೆಲ್ಲಾ ಪ್ರಕ್ರಿಯೆಗಳಿವೆ?ಮುಂದೆನಾಗುತ್ತೆ, ಇಲ್ಲಿದೆ ಮಾಹಿತಿ

ಸಿ.ಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಬುಧವಾರ ಆರು ಮಂದಿ ನಕ್ಸಲರು ಶರಣಾಗತರಾಗಿದ್ದಾರೆ. ಆದ್ರೆ ಶರಣಾದ ನಂತರ ನಕ್ಸಲರು ಎಲ್ಲಿರುತ್ತಾರೆ. ಅವರಿಗೆ ಮುಂದೆ ಎದುರಾಗುವ ಕಾನೂನು ಪ್ರಕ್ರಿಯೆಗಳು ಹೇಗಿರುತ್ತದೆ ಎನ್ನುವ ಕುತೂಹಲ ಎಲ್ಲರಿಗೂ ಇರುತ್ತದೆ ಇಲ್ಲಿದೆ ನೋಡಿ ಆ ಕುರಿತು ಸಂಪೂರ್ಣ ಮಾಹಿತಿ ಶರಣಾದ ಬಳಿಕ ಕಾನೂನುಗಳು ಹೇಗೆ? ಶರಣಾದವರ ಮೇಲೆ ಇರುವ ಪ್ರಕರಣಗಳ ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ, ಶರಣಾಗತಿಗೆ ಇರುವ ರಾಜ್ಯ ಸಮಿತಿ ಪ್ರಕರಣಗಳನ್ನ ವಾಪಸ್ ತೆಗೆದುಕೊಳ್ಳಲು ಸರ್ಕಾರಕ್ಕೆ ಮನವಿ ಮಾಡಬೇಕು. ಇದ್ಕೆ ಸಂಪುಟದ ಅನುಮತಿ ಬೇಕಾಗುತ್ತದೆ.ಸರ್ಕಾರಿ […]