ರಾಷ್ಟ್ರೀಯ ಹೆದ್ದಾರಿ ಸಾಸ್ತಾನ ಟೋಲ್‌ನ ಸಮೀಪದ ಸ್ಥಳೀಯರಿಗೆ ಸುಂಕ ವಿನಾಯಿತಿ: ಸಂಸದ ಕೋಟಾ ಶ್ರೀನಿವಾಸ ಪೂಜಾರಿ
![](https://udupixpress.com/wp-content/uploads/2024/12/IMG_20241230_204219-1024x461.jpg)
ಉಡುಪಿ: ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಸಾಸ್ತಾನ ಸುಂಕ ವಸೂಲಾತಿ ಕೇಂದ್ರದ ಸ್ಥಳೀಯ ಜನರ ವಾಹನಗಳಿಗೆ ಈ ಹಿಂದೆ ನೀಡುತ್ತಿದ್ದಾ ಹಾಗೆ ರಿಯಾಯಿತಿಯಲ್ಲಿ ಕಲ್ಪಿಸಬೇಕೆಂದು ಉಡುಪಿ – ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಗುತ್ತಿಗೆದಾರರಿಗೆ ತಿಳಿಸಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟೀಯ ಹೆದ್ದಾರಿ ಟೋಲ್ ಶುಲ್ಕ ವಸೂಲಾತಿಗೆ ಸಂಬಂಧಿಸಿದಂತೆ ಟೋಲ್ ಗಳಲ್ಲಿ ಸ್ಥಳೀಯ ವಾಹನಗಳಿಗೆ ವಿನಾಯಿತಿ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಸಭೆಯ ಅಧ್ಯಕ್ಷತೆ […]
ಉಡುಪಿ ಜಿಲ್ಲೆಯಲ್ಲಿ ಹೊಸ ವರ್ಷಾಚರಣೆಗೆ ಕಟ್ಟುನಿಟ್ಟಿನ ಸೂಚನೆ
![](https://udupixpress.com/wp-content/uploads/2024/12/IMG_20241230_195031.jpg)
ಉಡುಪಿ: ಜಿಲ್ಲೆಯಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಅಹಿತಕರ ಘಟನೆ ತಡೆಯುವ ಉದ್ದೇಶದಿಂದ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಅರುಣ್ ಕೆ. ಅವರು, ಹೊಸ ವರ್ಷಾಚರಣೆಗೆ ಡಿ.31ರ ರಾತ್ರಿ 12.30ರ ವರೆಗೆ ಸಮಯ ನಿಗದಿ ಮಾಡಲಾಗಿದೆ. ಶಬ್ದ ಮಾಲಿನ್ಯವಾಗದಂತೆ ಧ್ವನಿವರ್ಧಕಗಳನ್ನು ರಾತ್ರಿ 10 ಗಂಟೆ ವರೆಗೆ ಮಾತ್ರ ಬಳಸಬಹುದು. ನೈತಿಕ ಪೊಲೀಸ್‌ಗಿರಿ, ಅನುಚಿತ ವರ್ತನೆ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರಗಿಸಲಾಗುವುದು ಎಂದು ಸಾರ್ವಜನಿಕರಿಗೆ ವಿಶೇಷ […]
ಮಣಿಪಾಲ: ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿ, ನೇಣುಕುಣಿಕೆ ತುಂಡಾಗಿ ಸಾವು !
![](https://udupixpress.com/wp-content/uploads/2024/12/IMG_20241230_173932.jpg)
ಉಡುಪಿ: ವ್ಯಕ್ತಿಯೊಬ್ಬರು ಮನೆಯ ಮೊದಲ ಅಂತಸ್ತಿನ ಮೇಲ್ಪಾವಣೆಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುತ್ತಿದ್ದಾಗ, ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ 80 ಬಡಗುಬೆಟ್ಟು ಗ್ರಾಮದ ನವಗ್ರಹ ಕಾಲೋನಿಯಲ್ಲಿ ಸಂಭವಿಸಿದೆ. ಈ ವ್ಯಕ್ತಿ ನೇಣು ಕುಣಿಕೆಯಲ್ಲಿ ನರಳಾಡುತ್ತಿದ್ದಾಗ, ದೇಹದ ಭಾರದಿಂದ ಹಗ್ಗ ತುಂಡಾದ ಪರಿಣಾಮ ವ್ಯಕ್ತಿ 20 ಅಡಿಗಿಂತಲೂ ಎತ್ತರದಿಂದ ಮನೆಯ ಹೊರಾಂಗಣದಲ್ಲಿ ಬಿದ್ದಿದ್ದಾರೆ. ತಲೆ ಭಾಗಕ್ಕಾದ ಗಂಭೀರ ಸ್ವರೂಪದ ಗಾಯದಿಂದ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಎಫ್.ಜೆ.ಎ. ಫೆರ್ನಾಂಡಿಸ್ ಎಂಬವರ ಪುತ್ರ ಮೆಸ್ರಾಯ್ (55) ಎಂದು ಗುರುತಿಸಲಾಗಿದೆ. […]
ಹೆಜಮಾಡಿ: ಅಮವಾಸ್ಯೆಯಂದು ಸಮುದ್ರದಲ್ಲಿ ಮುಳುಗಿ ಇಬ್ಬರು ಯುವಕರು ಮೃತ್ಯು
![](https://udupixpress.com/wp-content/uploads/2024/12/IMG_20241230_170803.jpg)
ಉಡುಪಿ: ಅಮವಾಸ್ಯೆಯಂದು ಸಮುದ್ರಕ್ಕೆ ಸ್ನಾನ ಮಾಡಲು ತೆರಳಿದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಹೆಜಮಾಡಿ ಸಮುದ್ರ ತೀರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಮೃತರನ್ನು ಹೆಜಮಾಡಿಯ ಅಕ್ಷಯ್ ಮತ್ತು ಚಿರಾಗ್ ಅಮೀನ್ ಎಂದು ಗುರುತಿಸಲಾಗಿದೆ. ಎಳ್ಳಾಮವಾಸ್ಯೆ ಪ್ರಯುಕ್ತ ಆರು ಮಂದಿ ಹೆಜಮಾಡಿ ಸಮುದ್ರಕ್ಕೆ ತೀರ್ಥ ಸ್ನಾನ ಮಾಡಲೆಂದು ತೆರಳಿದ್ದರು. ಈ ವೇಳೆ ಸಮುದ್ರದಲೆಗಳ ಸೆಳೆತಕ್ಕೆ 6 ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಆ ಪೈಕಿ ನಾಲ್ವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಆದರೆ ಇನ್ನುಳಿದ […]
ದಿಗ್ವಿಜಯ ಭಾರಿಸಿದ ಕಾಂಡೋಮ್ : 2024 ಆನ್ ಲೈನ್ ಶಾಪಿಂಗ್ ನಲ್ಲಿ ಕಾಂಡೋಮ್ ಭರ್ಜರಿ ಸೇಲ್!
![](https://udupixpress.com/wp-content/uploads/2024/12/a-condom-which-may-cause-an-allergic-reaction-to-1024x683.jpg)
ಆನ್ಲೈನ್ ಶಾಪಿಂಗ್ ನಲ್ಲಿ ಪ್ರತೀವರ್ಷವೂ ಒಂದೊಂದು ಉತ್ಪನ್ನಗಳು ಸದ್ದು ಮಾಡುತ್ತಿರುತ್ತದೆ. ಆನ್ ಲೈನ್ ಮಾರುಕಟ್ಟೆಗಳಿಗೆ ವೇದಿಕೆ ಕಲ್ಪಿಸುವ ಕಂಪೆನಿಗಳು ವರ್ಷಾಂತ್ಯದ ಕೊನೆಗೆ ತಮ್ಮಲ್ಲಿ ಈ ವರ್ಷ ಜಾಸ್ತಿಯಾಗಿ ಮಾರಾಟವಾದ ವಸ್ತು ಯಾವುದು ಎನ್ನುವುದನ್ನು ಬಹಿರಂಗಪಡಿಸುತ್ತದೆ. ಇ-ಕಾಮರ್ಸ್ ದೈತ್ಯ ಸ್ವಿಗ್ಗಿ ತನ್ನ ಆನ್‌ಲೈನ್ ಶಾಪಿಂಗ್ ವಿವರಗಳನ್ನು ಬಹಿರಂಗಪಡಿಸಿದೆ. ಈ ವರ್ಷ ಭರ್ಜರಿಯಾಗಿ ಸೇಲ್ ಆದ ಉತ್ಪನ್ನಗಳಲ್ಲಿ ಮೊದಲೇ ಸ್ಥಾನವನ್ನು ಕಾಂಡೋಮ್ ಬಾಚಿಕೊಂಡಿದೆ ಎನ್ನುವುದು ಇಂಟರೆಸ್ಟಿಂಗ್ ಸಂಗತಿ. ಹೌದು. ಸ್ವಿಗ್ಗಿ ಇನ್‌ಸ್ಟಾಮಾರ್ಟ್ – 2024 ಎಂಬ ಶೀರ್ಷಿಕೆಯ ವರದಿಯನ್ನು ಬಿಡುಗಡೆ […]