ಉಡುಪಿ: ಕಾರಿನಲ್ಲೇ ಬರ್ಗರ್ ತಿಂದು ರಸ್ತೆಗೆ ಕಸ ಎಸೆದ ಪುಡಾರಿಗಳು

ಉಡುಪಿ: ಇಬ್ಬರು ಯುವಕರು ಕಾರಿನಲ್ಲಿ ಕುಳಿತು ಬರ್ಗರ್ ತಿಂದು ರಸ್ತೆಗೆ ಕಸ ಎಸೆದು ಹೋದ ಘಟನೆ ಉಡುಪಿ ನಗರದ ಬನ್ನಂಜೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಉಡುಪಿಯ ಬನ್ನಂಜೆ ಬಳಿ ಕಾರು ನಿಲ್ಲಿಸಿ ಯುವಕರು ತಿಂಡಿ ತಿನ್ನುತ್ತಿದ್ದರು. ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದ ಬರ್ಗರ್ ತಿನ್ನುತ್ತಾ ಕಸವನ್ನು ರಸ್ತೆಗೆ ಎಸೆಯುತ್ತಿದ್ದಾಗ ಬೈಕ್ ಸವಾರರೊಬ್ಬರು ಪ್ರಶ್ನೆ ಮಾಡಿದ್ದಾರೆ. ಬಳಿಕ ಮೊಬೈಲ್ ನಲ್ಲಿ ಚಿತ್ರೀಕರಿಸುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಂತೆ ಯುವಕರು ಏಕಾಏಕಿ ಅತೀ ವೇಗದಲ್ಲಿ ಕಾರು ಚಲಾಯಿಸಿ […]

ಉಡುಪಿ ಶ್ರೀಕೃಷ್ಣಮಠದಲ್ಲಿ ಗೀತೋತ್ಸವ ಸಂಪನ್ನ

ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಗೀತಾ ಜ್ಞಾನೋತ್ಸವ ದೊಂದಿಗೆ ಅದ್ಧೂರಿಯಾಗಿ ಮಂಗಳೋತ್ಸವ ನಡೆಯಿತು. ಪರ್ಯಾಯ ಪುತ್ತಿಗೆ ಮಠದ ಉಭಯ ಶ್ರೀಪಾದರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬೃಹತ್ ಗೀತೋತ್ಸವದ ಅಂಗವಾಗಿ ಕಲಾ ಸಂಸ್ಕೃತಿಯ ದ್ಯೋತಕವಾದ ಹರಿಕಥೆ, ಯೋಗನೃತ್ಯ, ನೃತ್ಯಗೀತೆ, ಯಕ್ಷಗಾನ, ಸಂಕೀರ್ತನೆ, ಕೊರವಂಜಿ, ಕುಣಿತ ಭಜನೆ, ಕೇರಳ ನೃತ್ಯ, ದಾಂಡಿಯಾ ನಡೆಯಿತು. ದಶಾವತಾರ, ಹಾಗೂ ಪಾಲುಗೊಡಲೊಡೆಯ ಬಾರೋ ಹಾಡಿನ ಮೂಲಕ ಪಾರ್ಥಸಾರಥಿ ಶ್ರೀ ಕೃಷ್ಣನ ರಥೋತ್ಸವವು ಜರುಗಿತು. ಪುತ್ತಿಗೆ ಶ್ರೀಪಾದರು ಶ್ರೀ ಕೃಷ್ಣನಿಗೆ […]

ಮಣಿಪಾಲದ ಆಶ್ಲೇಷ್ ಹೋಟೆಲ್ ನಲ್ಲಿ 2025ರ ಹೊಸ ವರ್ಷದ ಬೊನಾಂಜಾ ಸಂಭ್ರಮಾಚರಣೆ

ಉಡುಪಿ: ಮಣಿಪಾಲ ಆಶ್ಲೇಷ್ ಹೋಟೆಲ್ ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಮೋಜು ಮಸ್ತಿ ಯೊಂದಿಗೆ ಅಭಿಜಿತ್ ಶೆಣೈ ಮತ್ತು ತಂಡದವರಿಂದ ಮನೋರಂಜನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಲೋಕೇಶ್ ಸಂಪಿಗೆ ಇವರಿಂದ ಕೊಳಲು, ಅಭಿಜಿತ್ ಶೆಣೈ ರಿದಮ್, ಹಾಗೂ ಸತೀಶ್ ಅವರು ಕೀಬೋರ್ಡ್ ನುಡಿಸಲಿದ್ದಾರೆ. ಇಂದು (ಡಿಸೆಂಬರ್ 31) ರಾತ್ರಿ 7.30 ಉಚಿತ ಪ್ರವೇಶದೊಂದಿಗೆ ನಿಮ್ಮ ಟೇಬಲ್ ಅನ್ನು ಈಗಲೇ ಬುಕ್ ಮಾಡಿ. 📞9739271272 📞9739273422 ಸ್ಥಳ: ಆಶ್ಲೇಷ್ ಬಿಲ್ಡಿಂಗ್, ಎಂಐಟಿ ಕಾರ್ಕಳ ರೋಡ್ ಎದುರು ಮಣಿಪಾಲ.

ಮಣಿಪಾಲ: ಗುಡ್ಡಗಾಡು ಪ್ರದೇಶದಲ್ಲಿ ಅಗ್ನಿ‌ ಅವಘಡ: ತಪ್ಪಿದ ಭಾರೀ ಅನಾಹುತ

ಉಡುಪಿ: ಯಾರೋ ಕಿಡಿಗೇಡಿಗಳು ಸಿಗರೇಟು ಸೇದಿ ಬಿಸಾಡಿದ ಪರಿಣಾಮ ಗುಡ್ಡಗಾಡು ಪ್ರದೇಶಕ್ಕೆ ಬೆಂಕಿ ಹತ್ತಿಕೊಂಡು ಘಟನೆ 80 ಬಡಗಬೆಟ್ಟು ಗ್ರಾಮದ ಮಂಚಿಕೆರೆ ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಹುಲ್ಲಿಗೆ ಹತ್ತಿಕೊಂಡ ಬೆಂಕಿಯ‌ ಕೆನ್ನಾಲಿಗೆ ಕಾಡಿಗೂ ವ್ಯಾಪಿಸಿದೆ. ಸಮೀಪದಲ್ಲಿರುವ ಮನೆಗಳವರೆಗೂ ಬೆಂಕಿ ವ್ಯಾಪಿಸಿದ್ದು, ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ. ಬೆಂಕಿಯ ಆರ್ಭಟಕ್ಕೆ ಹುಲ್ಲುಗಾವಲು ಹಾಗೂ ಮರಗಿಡಗಳು ಸುಟ್ಟು ಹೋಗಿವೆ. ಬೆಂಕಿ ಬಿದ್ದದನ್ನು ಕಂಡ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ಇಲಾಖೆಗೆ ಮಾಹಿತಿ ರವಾನಿಸಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ‌ […]

ಮಂಗಳೂರು:ಕೊಂಕಣಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಆಹ್ವಾನ ಬಿಡುಗಡೆ

ಕೊಂಕಣಿ ಭಾಷಾ ಮಂಡಳಿ ಕರ್ನಾಟಕವು ತನ್ನ ಸ್ಥಾಪನಾ ದಿನದ ಪ್ರಯುಕ್ತ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಜೊತೆಯಲ್ಲಿ ಜ.4 ಒಂದು ದಿನದ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಆಯೋಜನೆ ಮಾಡಿದ್ದು ಕರ್ನಾಟಕ ಮತ್ತು ಗೋವಾದ ವಿವಿಧ ಕೊಂಕಣಿಯ ಮಾತೃಭಾಷೆ ಇರುವ ಮುನ್ನೂರು ಕೊಂಕಣಿ ವಿದ್ಯಾರ್ಥಿಗಳು ಭಾಗವಹಿಸಲು ನೊಂದಣಿ ಮಾಡಿದ್ದಾರೆ. ಈ ಸಮ್ಮೇಳನದ ಅಹ್ವಾನ ಬಿಡುಗಡೆ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯ ಇದರ ಕುಲಪತಿ ಡಾ ಪಾ ಪ್ರವೀಣ್ ಮಾರ್ಟಿಸ್ ಮಾಡಿದರು. ಗೋವಾ ಕೊಂಕಣಿ ಅಕಾಡೆಮಿಯ ಅಧ್ಯಕ್ಷರಾದ ವಸಂತ್ ಭಾಗ್ವತ್ […]