ಜ. 12 ರಂದು ಮೂರ್ತೆದಾರರ ಸೇವಾ ಸಹಕಾರಿ ಸಂಘ ಕೋಟ ಇಲ್ಲಿನ ಕೇಂದ್ರ ಕಛೇರಿಯ ಸ್ವಂತ ಕಟ್ಟಡ- ಸಭಾಭವನ ಉದ್ಘಾಟನಾ ಕಾರ್ಯಕ್ರಮ
ಕೋಟ: ಮೂರ್ತದಾರರ ಸೇವಾ ಸಹಕಾರಿ ಸಂಘ ನಿ. ಕೋಟ ಇದರ ಸಂಘದ ಕೇಂದ್ರ ಕಛೇರಿಯ ಸ್ವಂತ ಕಟ್ಟಡ ಹಾಗೂ ಮಾಜಿ ಮುಖ್ಯಮಂತ್ರಿ ದಿ| ಎಸ್. ಬಂಗಾರಪ್ಪ ಸ್ಮರಣಾರ್ಥ ಸಭಾಭವನ ಉದ್ಘಾಟನಾ ಸಮಾರಂಭ ಜನವರಿ 12 ರಂದು ನಡೆಯಲಿದೆ. ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಕೋಟ ಇಲ್ಲಿನ ಅಧ್ಯಕ್ಷರು ಆನಂದ ಸಿ. ಕುಂದರ್, ಡಾ|| ಕೆ. ಎಸ್ ಕಾರಂತ, ಅಧ್ಯಕ್ಷರು, ಶ್ರೀ ಗುರುನರಸಿಂಹ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಸಾಲಿಗ್ರಾಮ ಇವರು ಅಂದು ಬೆಳಗ್ಗೆ 8.30ಕ್ಕೆ ಚಾಲನೆ ನೀಡಲಿದ್ದಾರೆ. ಕೇಂದ್ರ […]
ಬೀಜಿಂಗ್: ಕೊರೋನ ವೈರಸ್ ಬಳಿಕ ಚೀನಾದಲ್ಲಿ ಮತ್ತೊಂದು ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ
ಬೀಜಿಂಗ್: 2020ರಲ್ಲಿ ವಿಶ್ವವನ್ನು ಕಾಡಿದ್ದ ಕೋವಿಡ್-19 ಸಾಂಕ್ರಾಮಿಕದ ಕರಿನೆರಳಿನಿಂದ ಹೊರಬಂದು, ದೇಶಗಳು ಸಹಜ ಸ್ಥಿತಿಯತ್ತ ಮರಳುತ್ತಿರುವಂತೆಯೇ ಚೀನದಲ್ಲಿ ಮತ್ತೊಂದು ಸಾಂಕ್ರಾಮಿಕ ಹರಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಆರಂಭವಾಗಿವೆ. ಹೌದು, ಇದಕ್ಕೆ ಪುಷ್ಟಿ ನೀಡುವಂತೆ ಚೀನದಲ್ಲಿ ಆಸ್ಪತ್ರೆಗಳು ರೋಗಿಗಳಿಂದ ತುಂಬು ತುಳುಕುತ್ತಿರುವ ವೀಡಿಯೋಗಳೂ ವೈರಲ್ ಆಗಿದೆ. ಟ್ವಿಟರ್‌ನಲ್ಲಿ ವ್ಯಕ್ತಿಯೊಬ್ಬರು ಈ ವೀಡಿಯೋ ಪೋಸ್ಟ್ ಮಾಡಿ, “ಚೀನದಲ್ಲಿ ಹೊಸ ಸಾಂಕ್ರಾಮಿಕದಿಂದ ಆಸ್ಪತ್ರೆಗಳು, ಶವಾಗಾರಗಳು ತುಂಬಿ ತುಳುಕುತ್ತಿದ್ದು, ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ವಿಷಮ ಶೀತ, ಜ್ವರ, ಕೋವಿಡ್ […]
ಕಟಪಾಡಿ:ಪ್ರತಿಭಾ ಕಾರಂಜಿಯಲ್ಲಿ ಭವೀಷ್ ಬೆಳ್ಳಾರೆ ರಾಜ್ಯ ಮಟ್ಟಕ್ಕೆ ಆಯ್ಕೆ
ಕಟಪಾಡಿ:ಶಾಲಾ ಶಿಕ್ಷಣ ವತಿಯಿಂದ ಜನವರಿ 2ರಂದು ದುರ್ಗಾ ಆಂಗ್ಲಮಾಧ್ಯಮ ಶಾಲೆ ಕೊಕ್ಕರ್ಣೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕಟಪಾಡಿಯ ತ್ರಿಶಾ ವಿದ್ಯಾ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಭವೀಷ್ ಬೆಳ್ಳಾರೆ ಕವನ ವಾಚನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳ ಪಂಚಮ ಆರಾಧನೋತ್ಸವ
ಉಡುಪಿ: ರಾಷ್ಟ್ರ ಸಂತ, ಹಿಂದುತ್ವದ ಪ್ರತಿಪಾದಕ, ದಲಿತ ಕೇರಿಗಳಿಗೆ ಭೇಟಿ ಕೊಡುವ ಮೂಲಕ ದೇಶದಲ್ಲಿ 60 ನೇ ದಶಕದಲ್ಲೇ ಸಂಚಲನ ಮೂಡಿಸಿದ್ದ ಪೇಜಾವರ ಶ್ರೀಗಳು ಬೃಂದಾವನಸ್ಥರಾಗಿ ಐದು ವರ್ಷ ಕಳೆಯಿತು. ಉಡುಪಿಯ ಪೇಜಾವರ ಮಠದಲ್ಲಿ ವಿಶ್ವೇಶತೀರ್ಥ ಶ್ರೀಗಳ ಪಂಚಮ ಆರಾಧನೋತ್ಸವ ನಡೆಯಿತು. ಸ್ವಾಮೀಜಿಗಳ ಭಾವಚಿತ್ರ ಪಾದುಕೆ ಇಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು ಮಠಕ್ಕೆ ಬರುವ ಭಕ್ತರಿಗೆ ಮಂತ್ರಾಕ್ಷತೆ, ವಿಶೇಷ ಪ್ರಸಾದ ವಿತರಿಸಲಾಯ್ತು.
ವಾಷಿಂಗ್ಟನ್:ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
ವಾಷಿಂಗ್ಟನ್: ಕೈಗಾರಿಕೋದ್ಯಮಿ ಗೌತಮ್ ಅದಾನಿ ಮತ್ತು ಇತರರ ವಿರುದ್ಧದ 265 ಮಿಲಿಯನ್ ಡಾಲರ್ ಲಂಚದ ಆರೋಪಕ್ಕೆ ಸಂಬಂಧಿಸಿದ (ಕ್ರಿಮಿನಲ್ ಹಾಗೂ ಸಿವಿಲ್) ಪ್ರಕರಣಗಳನ್ನು ಜಂಟಿಯಾಗಿ ವಿಚಾರಣೆ ನಡೆಸುವಂತೆ ನ್ಯೂಯಾರ್ಕ್ ಕೋರ್ಟ್ ಆದೇಶ ನೀಡಿರುವ ಮಹತ್ವದ ಬೆಳವಣಿಗೆ ನಡೆದಿರುವುದಾಗಿ ವರದಿ ತಿಳಿಸಿದೆ. ಪ್ರಕರಣದಲ್ಲಿ ಎದುರಿಸುತ್ತಿರುವ ಆರೋಪಗಳು ಮತ್ತು ಖಾತೆಯ ವಹಿವಾಟು ಒಂದೇ ತೆರನಾಗಿದೆ ಎಂಬುದು ಕಂಡು ಬಂದಿದ್ದರಿಂದ ಕೋರ್ಟ್ ಈ ಆದೇಶ ನೀಡಿರುವುದಾಗಿ ವರದಿ ವಿವರಿಸಿದೆ. ನ್ಯಾಯಾಲಯದ ದಕ್ಷತೆ ಉತ್ತೇಜಿಸಲು ಹಾಗೂ ವಿಚಾರಣೆ ದಿನ ನಿಗದಿಪಡಿಸುವ ಗೊಂದಲವನ್ನು ನಿವಾರಿಸುವ […]