ಕಟಪಾಡಿ ತ್ರಿಶಾ ವಿದ್ಯಾ ಪಿಯು ಕಾಲೇಜಿನಲ್ಲಿ ಬಹುಮಾನ ವಿತರಣಾ ಸಮಾರಂಭ

ಕಟಪಾಡಿ: ಕಟಪಾಡಿಯ ತ್ರಿಶಾ ವಿದ್ಯಾ ಪಿಯು ಕಾಲೇಜಿನಲ್ಲಿ ಬಹುಮಾನ ವಿತರಣಾ ಸಮಾರಂಭವು ಡಿಸೆಂಬರ್ 27 ರಂದು ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ‌ ಪ್ಲೇಸ್ಮೆಂಟ್ ಮುಖ್ಯಸ್ಥರಾದ ಡಾ. ಮಂಜುನಾಥ್ ಸಿ ಕೆ ರವರು ಸತತ ಪರಿಶ್ರಮ ಮಾತ್ರ ಗೆಲುವು ಸಾಧ್ಯ. ಸೋಲುಗಳು ನಮ್ಮನ್ನು ಪರೀಕ್ಷಿಸುತ್ತವೆ. ನಾವು ಎದೆಗುಂದದೆ ಮತ್ತಷ್ಟು ಪ್ರಯತ್ನ‌ ಪಟ್ಟಾಗ ಗೆಲುವಿನ ದಾರಿ‌ ನಮ್ಮದಾಗುತ್ತದೆ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ತ್ರಿಶಾ ಸಂಸ್ಥೆಯ ಸಂಸ್ಥಾಪಕರು ಸಿಎ ಗೋಪಾಲಕೃಷ್ಣ ಭಟ್ ಅವರು […]

ಮಂಗಳೂರು: ಇಡಿ ಅಧಿಕಾರಿಗಳೆಂದು ಹೇಳಿ ಉದ್ಯಮಿ ಮನೆಗೆ ದಾಳಿ; ಸುಮಾರು 30 ಲಕ್ಷ ರೂ. ದರೋಡೆ.

ವಿಟ್ಲ: ದರೋಡೆಕೋರರು ಇಡಿ ಅಧಿಕಾರಿಗಳ ಶೈಲಿಯಲ್ಲಿ ಬೋಳಂತೂರು ಸಮೀಪದ ನಾರ್ಶದ ಉದ್ಯಮಿಯ ಮನೆಗೆ ದಾಳಿ ನಡೆಸಿ ಸುಮಾರು 30 ಲಕ್ಷ ರೂ. ದೋಚಿದ ಘಟನೆ ಜ.3 ರ ಶುಕ್ರವಾರ ತಡರಾತ್ರಿ ಬೆಳಕಿಗೆ ಬಂದಿದೆ. ಬಂಟ್ವಾಳ ತಾಲೂಕಿನ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿನ ನಿವಾಸಿ ಸುಲೈಮಾನ್ ಹಾಜಿ ಎಂಬವರು ಸಿಂಗಾರಿ ಬೀಡಿ ಸಂಸ್ಥೆಯನ್ನು ಅನೇಕ ವರ್ಷಗಳಿಂದ ನಡೆಸುತ್ತಿದ್ದಾರೆ. ಶುಕ್ರವಾರ ತಡರಾತ್ರಿ ಅವರ ಮನೆಗೆ ತಮಿಳುನಾಡು ಮೂಲದ ಕಾರಿನಲ್ಲಿ ಆಗಮಿಸಿದ ತಂಡವೊಂದು ದಾಳಿ ನಡೆಸಿದಂತೆ […]

ಗದಗ್ ನಲ್ಲಿ ಭೀಕರ ಅಪಘಾತ; ಡಿವೈಡರ್ ಗೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರು ಯುವಕರ ಸಾವು

ಗದಗ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಡಿವೈಡರ್ ಗೆ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಇಬ್ಬರು ಸಾವಿಗೀಡಾಗಿರುವ ಘಟನೆ ತಾಲೂಕಿನ ಶುಕ್ರವಾರ (ಜ.03) ತಡರಾತ್ರಿ ಹುಲಕೋಟಿ ಬಳಿ ನಡೆದಿದೆ. ಹೊಸಪೇಟೆ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಭೀಕರ ಅಪಘಾತ ಸಂಭವಿಸಿದ್ದು, ಮಹ್ಮದ್ ಜಾಯಿದ್ (18) ಹಾಗೂ ಸಂಜೀವ ಗಿರಡ್ಡಿ (15) ಎನ್ನುವ ಯುವಕರು ಮೃತ ದುರ್ದೈವಿಗಳಾಗಿದ್ದಾರೆ. ಆಶೀಸ್ ಗೂಡುರ್ ಹಾಗೂ ಚಾಲಕ ಸಪ್ತಗಿರಿ ಎಂಬುವರಿಗೆ ಗಂಭೀರ ಗಾಯಗಳಾಗಿದ್ದು, ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ತಡರಾತ್ರಿ ಈ […]

Swich Solar Solutions ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಮಂಗಳೂರು:ಸ್ವಿಚ್ ಸೋಲಾರ್ ಸೊಲ್ಯುಷನ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹುದ್ದೆಗಳು: 1. ಎಲೆಕ್ಟ್ರಿಕಲ್ ಇಂಜಿನಿಯರ್ (BE)(ಯೋಜನೆಗಳು ಮತ್ತು ಸೌರ ಯೋಜನೆಗಳನ್ನು ಕಾರ್ಯಗತಗೊಳಿಸುವ ಹಾಗೆ ನೋಡಿಕೊಳ್ಳಬೇಕು.) 2. ಎಲೆಕ್ಟ್ರಿಕಲ್ ಇಂಜಿನಿಯರ್ (Diploma)ಯೋಜನೆಯ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಮಧ್ಯಸ್ಥಗಾರರೊಂದಿಗೆ ಸಂಪರ್ಕ ಸಾಧಿಸುವುದು. ಸ್ಥಳ: ಮಂಗಳೂರು. ನಿಮ್ಮ ರೆಸ್ಯೂಮ್ ಅನ್ನು ಈ ನಂಬರ್ ಗೆ ವಾಟ್ಸಾಪ್ ಮಾಡಿ: 96450-84934/94481-32321 swich.in

ಸಂತೆಕಟ್ಟೆ ರಾ.ಹೆ. ಕಾಮಗಾರಿ; ಉಡುಪಿ-ಕುಂದಾಪುರ ಹೋಗುವ ಮೇಲ್ಸೇತುವೆ ಲಘು ವಾಹನ ಸಂಚಾರಕ್ಕೆ ಮುಕ್ತ

ಉಡುಪಿ: ಉಡುಪಿಯಲ್ಲಿ ಬಹಳ ವಿವಾದ ಎಬ್ಬಿಸಿದ್ದ ಕಲ್ಯಾಣಪುರ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಮಹತ್ವದ ಪ್ರಗತಿಯಾಗಿದೆ. ಪ್ರತಿನಿತ್ಯ ಎಂಬಂತೆ ಈ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಆಮೆ ಗತಿಯಲ್ಲಿ ಸಾಗುತ್ತಿರುವ ಕಾಮಗಾರಿಗೆ ರೋಸಿ ಹೋಗಿ ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಅಂಡರ್ ಪಾಸ್ ಕಾಮಗಾರಿ ನಡೆಯುವ ಸ್ಥಳದಲ್ಲಿ ಭಾರಿ ಪ್ರಮಾಣದ ಬಂಡೆಕಲ್ಲು ಪತ್ತೆಯಾಗಿ, ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಇದೀಗ ಕಾಮಗಾರಿಯನ್ನು ತೀವ್ರಗೊಳಿಸಿದ್ದು ಉಡುಪಿಯಿಂದ ಕುಂದಾಪುರಕ್ಕೆ ಹೋಗುವ ಮೇಲ್ ಸೇತುವೆ ಮಾರ್ಗದಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದರಿಂದಾಗಿ […]