ಕುಂದಾಪುರಕ್ಕೆ ಡ್ರೈವರ್ ಬೇಕಾಗಿದ್ದಾರೆ
ಕುಂದಾಪುರ:ಕುಂದಾಪುರದಲ್ಲಿ ಡ್ರೈವರ್ ಕೆಲಸ ಮಾಡಲು ಜನ ಬೇಕಾಗಿದ್ದಾರೆ.ಉತ್ತಮ ವೇತನದ ಜೊತೆಗೆ ಪ್ರೋತ್ಸಾಹ ಧನ (incentives)ನೀಡಲಾಗುವುದು. ಮಾಹಿತಿಗಾಗಿ ಕರೆ ಮಾಡಿ:9731621800
ಮಣಿಪಾಲ ಕೌಶಲಾಭಿವೃದ್ಧಿ ಕೇಂದ್ರದಿಂದ ನಗರಸಭೆ ಸದಸ್ಯರಿಗೆ ಕೌಶಲ ಕಾರ್ಯಾಗಾರ
ಮಣಿಪಾಲ: ಕುಶಲಕರ್ಮಿಗಳು ತಂತ್ರಜ್ಞಾನದ ಆಧುನಿಕತೆಯ ಜೊತೆಗೆ ಹೊಂದಾಣಿಕೆ ಮಾಡಲು ಮತ್ತು ಕೈಗಾರಿಕೆಗಳ ಬೆಳವಣಿಗೆಗೆ ಕೇಂದ್ರ ಸರ್ಕಾರವು ಹಲವಾರು ಯೋಜನೆಗಳನ್ನು ಪ್ರಸ್ತುತಪಡಿಸಿದೆ. ಸ್ಥಳೀಯ ಜನಪ್ರತಿನಿಧಿಗಳು ಈ ಸೌಲಭ್ಯತೆಗಳ ಮಾಹಿತಿಗಳನ್ನು ಸಾರ್ವಜನಿಕ ವಲಯದಲ್ಲಿ ಜಾಗೃತಿ ಮೂಡಿಸಿ ಮಾಹಿತಿ ಹಂಚಿಕೆ ಮಾಡಬೇಕು ಎಂದು ಶಾಸಕ ಯಶ್ ಪಾಲ್ ಸುವರ್ಣ ಹೇಳಿದರು. ನಗರಸಭೆ, ಡಾ. ಟಿ.ಎಂ.ಎ ಪೈ ಪಾಲಿಟೆಕ್ನಿಕ್ ಆವರಣದ ಮಣಿಪಾಲ ಕೌಶಲಾಭಿವೃದ್ಧಿ ಕೇಂದ್ರ (ಎಂ ಎಸ್ ಡಿ ಸಿ), ಜಿಲ್ಲಾ ಕಾರ್ಮಿಕ ಇಲಾಖೆ ಆಶ್ರಯದಲ್ಲಿ ಎಮ್ ಎಸ್ ಡಿ ಸಿ ಸಭಾಂಗಣದಲ್ಲಿ […]
ಪೆರ್ಡೂರು: ನಿಯಂತ್ರಣ ತಪ್ಪಿ ಬೈಕ್ ಮರಕ್ಕೆ ಢಿಕ್ಕಿ; ಸವಾರ ಮೃತ್ಯು.
ಉಡುಪಿ, ಜ.8: ಬೈಕ್ ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಮೃತಪಟ್ಟ ಘಟನೆ ಬೈರಂಪಳ್ಳಿ ಗ್ರಾಮದ ದೂಪದಕಟ್ಟೆ ಚೌಡೇಶ್ವರಿ ದೇವಸ್ಥಾನದ ಬಳಿ ಜ.6ರಂದು ಮಧ್ಯಾಹ್ನ ವೇಳೆ ನಡೆದಿದೆ. ಮೃತರನ್ನು ಸಂತೋಷ್ (28) ಎಂದು ಗುರುತಿಸಲಾಗಿದೆ. ಪೆರ್ಡೂರು ಕಡೆಯಿಂದ ಹರಿಖಂಡಿಗೆ ಕಡೆಗೆ ಹೋಗುತ್ತಿದ್ದ ಬೈಕ್, ಸವಾರನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ಮರಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಸವಾರ ಸಂತೋಷ್ ಹಿರಿಯಡಕ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದು […]
ಇಸ್ರೋದ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ
ಬೆಂಗಳೂರು: ಚಂದ್ರನತ್ತ ಕೊಂಡೊಯ್ದ ಇಸ್ರೋ ದಿನಕ್ಕೊಂದು ಹೊಸ ಪವಾಡವನ್ನೇ ಮಾಡುತ್ತಿದೆ. ಆಕಾಶದಲ್ಲಿ ಇಸ್ರೋ ಮಾಡಿದ ಸಾಹಸಗಳನ್ನು ಜಗತ್ತೇ ಅರಿತಿದೆ. ಅದರ ಮುಖ್ಯಸ್ಥರು ಬದಲಾಗುತ್ತಲೇ ಇರುತ್ತಾರೆ. ಆದರೆ ಯಶಸ್ಸಿನ ವೇಗ ನಿಲ್ಲುವುದಿಲ್ಲ. ಇದೇ ವೇಳೆ ಇಸ್ರೋ ಮುಖ್ಯಸ್ಥರು ಬದಲಾಗಲಿದ್ದಾರೆ. ಪ್ರಸ್ತುತ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರ ಸ್ಥಾನಕ್ಕೆ ವಿ ನಾರಾಯಣನ್ ಅವರನ್ನು ನೇಮಕ ಮಾಡಲಾಗಿದೆ. ವಿ ನಾರಾಯಣನ್ ಅವರು ಪ್ರಸ್ತುತ ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರಿಂದ ಜನವರಿ 14 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಕೇಂದ್ರ ಸರ್ಕಾರದ […]