ಥಾಣೆ:ಹೆರಿಗೆ ವೇಳೆ ಹೃದಯಾಘಾತ: ಮಹಿಳೆ, ಮಗು ಮೃತ್ಯು
ಥಾಣೆ: ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾದ ಮಹಿಳೆಯೊಬ್ಬರು ಹೆರಿಗೆ ಸಂದರ್ಭದಲ್ಲಿ ಹೃದಯಾಘಾತಗೊಂಡು ಮೃತಪಟ್ಟಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪಾಲ್ಘರ್ ನಲ್ಲಿ ಮಂಗಳವಾರ(ಡಿ.31) ರಾತ್ರಿ ನಡೆದಿದೆ. ವಿಕ್ರಮಗಡ ತಾಲೂಕಿನ ಗಲ್ತರೆ ಗ್ರಾಮದ ಮಹಿಳೆಯೊಬ್ಬರಿಗೆ ಮಂಗಳವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದೆ ಈ ವೇಳೆ ಕುಟುಂಬಸ್ಥರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆತಂದಿದ್ದಾರೆ ಆದರೆ ಮಹಿಳೆಗೆ ಹೆರಿಗೆ ನೋವು ಇದ್ದುದರಿಂದ ಹೆಚ್ಚಿನ ಚಿಕಿತ್ಸೆಗೆ ಜವಾಹರ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಹೇಳಿದ್ದಾರೆ ಅದರಂತೆ ಕುಟುಂಬ ಸದಸ್ಯರು ಸರಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮಹಿಳೆಗೆ ಹೆರಿಗೆ […]
ಉಡುಪಿ:ಉಚಿತ ದಂತ ಚಿಕಿತ್ಸಾ ಶಿಬಿರ
ಉಡುಪಿ:ಲಯನ್ಸ್ ಕ್ಲಬ್, ಲಿಯೋ ಕ್ಲಬ್ ಉಡುಪಿ ಇಂದ್ರಾಳಿ , ಹಾಗೂ ಜಯಂಟ್ಸ್ ಗ್ರೂಪ್ ಉಡುಪಿ , ಮಣಿಪಾಲ್ ಆಸ್ಪತ್ರೆ ದಂತ ನುರಿತ ವೈದ್ಯರ ಜಂಟಿ ಆಶ್ರಯದಲ್ಲಿ ದಿನಾಂಕ ಜ 05 ಶನಿವಾರ ಬೆಳ್ಳಿಗೆ 9 ರಿಂದ ಮದ್ಯಾಹ್ನ 1 ವರಗೆ ಇಂದ್ರಾಳಿ ಲಯನ್ಸ್ ಭವನ ” ಜಯಸಿಂಹ ” ರೈಲ್ವೆ ನಿಲ್ದಾಣ ರಸ್ತೆ ಇಂದ್ರಾಳಿ ಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಲಿದೆ ಸಂಸ್ಥೆಯ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಣಿಪಾಲ ಜ್ಞಾನಸುಧಾ : ಪ್ರತಿಭಾ ಕಾರಂಜಿಯಲ್ಲಿ ತನ್ಮಯಿ ಆರ್. ಆರಾಧ್ಯ ರಾಜ್ಯಮಟ್ಟಕ್ಕೆ ಆಯ್ಕೆ
ಮಣಿಪಾಲ:ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಜನವರಿ 2ರಂದು ದುರ್ಗಾ ಆಂಗ್ಲಮಾಧ್ಯಮ ಶಾಲೆ ಕೊಕ್ಕರ್ಣೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾ ನಗರದ ಪ್ರಥಮ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ತನ್ಮಯಿ ಆರ್. ಆರಾಧ್ಯ ಭರತನಾಟ್ಯದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಕುಂದಾಪುರದ ಎಂ. ರಾಜಶೇಖರ ಹಾಗೂ ಕಲ್ಪನಾ ಆರ್ ದಂಪತಿಯ ಸುಪುತ್ರಿ. ಸಾಧಕ ವಿದ್ಯಾರ್ಥಿನಿಯನ್ನು ಅಜೆಕಾರ್ ಪದ್ಮಗೋಪಾಲ್ […]
ಮಂಗಳೂರು:ಹಿಂದೂಸ್ತಾನಿ ಶಾಸ್ತ್ರೀಯ ಸ್ಪರ್ಧೆಗೆ ಅರ್ಜಿ ಆಹ್ವಾನ
ಮಂಗಳೂರು:ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಕುರಿತು ಆಸಕ್ತಿ ಹಾಗೂ ಸಂಗೀತಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಮಂಗಳೂರಿನ ಸಂಗೀತ ಭಾರತಿ ಫೌಂಡೇಶನ್ ಸಂಸ್ಥೆಯು ಫೆಬ್ರವರಿ 8 ಮತ್ತು 9ರಂದು ಯುವ ಮಹೋತ್ಸವ 2025 ಎಂಬ ಸಂಗೀತ ಸ್ಪರ್ಧೆಯನ್ನು ಮಂಗಳೂರಿನಲ್ಲಿ ಆಯೋಜಿಸಿದೆ. ಇದೊಂದು ರಾಷ್ಟ್ರಮಟ್ಟದ ಸ್ಪರ್ಧೆಯಾಗಿದ್ದು, 18 ರಿಂದ 30 ವರ್ಷದೊಳಗಿನ ಯುವ ಸಂಗೀತಗಾರರು ಭಾಗವಹಿಸಬಹುದು. ಭಾಗವಹಿಸುವ ಸ್ಪರ್ಧಿಗಳಿಗೆ ಆನ್‌ಲೈನ್‌ನಲ್ಲಿ ಆಯ್ಕೆ ನಡೆಯಲಿದೆ. ಅನ್‌ಲೈನ್‌ನ ಆಯ್ಕೆಗೆ ಜ.10 ಕೊನೆಯ ದಿನವಾಗಿದೆ. ಆಸಕ್ತರು yuva2025.sangeetbharati.org ನಲ್ಲಿ ಹೆಸರು ನೋಂದಾಯಿಸಿ ಭಾಗವಹಿಸಬಹುದಾಗಿದೆ.ವಾದ್ಯ (ತಬಲ ಮತ್ತು […]
ಮೂಡುಬಿದಿರೆ:ಕಂಬಳ ನಿಯಮ ಮೀರುವ ಸದಸ್ಯರಿಗೆ ನಿಷೇಧ:ಜಿಲ್ಲಾ ಕಂಬಳ ಸಮಿತಿ ಎಚ್ಚರಿಕೆ
ಮೂಡುಬಿದಿರೆ: ಕಂಬಳವನ್ನು ಸಮಯಪಾಲನೆ ಯೊಂದಿಗೆ ಶಿಸ್ತುಬದ್ಧವಾಗಿ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಗಂತಿನಲ್ಲಿ ಕೋಣಗಳನ್ನು ಬಿಡುವವರು ಅನಗತ್ಯವಾಗಿ ವಿಳಂಬ ಮಾಡಿದರೆ ಅಥವಾ ಮಂಜೊಟ್ಟಿ ಮತ್ತು ಗಂತಿನಲ್ಲಿ ಓಟಗಾರರು ಕೋಣಗಳಿಗೆ ಹೊಡೆದು ಹಿಂಸೆ ನೀಡುವುದು ಸಾಬೀತಾದರೆ ಅಂತವರು ಮುಂದಿನ ಎರಡು ಕಂಬಳಗಳಲ್ಲಿ ಬಾಗವಹಿಸಲು ನಿರ್ಬಂಧ ಹೇರಲಾಗುವುದು ಎಂದು ಜಿಲ್ಲಾ ಕಂಬಳ ಸಮಿತಿಖಡಕ್ ಎಚ್ಚರಿಕೆ ನೀಡಿದೆ. ಒಂಟಿಕಟ್ಟೆಯಲ್ಲಿರುವ ಸೃಷ್ಟಿ ಗಾರ್ಡನ್ ಸಭಾಭವನದಲ್ಲಿ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬೆಳಪು ಡಾ. ದೇವಿ ಪ್ರಸಾದ್ ಶೆಟ್ಟಿ ಅವರು ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಜಿಲ್ಲಾ […]