ಉಡುಪಿ: ನೂತನವಾಗಿ ಆರಂಭವಾದ ಉಡುಪಿಯ ಹೋಟೆಲ್ ಗೆ ಜನ ಬೇಕಾಗಿದ್ದಾರೆ.

ಉಡುಪಿ: ನೂತನವಾಗಿ ಆರಂಭವಾದ ಉಡುಪಿಯ ಹೋಟೆಲ್ ಗೆ ಟೀ ಮಾಡಲು, ಹಾಗೂ ಕೌಂಟರ್ ಮತ್ತು ಜ್ಯೂಸ್ ಕೌಂಟರ್ ನಲ್ಲಿ ಕೆಲಸ ಮಾಡಲು ಜನ ಬೇಕಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9449104708

ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಹಲವರ ಪೈಪೋಟಿ!

ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಸೋಮವಾರ (ಜ.06) ಸಂಜೆ ಪ್ರಧಾನಿ ಹುದ್ದೆ ಹಾಗೂ ಲಿಬರಲ್‌ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬರೋಬ್ಬರಿ ಹತ್ತು ವರ್ಷಗಳ ಕಾಲ ಪ್ರಧಾನಿ ಹುದ್ದೆಯಲ್ಲಿದ್ದ ಟ್ರುಡೋ ರಾಜೀನಾಮೆಗೆ ಒತ್ತಾಯಿಸಿ ಸ್ವಪಕ್ಷದಲ್ಲೇ ಭಿನ್ನಮತ ಸೃಷ್ಟಿಯಾಗಿದ್ದರಿಂದ ಈ ಬೆಳವಣಿಗೆ ನಡೆದಿದೆ. ಆದರೆ ಲಿಬರಲ್‌ ಪಕ್ಷ ನೂತನ ಪ್ರಧಾನಿ ಆಯ್ಕೆ ಮಾಡುವವರೆಗೆ ತಾನೇ ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯುವುದಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೆನಡಾದ ಮುಂದಿನ ಪ್ರಧಾನಿ ಯಾರು ಎಂಬ ಲೆಕ್ಕಾಚಾರ ಆರಂಭವಾಗಿದೆ. ಮಾಧ್ಯಮಗಳ ವರದಿ ಪ್ರಕಾರ, […]

ಉಡುಪಿ:ತ್ರಿಶಾ ಕ್ಲಾಸಸ್: ಸಿಎಸ್ ಎಕ್ಸಿಕ್ಯೂಟಿವ್ ತರಗತಿಗಳು ಆರಂಭ

ಉಡುಪಿ:ಸಿಎ, ಸಿ ಎಸ್ ಮುಂತಾದ ವೃತ್ತಿಪರ ಕೋರ್ಸ್ ಗಳಿಗೆ ಸತತ 27 ವರ್ಷಗಳಿಂದ ಉತ್ತಮ ತರಬೇತಿಯನ್ನು ನೀಡುತ್ತಾ ಬಂದಿರುವ ತ್ರಿಶಾ ಕ್ಲಾಸಸ್ ವತಿಯಿಂದ ಸಿಎಸ್ ಎಕ್ಸಿಕ್ಯೂಟಿವ್ ತರಗತಿಗಳು ಜನವರಿ 12 ರಿಂದ ಉಡುಪಿಯಲ್ಲಿ ಆರಂಭವಾಗಲಿದೆ. ವೃತ್ತಿಪರ ಕೋರ್ಸ್ ಗಳಿಗೆ ವಿಷಯವಾಗಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ರೀತಿಯಲ್ಲಿ ತರಬೇತಿ ಆಯೋಜಿಸಿದೆ. ತ್ರಿಶಾ ಸಂಸ್ಥೆಯು ಅಖಿಲ ಭಾರತ ಮಟ್ಟದಲ್ಲಿ ಸಿಎ ಫೌಂಡೇಶನ್ , ಸಿಎ ಇಂಟರ್ಮಿಡಿಯೇಟ್ , ಸಿಎ ಫೈನಲ್, ಸಿಎಸ್ಇಇಟಿ, ಸಿಎಸ್ ಎಕ್ಸಿಕ್ಯೂಟಿವ್ ವಿಭಾಗದಲ್ಲಿ ಅತ್ಯುತ್ತಮ ಫಲಿತಾಂಶವನ್ನು ಗಳಿಸಿಕೊಂಡಿದೆ. ತರಗತಿಯ […]

ಅಪಘಾತಗಳಿಗೆ ಆಹ್ವಾನ ನೀಡುತ್ತಿರುವ ಪಳ್ಳಿ-ಮೂಡುಬೆಳ್ಳೆ ರಸ್ತೆಯ ಗುಂಡಿಗಳನ್ನು ಇನ್ನಾದರೂ ಮುಚ್ಚಿಸಿ: ವಿಷ್ಣುಪ್ರಸಾದ್ ಕೊಡಿಬೆಟ್ಟು ಆಗ್ರಹ

ಉಡುಪಿ: ಕಾರ್ಕಳದ ಪಳ್ಳಿ-ಮೂಡುಬೆಳ್ಳೆ ರಸ್ತೆಯಲ್ಲಿ ಗುಂಡಿಗಳು ಅಪಫಾತಗಳೀಗೆ ಆಹ್ವಾನ ನೀಡುತ್ತಿದೆ. ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ತೊಡಕಾಗಿದ್ದು ಜೀವಭಯದಿಂದ ಸಂಚರಿಸಬೇಕಾದ ಸ್ಥಿತಿ ಇದೆ. ಕೂಡಲೇ ಈ ರಸ್ತೆಯನ್ನು ದುರಸ್ತಿಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ವಿಷ್ಣುಪ್ರಸಾದ್ ಕೊಡಿಬೆಟ್ಟು ಮನವಿ ಮಾಡಿದ್ದಾರೆ. “ಇತ್ತೀಚಿಗಷ್ಟೇ ರಸ್ತೆಗೆ ತೇಪೆ ಹಾಕಲಾಗಿದ್ದು ಕಳೆದ ಮಳೆಗಾಲದ ನಂತರ ರಸ್ತೆ ಮತ್ತೆ ಬಿರುಕು ಬಿಟ್ಟಿದೆ. ಹೊಂಡಗಳನ್ನು ತಪ್ಪಿಸುವ ಪ್ರಯತ್ನದಲ್ಲಿ ಹಲವು ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಬಿದ್ದು ಗಾಯಗೊಂಡಿದ್ದಾರೆ. ವಾಹನಗಳು ತಾಂತ್ರಿಕ ಸಮಸ್ಯೆ ಎದುರಿಸುತ್ತಿದೆ. ಮುಂದಿನ […]

ಪಂಪ ಭಾರತ ರೀಟೋಲ್ಡ್ ಇಂಗ್ಲಿಷ್ ನೆರೇಟಿವ್’ ಪುಸ್ತಕ ಅನಾವರಣ

ಉಡುಪಿ: ಪಂಪ ಭಾರತ ಇಂಗ್ಲಿಷ್ ಭಾಷೆಯಲ್ಲಿ ಅನುವಾದ ಆಗಿರುವುದು ಜಾಗತಿಕ ವಿದ್ಯಾಮಾನವಾಗಿದೆ. ಇದನ್ನು ನಾವೆಲ್ಲ ಸಂಭ್ರಮಿಸಬೇಕಾಗಿದೆ. ಕನ್ನಡ ಮೊದಲ ಕಾವ್ಯ ಪಂಪ ಭಾರತ ಜಗತ್ತಿನ ಯಾವುದೇ ಭಾಷೆಗೂ ಅನುದಾನ ಆಗಿಲ್ಲ ಎಂದು ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಹೇಳಿದ್ದಾರೆ. ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್‌ನ ಜಂಟಿ ಆಶ್ರಯದಲ್ಲಿ ಕೇಂದ್ರದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಎನ್.ಟಿ. ಭಟ್ ಅವರ ‘ಪಂಪ ಭಾರತ ರೀಟೋಲ್ಡ್ ಇಂಗ್ಲಿಷ್ ನೆರೇಟಿವ್’ ಪುಸ್ತಕ ಅನಾವರಣಗೊಳಿಸಿ […]