ಕಾರ್ಕಳದ ಅನಂತಕೃಷ್ಣ ಗೋಶಾಲೆಯಲ್ಲಿ ಆಕಳಿನ ಕರುವಿಗೆ ಧೋಳಾರೋಹಣ ಸೇವೆ

ಉಡುಪಿ: ಆಕಳಿನ ಕರುವನ್ನು ಮಗುವಿನಂತೆ ತೊಟ್ಟಿಲಲ್ಲಿ ಇಟ್ಟು ತೂಗುವ ಅಪರೂಪದ ಸಂಪ್ರದಾಯವಿದೆ. ಗೋ ರಕ್ಷಣೆ ಹಾಗೂ ಸಾಕಣೆಯಲ್ಲಿ ಅಪರೂಪದ ಕೆಲಸ ಮಾಡುತ್ತಿರುವ ಕಾರ್ಕಳದ ಅನಂತಕೃಷ್ಣ ಗೋಶಾಲೆಯಲ್ಲಿ ಕರುವಿಗೆ ಧೋಳಾರೋಹಣ ಸೇವೆ ನೆರವೇರಿತು. ಹರಕೆಯ ರೂಪದಲ್ಲಿ ಈ ಸೇವೆಯನ್ನು ನಡೆಸಲಾಗುತ್ತದೆ. ತೊಟ್ಟಿಲು ಸೇವೆಯಿಂದ ಸಂಗ್ರಹವಾಗುವ ಹಣವನ್ನು ಗೋಶಾಲೆಯ ವೆಚ್ಚಗಳಿಗೆ ಬಳಸಲಾಗುತ್ತದೆ. ಪುಟ್ಟ ಕರುವನ್ನು ತೊಟ್ಟಿಲಲ್ಲಿ ತೂಗುವ ಅಪರೂಪದ ದೃಶ್ಯ ಕಣ್ಮನ ಸೆಳೆಯುತ್ತದೆ. ಅನೇಕ ಮಂದಿ ಹರಕೆಯ ರೂಪದಲ್ಲಿ ಈ ಸೇವೆ ನಡೆಸುತ್ತಾರೆ.

ಅಂಬಲಪಾಡಿ: ಡಯಾಗ್ನೋಸ್ಟಿಕ್ ಸೆಂಟರ್ ಉದ್ಘಾಟನೆ

ಉಡುಪಿ,ಜ.7: ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ವತಿಯಿಂದ ಅಂಬಲಪಾಡಿ 66 ರ ಸನಿಹದಲ್ಲಿರುವ ಜಿಲ್ಲಾ ಸವಿತಾ ಸಮಾಜ ಸಮುದಾಯ ಭವನದಲ್ಲಿ ನೂತನವಾಗಿ ಆರಂಭಿಸಲಾದ ‘ಸವಿತಾ ಡಯಾಗ್ನೋಸ್ಟಿಕ್ ಸೆಂಟರ್’ (ಕ್ಲಿನಿಕಲ್ ಲ್ಯಾಬೋರೇಟರಿ) ಉದ್ಘಾಟನೆಯು ಜ.7ರ ಮಧ್ಯಾಹ್ನ 3ಕ್ಕೆ ನಡೆಯಲಿದೆ. ಸಾಮಾನ್ಯ ಜನರಿಗೆ ರಿಯಾಯಿತಿ ದರದಲ್ಲಿ ಪರೀಕ್ಷಾ ಸೇವೆ ನೀಡುವ ಮಹತ್ವಾಕಾಂಕ್ಷೆಯಿಂದ ತೆರೆಯಲ್ಪಡುವ ಸೆಂಟರ್ ಅನ್ನು ಜಿಲ್ಲಾ ಸರ್ಜನ್ ಡಾ| ಎಚ್. ಅಶೋಕ್ ಉದ್ಘಾಟಿಸಲಿದ್ದು, ಸಹಕಾರಿಯ ಅಧ್ಯಕ್ಷ ನವೀನ್ ಚಂದ್ರ ಭಂಡಾರಿ ಅಧ್ಯಕ್ಷತೆ ವಹಿಸುವರು. ಸಹಕಾರಿ ಚಳುವಳಿಯಲ್ಲಿ […]

ಉಡುಪಿ ಕೃಷ್ಣಮಠದಲ್ಲಿ ಪಿಕ್ ಪಾಕೆಟ್ ಮಾಡುವವರ ಹಾವಳಿ; ಪ್ರವಾಸಿಗರೇ ಟಾರ್ಗೆಟ್

ಉಡುಪಿ: ಪ್ರವಾಸಿಗರು ಹೆಚ್ಚಿದಂತೆ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಅಪರಾಧ ಪ್ರಕರಣಗಳು ವರದಿಯಾಗುತ್ತಿದೆ. ಕಳೆದ ಒಂದು ತಿಂಗಳಿಂದ ಲಕ್ಷಾಂತರ ಪ್ರವಾಸಿಗರು ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುತ್ತಿದ್ದು, ಸರದಿಯ ಸಾಲಿನಲ್ಲಿ ನಿಂತು ಕೃಷ್ಣ ದರ್ಶನ ಕೈಗೊಳ್ಳುತ್ತಿದ್ದಾರೆ. ಸಾವಿರಾರು ಜನ ಓಡಾಡುವ ಕೃಷ್ಣ ಮಠದ ಒಳಾಂಗಣದಲ್ಲಿ, ಇತ್ತೀಚಿಗೆ ಕೆಲವು ಪಿಕ್ ಪಾಕೆಟ್ ಪ್ರಕರಣಗಳು ನಡೆದಿದೆ. ಪ್ರವಾಸಿಗರನ್ನೇ ಟಾರ್ಗೆಟ್ ಮಾಡಿಕೊಂಡಿರುವ ದುಷ್ಕರ್ಮಿಗಳು, ಅರಿವಿಗೆ ಬಾರದಂತೆ ಪರ್ಸುಗಳನ್ನು ಎಗರಿಸುತ್ತಿದ್ದಾರೆ. ಇತ್ತೀಚಿಗೆ ಮಹಿಳೆಯೊಬ್ಬರ ಪರ್ಸ್ ಎಗರಿಸಿದ ಪ್ರಕರಣ ನಗರ ಠಾಣೆಯಲ್ಲಿ ದಾಖಲಾಗಿದ್ದು, ಕೆಲ […]

ಬಂಟಕಲ್:ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಆಚರಣೆಯಲ್ಲಿ ಯಕ್ಷಗಾನ ನೃತ್ಯಕ್ಕೆ ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಕೆಡೆಟ್ ಅರ್ಪಿತಾ ತಂತ್ರಿ ಆಯ್ಕೆ

ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ ಡಾಟಾಸೈನ್ಸ್ ವಿಭಾಗದ ವಿದ್ಯಾರ್ಥಿನಿ ಹಾಗೂ ಎನ್‌ಸಿಸಿ ಕೆಡೆಟ್ ಅರ್ಪಿತಾ ತಂತ್ರಿ ಇವರು 26 ಜನವರಿ 2025 ರಂದು ನವದೆಹಲಿಯ ರಾಜ್‌ಪಥ್‌ನಲ್ಲಿ ನಡೆಯುವ 76ನೇ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಯಕ್ಷಗಾನ ನೃತ್ಯವನ್ನು ಪ್ರದರ್ಶಿಸಲಿದ್ದಾರೆ. ಕರ್ನಾಟಕ ಗೋವಾ ನಿರ್ದೇಶನಾಲಯ, ಇದರ ಮಂಗಳೂರು ಸಮೂಹದ ಸದಸ್ಯೆಯಾಗಿರುವ 4 Kar Engr Coy ಕೆಡೆಟ್ ಅರ್ಪಿತಾ ತಂತ್ರಿ ಇವರು ಭಾರತದ ಅತ್ಯಂತ ಗೌರವಾನ್ವಿತ ರಾಷ್ಟçಮಟ್ಟದ ವೇದಿಕೆಯಲ್ಲಿ ಭಾಗವಹಿಸಲು ಆಯ್ಕೆಯಾಗಿರುವುದು ಅವರ ಬಹುಮುಖ […]

ಮಂಗಳೂರು:ಮಾತೃ ಭಾಷೆ ಉಳಿವಿಗಾಗಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಅಗತ್ಯಗಳು ಎಲ್ಲಾ ಭಾಷೆಗಳಿಗೆ ಇದೆ:ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಕುಲಪತಿ ಡಾ.ಫಾ.ಪ್ರವೀಣ್ ಮಾರ್ಟಿಸ್ ಅಭಿಮತ.

ಮಂಗಳೂರು:ಜನರು ಮಾತೃಭಾಷೆಗಳನ್ನು ಉಪಯೋಗ ಮಾಡುತ್ತಿಲ್ಲ ಎಂದು ಕೊರಗುವ ಬದಲು ಇಂಗ್ಲಿಷ್ ಕಲಿಯುವ ಅನಿವಾರ್ಯದ ಜೊತೆಯಲ್ಲಿ ಮಾತೃಭಾಷೆಯ ವಿವಿಧ ಆಕರ್ಷಕ ಕಾರ್ಯಕ್ರಮಗಳವನ್ನು ಇಟ್ಟು ಮಾತೃಭಾಷೆಯ ಶಬ್ದಗಳನ್ನು ಕಲಿಕೆಯ ಸಂಗಡ ಉಪಯೋಗಿಸುವ ಹಾಗೆ ಶಿಕ್ಷಣ ಸಂಸ್ಥೆಗಳು ಮಾಡಬೇಕು ಎಂದು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ಡಾ ಫಾ ಪ್ರವೀಣ್ ಮಾರ್ಟಿಸ್ ನುಡಿದರು. ಅವರು ಕೊಂಕಣಿ ಭಾಷಾ ಮಂಡಳ್ ಕರ್ನಾಟಕ ಇವರ ಐವತ್ತೊಂದನೆಯ ಸ್ಥಾಪನಾ ದಿನದ ಪ್ರಯುಕ್ತ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಮತ್ತು ಅವರ ಕೊಂಕಣಿ ಸಂಸ್ಥೆಯ ಜೊತೆಯಲ್ಲಿ […]