ಕೊಡಂಕೂರು ವಾರ್ಡ್ ₹2.50 ಕೋಟಿ ವೆಚ್ಚದ ಸೇತುವೆ ಮತ್ತು ರಸ್ತೆ ಕಾಮಗಾರಿಗೆ ಶಾಸಕ ಯಶ್ ಪಾಲ್ ಸುವರ್ಣ ಚಾಲನೆ
ಉಡುಪಿ ನಗರಸಭೆಯ ಕೊಡಂಕೂರು ವಾರ್ಡಿನ ನೆರೆಪೀಡಿತ ತಾರಕಟ್ಟ ಪ್ರದೇಶದಲ್ಲಿ ಸುಮಾರು ₹ 2.50 ಕೋಟಿ ವೆಚ್ಚದಲ್ಲಿ ಇಂದ್ರಾಣಿ ನದಿಗೆ ನೂತನ ಸೇತುವೆ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಯಶ್ ಪಾಲ್ ಸುವರ್ಣ ಕಳೆದ ಹಲವು ದಶಕಗಳ ಸ್ಥಳೀಯರ ಬೇಡಿಕೆಯಂತೆ ಕರ್ನಾಟಕ ನೀರಾವರಿ ನಿಗಮದ ಮೂಲಕ 2.50 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಿಸಿ, ಸಂಪರ್ಕ ರಸ್ತೆ ಅಭಿವೃದ್ಧಿಪಡಿಸುವ ಕಾಮಗಾರಿಗೆ ಚಾಲನೆ […]
ಕಾರ್ಕಳ: ಕಬಡ್ಡಿ ಪಂದ್ಯಾಟದಲ್ಲಿ ಎಸ್ ವಿ ಟಿ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ಸಾಕ್ಷಿ ಶೆಟ್ಟಿ ರಾಷ್ಟ್ರಮಟ್ಟಕ್ಕೆ ಆಯ್ಕೆ.
ಕಾರ್ಕಳ: ಉತ್ತರಾಖಂಡ್ ನ ಹರಿದ್ವಾರದಲ್ಲಿ ನಡೆಯುವ 50ನೇ ರಾಷ್ಟ್ರೀಯ ಜೂನಿಯರ್ ಕಬಡ್ಡಿ ಪಂದ್ಯಾಟದಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು ಎಸ್ ವಿ ಟಿ ವನಿತಾ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ಕುಮಾರಿ ಸಾಕ್ಷಿ ಶೆಟ್ಟಿ ಆಯ್ಕೆಯಾಗಿರುತ್ತಾರೆ. ಇವರಿಗೆ ಕಾಲೇಜಿನ ದೈಹಿಕ ಶಿಕ್ಷಕಿ ಪ್ರಭಾವತಿ ಹೆಗ್ಡೆ ಹಾಗೂ ಕೋಚ್ ಶಶಿಧರ್ ಶೆಟ್ಟಿ ಹಾಗೂ ಉಡುಪಿ ಜಿಲ್ಲಾ ಅಮೆಚೂರ್ ಫೆಡರೇಷನ್ ವತಿಯಿಂದ ತರಬೇತಿಯನ್ನು ನೀಡಿರುತ್ತಾರೆ. ರಾಷ್ಟ್ರಮಟ್ಟದ ಸಾಧನೆಯನ್ನು ಗೈದ ಕುಮಾರಿ ಸಾಕ್ಷಿ ಶೆಟ್ಟಿ ಹಾಗೂ ತರಬೇತುದಾರರಿಗೆ ಎಸ್‌ವಿಟಿ ವಿದ್ಯಾಸಂಸ್ಥೆಗಳ […]