ಮಣಿಪಾಲ: ಅಪಾಯಕಾರಿ ವೀಲಿಂಗ್ ಮಾಡಿ ರೀಲ್ ಮಾಡುತ್ತಿದ್ದ ಯುವಕನ ಬಂಧನ

ಉಡುಪಿ: ಸಹಸವಾರನನ್ನು ಅಪಾಯಕರ ರೀತಿಯಲ್ಲಿ ಕುಳ್ಳಿರಿಸಿಕೊಂಡು ರೀಲ್ಸ್‌ಗಾಗಿ ವೀಲಿಂಗ್ ಮಾಡುತ್ತಿದ್ದ ಸ್ಕೂಟ‌ರ್ ಸವಾರನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಆತ್ರಾಡಿ ಗ್ರಾಮದ ನಿವಾಸಿ ಮುಹಮ್ಮದ್ ಆಶಿಕ್ (19) ಬಂಧಿತ ಯುವಕ. ಆಶಿಕ್ ತನ್ನ ದ್ವಿಚಕ್ರ ವಾಹನದಲ್ಲಿ ಮಣಿಪಾಲ ಈಶ್ವರ ನಗರದಿಂದ ವಿದ್ಯಾರತ್ನ ನಗರದ ಕಡೆಗೆ ತೆರಳುವ ರಸ್ತೆಯಲ್ಲಿ ಅಪಾಯ ತರುವ ರೀತಿಯಲ್ಲಿ ವೀಲಿಂಗ್ ನಡೆಸುತ್ತಿದ್ದ. ಈತ ವೀಲಿಂಗ್ ಮಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರದಾಡಿತ್ತು. ಅಲ್ಲದೇ ಈತ ಹೆಲ್ಮಟ್ ಕೂಡ ಹಾಕಿರಲಿಲ್ಲ. ಆತನ ಬಗ್ಗೆ ಮಾಹಿತಿ ಪಡೆದ ಪೊಲೀಸರು […]

ಮಣಿಪಾಲ: ವೇಶ್ಯಾವಾಟಿಕೆ ನಡೆಸುತ್ತಿದ್ದ ಅಪಾರ್ಟ್ ಮೆಂಟ್ ಗೆ ಪೊಲೀಸರ ದಾಳಿ; ಇಬ್ಬರು ಬಂಧನ

ಉಡುಪಿ: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಅಪಾರ್ಟ್ ಮೆಂಟ್ ಗೆ ದಾಳಿ ನಡೆಸಿದ ಮಣಿಪಾಲ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಣಿಪಾಲ ಸಮೀಪದ ಪೆರಂಪಳ್ಳಿಯ ಅಪಾರ್ಟ್ ಮೆಂಟ್‌ನಲ್ಲಿ ಈ ಘಟನೆ ನಡೆದಿದೆ.ಬಂಧಿತ ಆರೋಪಿಗಳನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ನಿವಾಸಿ ರಘುನಂದನ್(40) ಹಾಗೂ ದಾವರಣಗೆರೆ ಜಿಲ್ಲೆಯ ಹರಿಹರ ನಿವಾಸಿ ಅಮೀನಾ ಬೇಗಂ (55) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ನಿರ್ದೇಶನದಂತೆ ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ. ನೇತೃತ್ವದಲ್ಲಿ ಎಸ್ಸೈ ಅನೀಲ್, […]

ಉಡುಪಿ: ವರ್ಕ್‌ ಪ್ರಮ್‌ ಹೋಮ್‌ ಲಿಂಕ್‌ ಬಳಸಿ ಲಕ್ಷಾಂತರ ರೂ. ಕಳೆದುಕೊಂಡ ಯುವತಿ.

ಉಡುಪಿ: ಇನ್‌ಸ್ಟಾಗ್ರಾಂ ಖಾತೆಗೆ ಬಂದ ವರ್ಕ್‌ ಪ್ರಮ್‌ ಹೋಮ್‌ ಲಿಂಕ್‌ ಒತ್ತಿ ಯುವತಿಯೋರ್ವಳು 12.46 ಲಕ್ಷ ರೂ. ಹಣ ಕಳೆದುಕೊಂಡ ಘಟನೆ ನಡೆದಿದೆ. ಶಿವಳ್ಳಿ ಗ್ರಾಮದ ಸಪ್ನ (28) ಇವರ ಇನ್‌ಸ್ಟಾಗ್ರಾಂ ಲಿಂಕ್‌ ಬಳಸಿ, ಹಣ ಕಳೆದುಕೊಂಡ ಯುವತಿ ಖಾತೆಗೆ ವರ್ಕ್‌ ಪ್ರಮ್‌ ಹೋಮ್‌ ಎಂದು ಲಿಂಕ್‌ ಬಂದಿದ್ದು, ಅದನ್ನವರು ಓಪನ್‌ ಮಾಡಿದಾಗ ಅದರ ಪ್ಲಾಟ್‌ಫಾರ್ಮ್ನಲ್ಲಿ ಆರಂಭದಲ್ಲಿ 200 ರೂ. ಹೂಡಿಕೆ ಮಾಡಲು ಹೇಳಿದ್ದರು. ಅದಕ್ಕೆ 50ರೂ. ಕಮಿಷನ್‌ ದೊರಕಿದೆ. ಇದನ್ನು ನಂಬಿದ ಯುವತಿ ಹೆಚ್ಚಿನ ಕಮಿಷನ್‌ […]

ಉಡುಪಿ:ಶ್ರೀ ಕೃಷ್ಣ ಮಠಕ್ಕೆ ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾಗಾಂಧಿ ಭೇಟಿ

ಉಡುಪಿ: ಮುಂಗಾರು ಮಳೆ ಖ್ಯಾತಿಯ ನಟಿ ಪೂಜಾಗಾಂಧಿ ಅವರು ಕುಟುಂಬದೊಂದಿಗೆ ಭಾನುವಾರ ಶ್ರೀ ಕೃಷ್ಣ ಮಠಕ್ಕೆ ಆಗಮಿಸಿ ದರ್ಶನ ಪಡೆದು ಭೋಜನ ಪ್ರಸಾದ ಸ್ವೀಕರಿಸಿ ಪರ್ಯಾಯ ಶ್ರೀಪಾದರಿಂದ ಕೋಟಿಗೀತಾ ಲೇಖನ ಯಜ್ಞದ ದೀಕ್ಷೆ ಪಡೆದು ಮಂತ್ರಾಕ್ಷತೆ ಸ್ವೀಕರಿಸಿದರು.

ಭುವನ್ ಮಣಿಪಾಲ್ ಗೆ ಕನಸು ಕಾರ್ತಿಕ್ ಯುವ ರಂಗ ಪುರಸ್ಕಾರ

ಮಣಿಪಾಲ:ಅರೆಹೊಳೆ ಪ್ರತಿಷ್ಠಾನವು, ಎರಡು ವರ್ಷಗಳ ಹಿಂದೆ ಅಗಲಿದ್ದ ಯುವ ರಂಗ ಕರ್ಮಿ ಮತ್ತು ನಂದಗೋಕುಲದ ವ್ಯವಸ್ಥಾಪಕ, ಕನಸು ಕಾರ್ತಿಕ್ ನೆನಪಲ್ಲಿ ಕಳೆದ ವರ್ಷದಿಂದ ನೀಡುತ್ತಿರುವ ರಾಜ್ಯ ಮಟ್ಟದ ಕನಸು ಕಾರ್ತಿಕ್ ಯುವ ರಂಗ ಪುರಸ್ಕಾರದ 2024 ನೆ ಸಾಲಿಗೆ ಯುವ ರಂಗ ನಿರ್ದೇಶಕ, ನಟ ಭುವನ್ ಮಣಿಪಾಲ್ ಆಯ್ಕೆಯಾಗಿದ್ದಾರೆ. ಮಣಿಪಾಲದ ಭುವನ್, ನೀನಾಸಂ ಪದವೀಧರರಾಗಿ ಈಗಾಗಲೇ ಅನೇಕ ನಾಟಕಗಳನ್ನು ನಿರ್ದೇಶಿಸಿದ್ದಾರೆ. ವಿಶೇಷವಾಗಿ ಮಕ್ಕಳ ರಂಗಭೂಮಿಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಇವರು, ಅನೇಕ ರಂಗಶಿಬಿರಗಳನ್ನು ನಿರ್ವಹಿಸಿದ್ದು, ಇವರ ಒಟ್ಟೂಸಾಧನೆಯನ್ನು ಗುರುತಿಸಿ […]