ಉಡುಪಿ: ಡೆತ್ ನೋಟ್ ಬರೆದಿಟ್ಟು ಕ್ಯಾಟರಿಂಗ್ ಉದ್ಯಮಿ‌ ನೇಣಿಗೆ ಶರಣು

ಉಡುಪಿ: ಡೆತ್ ನೋಟ್ ಬರೆದಿಟ್ಟು ಕ್ಯಾಟರಿಂಗ್ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿಯೋರ್ವರು ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಉಡುಪಿಯ ಕೊರಂಗ್ರಪಾಡಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಕೊರಂಗ್ರಪಾಡಿ ನಿವಾಸಿ ವಸಂತ ಕೋಟ್ಯಾನ್(59) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ವಸಂತ್ ಅವರು, ಕ್ಯಾಟರಿಂಗ್ ವ್ಯವಹಾರ ನಡೆಸುತ್ತಿದ್ದರು. ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅವರು‌ ಬರೆದಿಟ್ಟಿರುವ ಚೀಟಿ ಪೋಲಿಸರಿಗೆ‌ ಲಭ್ಯವಾಗಿದೆ. ಡೆತ್ ನೋಟ್ ಸಾರಾಂಶ ಹೀಗಿದೆ:“ಇತ್ತೀಚಿನ ದಿನಗಳಲ್ಲಿ ನನಗೆ ಜೀವನವೇ ಬೇಡ ಎಂದು ತೀರ್ಮಾನಿಸಿದೆ. ನನ್ನ ಬಗ್ಗೆಯ ಅಪಪ್ರಚಾರದಿಂದ […]

ಮಹಿಳೆಯರೇ, ನೀವಿನ್ನೂ ಪೋಸ್ಟ್ ಆಫೀಸ್ ನ ಈ ಸ್ಕೀಮ್ ಪ್ರಯೋಜನ ಪಡೆದಿಲ್ಲಾಂದ್ರೆ ತಡ ಮಾಡ್ಬೇಡಿ!!

ಸದಾ ಜನಸ್ನೇಹಿಯಾಗಿ ಹಳ್ಳಿಗಳ ಮೂಲೆ ಮೂಲೆಗೂ ಪತ್ರ ಮಾತ್ರವಲ್ಲದೇ, ಬ್ಯಾಂಕಿಂಗ್, ಇನ್ಸೂರೆನ್ಸ್ ಮುಂತಾದ ಎಲ್ಲಾ ರೀತಿಯ ಸೇವೆಗಳು ಜನರ ಮನೆ ಬಾಗಿಲಿಗೇ ದೊರಕಬೇಕೆಂದು ಶ್ರಮಿಸುತ್ತಿದೆ ಅಂಚೆ ಇಲಾಖೆ. ಈ ನಿಟ್ಟಿನಲ್ಲಿ ಹಳ್ಳಿಯ ಅಂಚೆ ಕಚೇರಿಗಳಂತೂ ಮುಖ್ಯ ಪಾತ್ರ ವಹಿಸುತ್ತವೆ. ಅಂಚೆಯಣ್ಣಂದಿರು ಮನೆ ಬಾಗಿಲಿಗೇ ಸೇವೆ ನೀಡುವಲ್ಲಿ ಶ್ರಮಿಸುತ್ತಿದ್ದಾರೆ. ಏಪ್ರಿಲ್ 2023 ರಿಂದ ಎರಡು ವರ್ಷಗಳಿಗೆ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಘೋಷಿಸಿದ ಉಳಿತಾಯ ಯೋಜನೆ “ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ” Mahila Samman Saving Certificate(MSSC). ಸರ್ಕಾರದ ಹೇಳಿಕೆಯ […]

ರಾಷ್ಟ್ಟೀಯ ಯುವ ಪ್ರತಿಭೆಗಳ ಅಧಿವೇಶನ: ವಿಶೇಷ ಆಹ್ವಾನಿತ ಯೂತ್ ಐಕಾನ್ ಆಗಿ ಮನು ಶೆಟ್ಟಿ ಆಯ್ಕೆ

ಉಡುಪಿ: ಕೇಂದ್ರ ಸರಕಾರದ ಯುವಜನ ಮತ್ತು ಕ್ರೀಡಾ ಇಲಾಖೆ ವತಿಯಿಂದ ದೆಹಲಿಯ ಭಾರತ್ ಮಂಡಪಂನಲ್ಲಿ ನಡೆಯಲಿರುವ ಎರಡು ದಿನಗಳ ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್ ಅಧಿವೇಶನದಲ್ಲಿ ಭಾಗವಹಿಸಲು ಕರ್ನಾಟಕದಿಂದ “ವಿಶೇಷ ಆಹ್ವಾನಿತ ಯೂತ್ ಐಕಾನ್” ಆಗಿ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಮನು ಶೆಟ್ಟಿ ಆಯ್ಕೆಯಾಗಿದ್ದಾರೆ. ಇವರು ಉದ್ಯಮಿ ಇನ್ನಾ ಉದಯ ಶೆಟ್ಟಿ ಮತ್ತು ಜಿಪಂ ಮಾಜಿ ಸದಸ್ಯೆ ರೇಶ್ಮಾ ಉದಯ ಶೆಟ್ಟಿ ಅವರ ಪುತ್ರಿಯಾಗಿದ್ದಾರೆ. ವಿಕಸಿತ ಭಾರತದ ನಿರ್ಮಾಣದಲ್ಲಿ ಯುವ ಜನರ ಭಾಗವಹಿಸುವಿಕೆಯನ್ನು ಖಾತ್ರಿಗೊಳಿಸಲು […]

ತನಿಶ್ಕ್ ಮಂಗಳೂರಿನಲ್ಲಿ ಆಭರಣ ಪ್ರದರ್ಶನ ಮತ್ತು ಮಾರಾಟ ಆಯೋಜನೆ

ಮಂಗಳೂರು: ತನಿಶ್ಕ್, ಟಾಟಾ ಹೌಸ್‌ನಿಂದ ಹೊರಹೊಮ್ಮಿದ ಭಾರತದ ಅತಿದೊಡ್ಡ ಆಭರಣ ಬ್ರ್ಯಾಂಡ್, ಇದೀಗ ಮಂಗಳೂರಿನಲ್ಲಿ ವಿಶೇಷ ವೆಡ್ಡಿಂಗ್ ಕಲೆಕ್ಷನ್ ಪ್ರದರ್ಶನ ಮತ್ತು ಮಾರಾಟವನ್ನು ಹಮ್ಮಿಕೊಂಡಿದೆ. ಇದು ಪ್ರತಿಯೊಬ್ಬ ಮಹಿಳೆಯ ಆಭರಣ ಸಂಗ್ರಹವನ್ನು ಸಂಪೂರ್ಣಗೊಳಿಸುವ ಅತ್ಯುತ್ತಮ ಆಯ್ಕೆಯಾಗಿದೆ. ಈ ಪ್ರದರ್ಶನದಲ್ಲಿ ತನಿಶ್ಕ್ 20% ವರೆಗೆ ಡೈಮಂಡ್ ಆಭರಣಗಳ ಮೇಲೆ ರಿಯಾಯಿತಿಯನ್ನು ನೀಡುತ್ತದೆ. ಈ ಪ್ರದರ್ಶನವು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಸನ್ಮಾನ್ಯ ಶ್ರೀ ಯು.ಟಿ. ಖಾದರ್, ರೋಹನ್ ಕಾರ್ಪೊರೇಶನ್ನಿನ ಶ್ರೀ ರೋಹನ್ ಮೊಂತೇರೊ, ನಟಿ ಕುಮಾರಿ ವೆನ್ಸಿಟಾ ಡಯಸ್ ಇವರಿಂದ […]

ಉಡುಪಿ:ವಸುಧೈವ ಕುಟುಂಬಕಂ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ ಇದರ ಉದ್ಘಾಟನೆ ಹಾಗೂ ಸೇವಾ ಸಮ್ಮಿಲನ ಕಾರ್ಯಕ್ರಮ

ಉಡುಪಿ:ವಸುಧೈವ ಕುಟುಂಬಕಂ ಚಾರಿಟೆಬಲ್ ಟ್ರಸ್ಟ್ (ರಿ) ಉಡುಪಿ ಇದರ ಉದ್ಘಾಟನೆ ಹಾಗೂ ಸೇವಾ ಸಮ್ಮಿಲನ ಕಾರ್ಯಕ್ರಮ 29/12/2024 ಭಾನುವಾರದಂದು ಸ್ಪಂದನ ಆಶ್ರಮದ ವಿಶೇಷ ಮಕ್ಕಳೊಂದಿಗೆ ಹಾಗೂ ವಿವಿಧ ಕ್ಷೇತ್ರದ ಸಮಾಜ ಸೇವಕರೊಂದಿಗೆ ಸೀ ಬರ್ಡ್ ರೆಸಾರ್ಟ್‌ ಬೆಳ್ಳಂಪಳ್ಳಿ ಅತ್ರಾಡಿ ಯಲ್ಲಿ ನಡೆಸಲಾಯಿತು. ಸ್ಪಂದನದ ಮಕ್ಕಳಿಗೆ ಅಗತ್ಯ ವಿರುವ ಬಟ್ಟೆ ಪರಿಕರ ನೀಡಲಾಯಿತು. ಸಮಾಜ ಸೇವಕರಾದ ತನುಲಾ ಹೊಸಬೆಳಕು ಆಶ್ರಮ, ವಿಷು ಶೆಟ್ಟಿ ಅಂಬಲ್ಪಾಡಿ, ಜನಾರ್ಧನ್ ಸ್ಪಂದನ ಆಶ್ರಮ,ನಿತ್ಯಾನಂದ ಒಳ ಕಾಡು, ವಿನಯ ಚಂದ್ರ ಭಾಗವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಪ್ರಸಾದ್ […]