ಮೂಡುಬಿದಿರೆ:ರಾಷ್ಟ್ರೀಯ ಸೀನಿಯರ್ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್: ಕರ್ನಾಟಕ ತಂಡ ಚಾಂಪಿಯನ್ಸ್ ರಾಜ್ಯ ತಂಡದಲ್ಲಿ 6 ಆಳ್ವಾಸ್ ವಿದ್ಯಾರ್ಥಿಗಳು.
ವಿದ್ಯಾಗಿರಿ:ಮಹಾರಾಷ್ಟ್ರದ ರಾಯಘಢ ಜಿಲ್ಲೆಯ ಕಾಮೋತೆಯಲ್ಲಿ ನಡೆದ 70 ನೇ ರಾಷ್ಟ್ರೀಯ ಸೀನಿಯರ್ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನಲ್ಲಿ ಕರ್ನಾಟಕ ಚಾಂಪಿಯನ್ ಆಗಿದ್ದು, ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಆರು ವಿದ್ಯಾರ್ಥಿಗಳು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. ವಿಜೇತ ತಂಡದಲ್ಲಿ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಆರು ಮಂದಿ ಆಟಗಾರರು ಭಾಗವಹಿಸಿದ್ದರು. ರಾಜ್ಯ ತಂಡದ ನಾಯಕಿ ಮೇಘನಾ ಎಚ್. ಎಂ., ಪಲ್ಲವಿ ಬಿ. ಎಸ್., ಸಹನಾ ಎಚ್. ವೈ, ಲಕ್ಷ್ಮಿ ದೇವಿ, ತನುಶ್ರೀ, ಗೀತಾ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ರಾಜ್ಯ ತಂಡದ […]
ಉಡುಪಿ:ಸಿ ಎ ಅಂತಿಮ ಪರೀಕ್ಷೆಯಲ್ಲಿ ಉಡುಪಿಯ ಧನುಷಾ ಭಟ್ ಉತ್ತೀರ್ಣ
ಉಡುಪಿ: ಸಿ ಎ ಗುಜ್ಜಡಿ ಪ್ರಭಾಕರ್ ನಾಯಕ್ ಇವರ ಮಾರ್ಗದರ್ಶನದಲ್ಲಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ನವೆಂಬರ್ 2024 ನೇ ಸಾಲಿನ ಸಿ ಎ ಅಂತಿಮ ಪರೀಕ್ಷೆಯಲ್ಲಿ ಉಡುಪಿ ಧನುಷಾ ಭಟ್ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ. ಇವರು ಉಡುಪಿ ತೆಂಕಪೇಟೆಯ ದೇವಾನಂದ ಭಟ್ ಮತ್ತು ದೀಪಿಕಾ ಭಟ್ ರವರ ದಂಪತಿ ಪುತ್ರಿ.ಇವರು ಗುಜ್ಜಾದಿ ನಾಯಕ್ ಅಸೋಸಿಯೇಟ್ಸ್ ನಲ್ಲಿ ಆರ್ಟಿಕಲ್‌ಶಿಪ್ ತರಬೇತಿ ಪಡೆಯುತ್ತಿದ್ದಾರೆ.
ಸಿ. ಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ – ಶ್ರೀ ವೆಂಕಟರಮಣ ಕಾಲೇಜಿನ ವಿದ್ಯಾರ್ಥಿಗಳು ಉತ್ತೀರ್ಣ.
ಉಡುಪಿ: ಭಾರತೀಯ ಲೆಕ್ಕಪರಿಶೋಧಕರಸಂಸ್ಥೆ(ಐಸಿಎಐ) ನವೆಂಬರ್ ತಿಂಗಳಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ರಮ್ಯಾ ಎನ್. ಎಸ್ ಮತ್ತು ಸ್ವಾತಿ ಪೈ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿನಿಯರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿ ಅಭಿನಂದಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.
ಕಾರ್ಕಳ:ಶ್ಯಾಮ್ ಸುಂದರ್ ಅವರಿಗೆ ಮಿಸ್ಟರ್ ಕರ್ನಾಟಕ ಪ್ರಶಸ್ತಿ
ನಿಟ್ಟೆ: ಕಾರ್ಕಳದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ಯಾಮ್ ಸುಂದರ್ ಎಂ ಅವರು ಇತ್ತೀಚೆಗೆ ಉಡುಪಿಯಲ್ಲಿ ನಡೆದ ರಾಜ್ಯ ಮಟ್ಟದ ಮಿಸ್ಟರ್ ಕರ್ನಾಟಕ ಅತ್ಯುತ್ತಮ ದೈಹಿಕ ಸ್ಪರ್ಧೆಯಲ್ಲಿ ಮಾಸ್ಟರ್ಸ್-3 ವಿಭಾಗದಲ್ಲಿ ಚಿನ್ನದ ಪದಕವನ್ನು ಗಳಿಸಿದ್ದಾರೆ.
ಉಡುಪಿ: ರಸ್ತೆ ಬದಿ ನಿಂತಿದ್ದ ಮಹಿಳೆಗೆ ಬೈಕ್ ಡಿಕ್ಕಿ; ಮಹಿಳೆ ಮೃತ್ಯು.
ಶಿರ್ವ: ಬೈಕೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಡಿ.30ರಂದು ಬೆಳಗ್ಗೆ ಕುತ್ಯಾರು ಜಂಕ್ಷನ್ ಸಮೀಪದ ಶೈನ್ಸ್ ಬೇಕರಿ ಎದುರು ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿ ಸುನೀತಾ(55) ಎಂದು ಗುರುತಿಸಲಾಗಿದೆ. ಶಿರ್ವ ಕಡೆಯಿಂದ ಕಟಪಾಡಿ ಕಡೆಗೆ ಹೋಗುತ್ತಿದ್ದ ಬೈಕ್, ರಸ್ತೆ ದಾಟಲು ರಸ್ತೆ ಬದಿ ನಿಂತಿದ್ದ ಸುನೀತಾ ಅವರಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರ ಪರಿಣಾಮ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಅವರು, ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ […]