ಉಡುಪಿ: ವಡ್ಡರ್ಸೆ ರಘುರಾಮ್ ಶೆಟ್ಟಿ ಪ್ರಶಸ್ತಿಗೆ ರವಿ ಹೆಗಡೆ ಆಯ್ಕೆ.

ಉಡುಪಿ: ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘ ಆಶ್ರಯದಲ್ಲಿ ಕೊಡಮಾಡುವ 2024ನೇ ಸಾಲಿನ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಕನ್ನಡಪ್ರಭಾ ಪತ್ರಿಕೆಯ ಪ್ರಧಾನ ಸಂಪಾದಕ, ಹಿರಿಯ ಪತ್ರಕರ್ತ ರವಿ ಹೆಗಡೆ ಆಯ್ಕೆಯಾಗಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸಿದ ಗಣ್ಯರಿಗೆ ಬ್ರಹ್ಮಾವರ ಪತ್ರಕರ್ತರ ಸಂಘವು ವಡ್ಡರ್ಸೆಯವರ ಹೆಸರಿ ನಲ್ಲಿ ಈ ಪ್ರಶಸ್ತಿಯನ್ನು ನೀಡುತ್ತ ಬಂದಿದೆ. ಜ.11ರಂದು ಸಂಜೆ 5ಗಂಟೆಗೆ ಬ್ರಹ್ಮಾವರ ಬಂಟರ ಭವನದಲ್ಲಿ ಗಣ್ಯರ ಉಪಸ್ಥಿತಿ ಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ ಎಂದು ಸಂಘ ಪ್ರಕಟನೆ […]
ಉಡುಪಿ: ಸಿಎ ಪರೀಕ್ಷೆ ರಾಮಚಂದ್ರ ಪೈ ತೇರ್ಗಡೆ

ಉಡುಪಿ: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ ನವೆಂಬರ್ ತಿಂಗಳಲ್ಲಿ ನಡೆಸಿದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಹರಿಖಂಡಿಗೆಯ ಕಂದೇಲ್ ಬೆಟ್ಟು ಸಾಂತಪ್ಪ ಪೈ ಮತ್ತು ಅನುರಾಧ ಪೈ ದಂಪತಿಯ ಪುತ್ರ ರಾಮಚಂದ್ರ ಪೈ ಅವರು ತೇರ್ಗಡೆಯಾಗಿದ್ದಾರೆ. ಇವರು ಸಿಎ ಗಿರೀಶ್ ಪೈ ಬಿ. ಬ್ರಹ್ಮಾವರ ಮಾರ್ಗದರ್ಶನದಲ್ಲಿ ಆರ್ಟಿಕಲ್ ಶಿಪ್ ಮುಗಿಸಿದ್ದಾರೆ.
ಉಡುಪಿ: ಕೊಡವೂರು ಬ್ರಾಹ್ಮಣ ಮಹಾಸಭಾ ದಿನದರ್ಶಿಕೆ ಬಿಡುಗಡೆ.

ಉಡುಪಿ: ಕೊಡವೂರು ಬ್ರಾಹ್ಮಣ ಮಹಾ ಸಭಾದ ವತಿಯಿಂದ ಹೊಸ ವರುಷ 2025 ನೇ ಸಾಲಿನ ದಿನದರ್ಶಿಕೆಯನ್ನು ಕಡಿಯಾಳಿ ದೇವಸ್ಥಾನದ ಅಧ್ಯಕ್ಷರಾದ ವಿಜಯರಾಘವ ರಾವ್ ಬಿಡುಗಡೆಗೊಳಿಸಿ ದಿನದರ್ಶಿಕೆಯಲ್ಲಿ ಮುದ್ರಿತಗೊಂಡಿರುವ ವಿಷಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಾಧ್ಯಕ್ಷರಾದ ಶ್ರೀನಿವಾಸ ಉಪಾಧ್ಯಾಯ ಸ್ವಾಗತಿಸಿ, ಸಮರ್ಥ್ ಸಂತೋಷ ಸಾಮಗ ಪ್ರಾರ್ಥಿಸಿದರು. ಗೌರವಾಧ್ಯಕ್ಷ ನಾರಾಯಣ ಬಲ್ಲಾಳ್, ಕಾರ್ಯದರ್ಶಿ ಪ್ರವೀಣ್ ಬಲ್ಲಾಳ್, ದಿನದರ್ಶಿಕೆ ವಿನ್ಯಾಸಗೊಳಿಸಿದ ಪೂರ್ಣಿಮಾ ಜನಾರ್ದನ್ ಉಪಸ್ಥಿತರಿದ್ದರು. ಕೋಶಾಧಿಕಾರಿ ಚಂದ್ರಶೇಖರ್ ರಾವ್ ವಂದಿಸಿದರು. ರಾಜ ಶ್ರೀ ಪ್ರಸನ್ನ ನಿರೂಪಿಸಿದರು.
ಸಾಲಿಗ್ರಾಮ ದೇವಸ್ಥಾನಕ್ಕೆ ನಿರ್ದೇಶಕ, ನಟ ಉಪೇಂದ್ರ ಭೇಟಿ

ಉಡುಪಿ: ಸಾಲಿಗ್ರಾಮ ದೇವಸ್ಥಾನಕ್ಕೆ ಇಂದು ಖ್ಯಾತ ಚಿತ್ರ ನಿರ್ದೇಶಕ ಮತ್ತು ನಟ ಉಪೇಂದ್ರ ಅವರು ಭೇಟಿ ದರ್ಶನ ಮಾಡಿದರು. ತಮ್ಮ ಕುಲದೇವರಾದ ಶ್ರೀಗುರುನರಸಿಂಹ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ ಕೆ. ಎಸ್ ಕಾರಂತರು ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು. ಉಪೇಂದ್ರ ಅವರಿಗೆ ನಿರ್ಮಾಪಕ ಲಹರಿ ವೇಲು ಸಾಥ್ ನೀಡಿದರು. ಆಡಳಿತ ಮಂಡಳಿಯ ಸದಸ್ಯರಾದ ಕೆ. ಅನಂತಪದ್ಮನಾಭ ಐತಾಳ್ ಉಪಸ್ಥಿತರಿದ್ದರು.
ಉಡುಪಿ:ತ್ರಿಶಾ ಕ್ಲಾಸಸ್ : ಸಿ ಎ ಫೈನಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಫಲಿತಾಂಶ

ತ್ರಿಶಾ ಕ್ಲಾಸಸ್ : ಸಿ ಎ ಫೈನಲ್ ಪರೀಕ್ಷೆಯಲ್ಲಿ ಸಚಿನ್ ಬಿ ಉತ್ತೀರ್ಣ ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ (ಐಸಿಎಐ) ನವೆಂಬರ್ 2024ರಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಸಚಿನ್ ಬಿ ಅವರು ಉತ್ತೀರ್ಣರಾಗಿದ್ದಾರೆ. ಇವರು ಹಿರಿಯಡ್ಕದ ಬೋಜ ಕುಲಾಲ್ ಹಾಗೂ ಹೇಮ ಬಿ ದಂಪತಿಗಳ ಪುತ್ರರಾಗಿದ್ದು, ತಮ್ಮ ಆರ್ಟಿಕಲ್ ಶಿಪ್ ನ್ನು ಬಿ ವಿ ಸಿ & ಕಂಪೆನಿ ಉಡುಪಿ ಸಂಸ್ಥೆಯಲ್ಲಿ ಪೂರೈಸಿಕೊಂಡಿದ್ದಾರೆ. ಸಿಎ ಫೌಂಡೇಶನ್,ಇಂಟರ್ಮೀಡಿಯಟ್ ತರಬೇತಿಯನ್ನು ತ್ರಿಶಾ ಕ್ಲಾಸಸ್ ನಲ್ಲಿ ಪಡೆದುಕೊಂಡಿದ್ದಾರೆ. ತ್ರಿಶಾ ಕ್ಲಾಸಸ್: ಸಿ […]